IMG 20250321 WA0045 scaled

ವಿಧಾನ ಪರಿಷತ್ : ರಾಜ್ಯದಲ್ಲಿ ಸಂಪೂರ್ಣ ನಕ್ಸಲ್ ಚಟುವಟಿಕೆಗಳನ್ನು  ನಿಗ್ರಹ ಮಾಡಲಾಗಿದೆ….!

Genaral STATE

ರಾಜ್ಯದಲ್ಲಿ ಸಂಪೂರ್ಣ ನಕ್ಸಲ್ ಚಟುವಟಿಕೆಗಳನ್ನು  ನಿಗ್ರಹ ಮಾಡಲಾಗಿದೆ  – ಗೃಹ ಸಚಿವ ಡಾ. ಜಿ. ಪರಮೇಶ್ವರ

ಬೆಂಗಳೂರು, ಮಾರ್ಚ್ 20, (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಸಂಪೂರ್ಣ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹ ಮಾಡಲಾಗಿದೆ. ಹಾಗೂ ನಕ್ಸಲ್ ಚಟುವಟಿಕೆಗಳು ಕಂಡುಬಂದಲ್ಲಿ ಕಾನೂನಿನ ರೀತ್ರ ಸೂಕ್ತ ಕ್ರಮ ವಹಿಸಲಾಗುವುದು ಎಮದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು,  ಕರ್ನಾಟಕ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕಲು ಸರ್ಕಾರದ ಆದೇಶ ಸಂಖ್ಯೆ: ಹೆಚ್‍ಡಿ 1 ಪಿಒಪಿ 2005(ಭಾಗ) ಬೆಂಗಳೂರು ದಿನಾಂಕ: 21/05/2005 ರಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ಸೃಜಿಸಲಾಗಿರುತ್ತದೆ.

ನಕ್ಸಲರ ನಿಗ್ರಹಕ್ಕಾಗಿ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ, ಜಡ್ಡಿನಗದ್ದೆ ಪ್ರದೇಶದಲ್ಲಿ ಚಿಕ್ಕಮಗಳೂರು ಜಿಲ್ಲೆಯ ದೇವಾಲೆಕೊಪ್ಪ, ಕಿಗ್ಗಾ, ಕೆರೆಕಟ್ಟೆ, ಜಯಪುರ ಪ್ರದೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆ ಪ್ರದೇಶದಲ್ಲಿ ಕೊಡಗು ಜಿಲ್ಲೆಯ ಭಾಗಮಂಡಲ, ಆರ್ಜಿ, ಕುಟ್ಟ ಪ್ರದೇಶದಲ್ಲಿ ಮೈಸೂರು ಜಿಲ್ಲೆಯ ಬೀಚನಹಳ್ಳಿ ಪ್ರದೇಶದಲ್ಲಿ, ಚಾಮರಾಜನಗರ ಜಿಲ್ಲೆಯ ಬರಗಿ ಪ್ರದೇಶದಲ್ಲಿ ಮತ್ತು ತುಮಕೂರು ಜಿಲ್ಲೆಯ ಪಾವಗಡ, ತಿರುಮಣಿ ಪ್ರದೇಶದಲ್ಲಿ ಎಎನ್‍ಎಫ್ ಕ್ಯಾಂಪ್‍ಗಳನ್ನು ಹಾಗೂ ಉಡುಪಿ ಜಿಲ್ಲೆಯ ಕುಕ್ಕುಂದೂರು ಪ್ರದೇಶದಲ್ಲಿ ಜೆ.ಸಿ.ಯು ತರಬೇತಿ ಕೇಂದ್ರ ಸೇರಿದಂತೆ ಒಟ್ಟು 16 ಸಂಖ್ಯೆಯ ಎಎನ್‍ಎಫ್ ಕ್ಯಾಂಪ್‍ಗಳನ್ನು ತೆರೆದು ನಕ್ಸಲ್ ಚಲನವಲನಗಳು ಕಂಡುಬರುವ ಅರಣ್ಯ ಪ್ರದೇಶಗಳಲ್ಲಿ ನಿರಂತರ ಕೂಂಬಿಂಗ್, ಅಂಬುಷ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ.

ನಕ್ಸಲ್ ನಿಗ್ರಹ ಪಡೆಯಲ್ಲಿ ಪ್ರತ್ಯೇಕವಾಗಿ ಗುಪ್ತ ಮಾಹಿತಿ ತಂಡವಿದ್ದು, ಸದರಿ ಚಟುವಟಿಕೆ/ಚಲನವಲನಗಳ ಮಾಹಿತಿ ಸಂಗ್ರಹಿಸಿ ಕೈಗೊಳ್ಳಲಾಗುತ್ತಿದೆ. ತಂಡದಿಂದ ನಕ್ಸಲರ ಕುರಿತು ತಳಮಟ್ಟದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ.  ಕರ್ನಾಟಕ ರಾಜ್ಯದಲ್ಲಿ ಶರಣಾಗತರಾಗುವ ನಕ್ಸಲರಿಗೆ ಈವರೆಗೂ ಪ್ರಸ್ತುತ 2024ನೇ ಸಾಲಿನಲ್ಲಿ ಶರಣಾಗತಿ ಪಾಲಿಸಿಯನ್ನು ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ನಕ್ಸಲರಿಗೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಪೆÇ್ರೀತ್ಸಾಹಧನ ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರವು ಆದೇಶಿಸಿರುತ್ತದೆ. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಈವೆರೆಗೂ 22 ಶರಣಾಗತರಾಗಿರುತ್ತಾರೆ. ಜನ ಭೂಗತ ನಕ್ಸಲರು ನಕ್ಸಲ್ ನಿಗ್ರಹಕ್ಕಾಗಿ ಇದುವರೆಗೆ 201,41,59,383/- ವೆಚ್ಚವಾಗಿರುತ್ತದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ನಕ್ಸಲ್ ಶರಣಾಗತಿ ಸಮಿತಿ ಸಭೆಯಲ್ಲಿ ಔಪಚಾರಿಕ ಶರಣಾಗತಿಯನ್ನು ಅಂಗೀಕರಿಸಲು ತೀರ್ಮಾನಿಸಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಶರಣಾಗತರಾಗುವ ನಕ್ಸಲರಿಗೆ ಪುನರ್ವಸತಿ ಯೋಜನೆಯಡಿ ಪೆÇ್ರೀತ್ಸಾಹಧನ ಸಹಾಯಧನ ಹಾಗೂ ಪುನರ್‍ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.  ಶರಣಾಗತಿ ಸಮಯದಲ್ಲಿ ಮತ್ತು ಅವರು ನೀಡಿದ ಮಾಹಿತಿ ಮೇರೆಗೆ ವಿವಿಧ ಸ್ಥಳಗಳಲ್ಲಿ ಅಡಗಿಸಿಟ್ಟಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಾಲಿ ರಾಜ್ಯದಲ್ಲಿ ಕಾರ್ಯಾಚರಿಸುತ್ತಿದ್ದ ಹಾಗೂ ಘೋಷಿಸಲಾಗಿದ್ದ ನಕ್ಸಲರೆಲ್ಲರೂ ಶರಣಾಗಿರುತ್ತಾರೆ. ಆದರೂ, ಸದರಿ ಅರಣ್ಯ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ/ಚಲನವಲನಗಳನ್ನು ಪತ್ತೆಹಚ್ಚಲು ನಕ್ಸಲ್ ನಿಗ್ರಹ ಪಡೆಯ ಗುಪ್ತ ಮಾಹಿತಿ ತಂಡದಿಂದ ತಳಮಟ್ಟದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಾಜ್ಯವನ್ನು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ನಕ್ಸಲ್ ಮುಕ್ತ ಎಂದು ಘೋಷಿಸಿರುತ್ತಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *