ಸೋಲಾರ್ ಘಟಕಗಳಿಗೆ ಸಿಬ್ಬಂದಿ ನೇಮಿಸುವಂತೆ ಮನವಿ.
ಪಾವಗಡ : ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಘಟಕ ಎಂಬ ಹೆಗ್ಗಳಿಕೆ ಇರುವ ತಾಲೂಕಿನ ತಿರುಮಣಿಯಲ್ಲಿರುವ ಸೋಲಾರ್ ಘಟಕಗಳಿಗೆ ಪೂರ್ಣಪ್ರಮಾಣದ ಸಿಬ್ಬಂದಿಯನ್ನು ನೇಮಿಸುವಂತೆ . ತಿರುಮಣಿಯ ಶಕ್ತಿ ಸ್ಥಳ ರೈತ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಆರ್.ಪಿ ಸಾಂಬ ಸದಾಶಿವ ರೆಡ್ಡಿ . ಆಂಪ್ಲಸ್ ಸೋಲಾರ್ ಘಟಕದ ಇಂಜಿನಿಯರ್ ಸುನಿಲ್ ಪಾರ್ಥೋ ರವರಿಗೆ ಮನವಿ ಪತ್ರ ಸಲ್ಲಿಸಿದರು.
ತಿರುಮಣಿ ಹಾಗೂ ವಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 40 ಸೋಲಾರ್ ಘಟಕಗಳಿದ್ದು, ಪ್ರತಿ ಘಟಕಕ್ಕೆ ನಿಯಮಾನುಸಾರ 15ಜನ ಸೆಕ್ಯೂರಿಟಿ ಗಾರ್ಡ್ ಹಾಗೂ 4-5 ತಾಂತ್ರಿಕ ಸಲಹಕಗಾರರ ನೇಮಕಾತಿ ಮಾಡಿಕೊಳ್ಳಬೇಕಾಗಿದ್ದುಆದರೆ ಕೆಲವು ಘಟಕಗಳಲ್ಲಿ ಕಡಿಮೆ ಸಿಬ್ಬಂದಿ ನೇಮಕ ಮಾಡಿಕೊಂಡು ಕಡಿಮೆ ಸಿಬ್ಬಂದಿಗೆ ಒತ್ತಡ ಹೆಚ್ಚಾಗಿ, ಕೆಲವರಿಗೆ ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆ ಎದುರಾಗಿದೆ.
ಶೀಘ್ರವೇ ಕಾನೂನಿನ ಪ್ರಕಾರವಾಗಿ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲವಾದರೆ ಸಂಘದ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶಕ್ತಿ ಸ್ಥಳ ರೈತ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಮಾರುತಿ ಉಪಸ್ಥಿತರಿದ್ದರು.