ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ ಸುಗಮ.
ಪಾವಗಡ : ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಗಮವಾಗಿ ನಡೆಯಿತು, ಪ್ರಥಮ ಭಾಷೆ ಕನ್ನಡ ಅಥವಾ ಆಂಗ್ಲ ಭಾಷೆ ಪಡೆದ ಮಕ್ಕಳು ಪರೀಕ್ಷೆ ಬರೆದರು.
ತಾಲೂಕಿನಾದ್ಯಂತ 12 ಪರೀಕ್ಷೆ ಕೇಂದ್ರಗಳನ್ನು ಏರ್ಪಾಟು ಮಾಡಲಾಗಿದ್ದು. 2740 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣೆ ಮಾಡಿಕೊಂಡಿದ್ದು ಪರೀಕ್ಷೆಯ ಮೊದಲ ಪತ್ರಿಕೆಯಾದ ಪ್ರಥಮ ಭಾಷೆ ಕನ್ನಡ ಪರೀಕ್ಷೆಗೆ 47 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು,
2693 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷಾ ಕೇಂದ್ರಗಳಿಗೆ ಬೆಳಗ್ಗೆ 9:00ರ ವೇಳೆಗೆ ಪೋಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳು ಸೂಚನಾ ಫಲಕದಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ತಮ್ಮ ಪರೀಕ್ಷಾ ಕೊಠಡಿಯ ಸಂಖ್ಯೆಯನ್ನು ನೋಡಲು ಮುಗಿಬಿದ್ದಿದ್ದರು.
ಡಿ.ಡಿ. ಪಿ.ಐ. ದಿಡೀರ್ ಭೇಟಿ ಪರೀಕ್ಷೆ ಕೇಂದ್ರಗಳ ಪರಿಶೀಲನೆ...
ಎಸ್ ಎಸ್ ಎಲ್ ಸಿ ಪರೀಕ್ಷೆ ಶುಕ್ರವಾರ ರಾಜ್ಯದಾದ್ಯಂತ ಪ್ರಾರಂಭವಾದ ಹಿನ್ನೆಲೆ ಡಿ ಡಿ ಪಿ ಐ ಗಿರಿಜಾ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಾದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೋಡಗುಡ್ಡ, ಲಿಂಗದಹಳ್ಳಿ, ಹರಿಹರ ಪುರ, ಗುಂಡಾರ್ಲಹಳ್ಳಿ, ಜ್ಞಾನಭೋದಿನಿ ಮತ್ತು ಶಾರದಾ ವಿದ್ಯಾ ಪೀಠ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಿ ಈ ಓ ನೇತೃತ್ವದ ತಂಡ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಾದ ದೊಡ್ಡಹಳ್ಳಿ, ತಿರುಮಣಿ, ವೈ ಎನ್ ಹೊಸಕೋಟೆ ಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದರು.
ಯಾವುದೇ ಅಡ್ಡಿ ಆತಂಕವಿಲ್ಲದೆ ಮೊದಲ ದಿನದ ಪರೀಕ್ಷೆ ಸುಗಮವಾಗಿ ನಡೆಯಿತು.
ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳೆಲ್ಲರೂ ಖುಷಿ ಖುಷಿಯಿಂದ ಹೊರಗೆ ಬಂದು ತಮ್ಮ ಪೋಷಕರ ಬಳಿ ಮಾಹಿತಿ ಹಂಚಿಕೊಂಡಿರು.
ಪೋಲೀರು ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಭದ್ರತೆಯನ್ನು ಒದಗಿಸಿದ್ದರು.
ವರದಿ : ಶ್ರೀನಿವಾಸಲು ಎ