IMG 20210524 WA0012

ಪಾವಗಡ: ಕೋವಿಡ್ ಆರೋಗ್ಯ ಕೇಂದ್ರ ಉದ್ಘಾಟನೆ….!

DISTRICT NEWS ತುಮಕೂರು

ಕೋವಿಡ್ ಆರೋಗ್ಯ ಕೇಂದ್ರ ಉದ್ಘಾಟನೆ
ವೈ.ಎನ್.ಹೊಸಕೋಟೆ : ಕೊರೋನಾ ಸೋಂಕು ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ದಟ್ಟವಾಗಿ ಹರಡುತ್ತಿದ್ದು, ಜನತೆ ಹೆಚ್ಚು ಜಾಗೃತರಾಗಿರಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಆರೋಗ್ಯ ಕೇಂದ್ರವನ್ನು ಶನಿವಾರದಂದು ಉದ್ಘಾಟಿಸಿ ಮಾತನಾಡುತ್ತಾ, ಪಟ್ಟಣ ಪ್ರದೇಶಕ್ಕೆ ಕೇಂದ್ರಿಕೃತವಾಗಿದ್ದ ಕೋವಿಡ್ ಸೋಂಕು ತನ್ನ ಎರಡನೆಯ ಅಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೂ ಪಸರಿಸಿದೆ. ಜನತೆ ನಿರ್ಲಕ್ಷ ವಹಿಸದೆ ಹೆಚ್ಚು ಜಾಗೃತಿ ವಹಿಸಿದರೆ ಮಾತ್ರ ಕೋರೋನಾ ರೋಗದಿಂದ ತಪ್ಪಿಸಿಕೊಳ್ಳಬಹುದು.
ಗ್ರಾಮದಲ್ಲಿ ಕೋವಿಡ್ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗಾಗಿ ವೆಂಟಿಲೇಟರ್ ಹರಿತವಾದ ಆಮ್ಲಜನಕ ಸಹಿತವಾದ 34 ಬೆಡ್ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಇವುಗಳ ಪ್ರಮಾಣ ಹೆಚ್ಚಿಸಲಾಗುವುದು ಎಂದರು.
ಸಂಸದ ಎ.ನಾರಾಯಣ ಸ್ವಾಮಿ ಮಾತನಾಡಿ ಕೋವಿಡ್ ೩ನೇ ಅಲೆಯು ಮಕ್ಕಳಿಗೆ ಹೆಚ್ಚಿನ ಮಾರಕವಾಗಲಿದೆ ಎಂದು ತಜ್ಞರು ತಿಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಕೇಂದ್ರದಲ್ಲೂ ಮಕ್ಕಳಿಗಾಗಿ ಕೆಲವು ಬೆಡ್ ಗಳನ್ನು ಕಾದಿರಿಸುವುದು ಅಗತ್ಯವೆನಿಸುತ್ತಿದೆ. ತಾಲ್ಲೂಕು ಕೇಂದ್ರದಲ್ಲಿ ಸುಮಾರು ೫೦ ಲಕ್ಷ ವೆಚ್ಚದ ಆಮ್ಲಜನಕ ತಯಾರಿಕಾ ಘಟಕ ಸ್ಥಾಪನೆಗೊಂಡಿದ್ದು, ರೋಗಿಗಳಿಗೆ ಆಮ್ಲಜನಕದ ಕೊರತೆ ನೀಗಿಸಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ಸ್ಥಳೀಯವಾಗಿ ಅವರಿಗೆ ಶಾಲೆಗಳನ್ನು ಬಳಸಿಕೊಳ್ಳುವ ಆಲೋಚನೆ ಇದೆ ಎಂದು ತಿಳಿಸಿದರು.

IMG 20210524 WA0011
ಶಾಸಕರು ಮತ್ತು ಸಂಸದರು ಕೋವಿಡ್ ಕೇಂದ್ರವನ್ನು ಪರಿಶೀಲಿಸಿ ಕೊಠಡಿಗಳಿದ್ದ ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಉಪವಿಭಾಧಿಕಾರಿ ಸೋಮಣ್ಣ ಕಡಗೋಲ, ತಹಶೀಲ್ದಾರ್ ಕೆ.ಆರ್.ನಾಗರಾಜು, ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ ವೈದ್ಯರಾದ ಡಾ.ಕಿರಣ್ ಕುಮಾರ್, ಡಾ.ಲಿಂಗರಾಜು, ಡಾ.ರಾಮಾಂಜಿನೇಯಲು, ಕಂದಾಯಾಧಿಕಾರಿ ಕಿರಣ್ ಕುಮಾರ್ ಮತ್ತು ಸ್ಥಳೀಯ ಮುಖಂಡರು ಇದ್ದರು.