IMG 20240514 WA0008

ಪಾವಗಡ : ರೈತರಿಗೆ ಅಗತ್ಯವಾದ ಬಿತ್ತನೆ ಬೀಜಗಳ ವಿತರಣೆ ಗೆ ಸಿದ್ದತೆ

DISTRICT NEWS ತುಮಕೂರು

ರೈತರಿಗೆ ಅಗತ್ಯವಾದ ಬಿತ್ತನೆ ಬೀಜಗಳ ವಿತರಣೆ.

ಪಾವಗಡ: ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬಿತ್ತನೆಗೆ ಅವಶ್ಯವಿರುವ ಸುಧಾರಿತ ತಳಿಗಳ ಬಿತ್ತನೆ ಬೀಜಗಳನ್ನು ರೈತರಿಗೆ ಸಹಾಯಧನದಡಿಯಲ್ಲಿ ವಿತರಿಸಲಾಗುವುದೆಂದು . ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜಯ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ತಿಳಿಸಿದರು.

ಕಳೆದ ವರ್ಷ ಮಳೆ ಇಲ್ಲದೆ ಮುಂಗಾರು- ಹಿಂಗಾರು ಎರಡು ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆ 50.1 ಮೀ.ಮೀ ಎದುರಾಗಿ ಕಳೆದ ಮೂರು ದಿನಗಳಲ್ಲಿ 47.6 ಮೀ ಮೀ ಸುರಿದಿರುವ ಕೃಷಿಕ ಮಳೆಯು ರೈತಭಾಂದವರು ಮತ್ತೆ ಕೃಷಿಕಡೆ ಮುಖ ಮಾಡಿ ಪೂರ್ವ ಮುಂಗಾರು ಬೆಳೆಗಳ ಬಿತ್ತನೆಗೆ ಭೂಮಿ ಸಿದ್ದಪಡಿಸಿತ್ತಿರುವುದು   ಪ್ರಾರಂಭವಾಗಿರುತ್ತದೆ.ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ಪಾವಗಡ,ನಾಗಲಮಡಿಕೆ, ವೈ,ಎನ್,ಹೊಸಕೋಟೆ ಹಾಗೂ ನಿಡಗಲ್ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬಿತ್ತನೆ ಅವಶ್ಯಕತೆ ಇರುವ ಸುಧಾರಿತ ತಳಿಗಳ ಬಿತ್ತನೆ ಬೀಜಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿ ರೈತ ಬಾಂದವರಿಗೆ ಸಹಾಯದನದಡಿ ವಿತರಣೆ ಮಾಡಲಾಗುತ್ತಿದೆ ಎಂದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ರಸಗೊಬ್ಬರ ಮಳಿಗೆಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರಗಳಾದ ಯೂರಿಯಾ 424ಮೆ.ಟನ್ , ಡಿ.ಎ.ಪಿ 59ಮೆ.ಟನ್, ಎಂ.ಒ.ಪಿ 38 ಮೆ.ಟನ್ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳು 244 ಮೆ.ಟನ್ ಗಳಷ್ಟು ದಾಸ್ತಾನಿದ್ದು ಪ್ರಸಕ್ತ ಸಾಲಿಗೆ ರಸಗೊಬ್ಬರ ರೈತರಿಗೆ ಕೊರತೆ ಇರುವುದಿಲ್ಲವೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜಯ್ ಕುಮಾರ್ ತಿಳಿಸಿದ್ದಾರೆ.

ವರದಿ. ಶ್ರೀನಿವಾಸಲು. A