IMG 20240109 WA0013

ಪಾವಗಡ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು….!

DISTRICT NEWS ತುಮಕೂರು

ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು. ಶಾಸಕ ಹೆಚ್ ವಿ ವೆಂಕಟೇಶ್

ಪಾವಗಡ : ಸಾರ್ವಜನಿಕರು ದಿನನಿತ್ಯ ಕೆಲಸಗಳ ನಿಮಿತ್ತ ಪಟ್ಟಣದ ಕಚೇರಿಗಳ ಸುತ್ತಲೂ ಅಲೆಯುವುದನ್ನು ಅಧಿಕಾರಿಗಳು ತಪ್ಪಿಸಬೇಕೆಂದು, ಶಾಸಕ ಹೆಚ್. ವಿ ವೆಂಕಟೇಶ್ ತಿಳಿಸಿದರು.

ಪಟ್ಟಣದ ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಜನತಾದರ್ಶನ ಕಾರ್ಯಕ್ರಮ ತುಂಬಾ ಅನುಕೂಲವಾಗಿದೆ ಎಂದು.
ಪಿ.ಡಿ.ಒ ಗಳು ಗ್ರಾಮ ಪಂಚಾಯಿತಿಗಳಿಗೆ ಸರಿಯಾಗಿ ಬೇಟಿ ನೀಡುತ್ತಿಲ್ಲವೆಂದು, ಪಿಡಿಒಗಳು ಬೆಳಿಗ್ಗೆ 10 ಗಂಟೆಗೆಲ್ಲಾ ಪಂಚಾಯಿತಿಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಬೇಕು ಎಂದರು.
ಕೆಲ ಕಂಪ್ಯೂಟರ್ ಆಪರೇಟರ್ ಗಳು ಪಂಚಾಯಿತಿಯಲ್ಲಿ ದರ್ಬಾರ್ ನಡೆಸುತ್ತಿದ್ದಾರೆ ಎಂದು, ದೂರುಗಳು ಬರುತ್ತಿವೆ ಎಂದು, ಪಿ.ಡಿ.ಒಗಳ ಕಾರ್ಯವೈಕರಿ ಬಗ್ಗೆ ಬೇಸರ ವ್ಯಕ್ತಪಡಿಸಿ, ಸರಿಯಾಗಿ ಕಾರ್ಯನಿರ್ವಹಿಸದ ಪಿ.ಡಿ.ಒ ಗಳ ಬಗ್ಗೆ ಜಿಲ್ಲಾ ಪಂಚಾಯತಿಯ ಸಿ. ಈ. ಓ ರವರು ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿಯೇ ತಿಳಿಸಿದರು.

IMG 20240109 220954

ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ,
ಜನತಾ ದರ್ಶನ ಕಾರ್ಯಕ್ರಮವು ಜನರ ಸಮಸ್ಯೆಗಳನ್ನು ಆಲಿಸಲು ರೂಪುಗೊಂಡಿರುವ ಕಾರ್ಯಕ್ರಮವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದ ಜೊತೆಗೆ ಜಿಲ್ಲಾ ಆಡಳಿತವು ಭಾಗಿಯಾಗಿದೆ ಎಂದು ಜನರು ತಮಗೆ ಏನು ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದರು.
ಈಗಾಗಲೇ ಈ ಕಾರ್ಯಕ್ರಮವು ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಆಯೋಜಿಸಿದ್ದು ತುಂಬಾ ಯಶಸ್ವಿಯಾಗಿದೆ ಎಂದರು.
ಬರಪೀಡಿತ ತಾಲೂಕುಗಳಿಗೆ ಸಂಕ್ರಾಂತಿ ಗಿಂತ ಮುಂಚೆ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಯಾಗಲಿದೆ ಎಂದರು.

IMG 20240109 WA0015

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ನಲ್ಲಿ ರಾಷ್ಟ್ರ ಪ್ರಗತಿ, ಕಸ್ತೂರಿ ಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ವೇದಿಕೆಯಲ್ಲಿ ಅಭಿನಂದಿಸಿ ಟ್ರೋಫಿ ನೀಡಲಾಯಿತು, ಅದೇ ರೀತಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಆದೇಶ ಪತ್ರ ಹಾಗೂ ವಯೋವೃದ್ಧರಿಗೆ ಮಾಶಾಸನ ದೃಢೀಕರಣ ಪತ್ರ, ಕೃಷಿ ಇಲಾಖೆಯಿಂದ ಸಿಂಕ್ಲರ್, ತೋಟಗಾರಿಕೆ ಇಲಾಖೆಯಿಂದ ಡ್ರಿಪ್ ಉಪಕರಣಗಳು, ಶಿಶು ಅಭಿವೃದ್ಧಿ ಇಲಾಖೆಯಿಂದ ಭಾಗ್ಯಲಕ್ಷ್ಮಿ ಬಾಂಡ್, ಪರಿಶಿಷ್ಟ ವರ್ಗಗಳ ಇಲಾಖೆಯಿಂದ ಪ್ರೋತ್ಸಾಹ ದಿನ ಸೇರಿದಂತೆ ಹಲವು ಸೌಲತ್ತುಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

IMG 20240109 WA0014

ಕಾರ್ಯಕ್ರಮದಲ್ಲಿ ಅತಿ ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 70 ಅರ್ಜಿಗಳು, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 16 ಅರ್ಜಿಗಳು, ಪುರಸಭೆಗೆ ಸಂಬಂಧಿಸಿದಂತೆ 10 ಅರ್ಜಿಗಳು ಒಟ್ಟು ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದಂತೆ 161 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು, ಎ.ಡಿ.ಸಿ ಶಿವಾನಂದ ಕರಾಳೆ,ಉಪ ವಿಭಾಗಾಧಿಕಾರಿ ರಿಷಿ ಆನಂದ್, ವಿಶೇಷ ಭೂಸ್ವಾಧೀನ ಅಧಿಕಾರಿ ಮಂಜುನಾಥ್, ಡಿಎಫ್ಒ ಅನುಪಮ, ಮಧುಗಿರಿ ಡಿಡಿಪಿಐ ಮಂಜುನಾಥ್ ತಾಹಸೀಲ್ದಾರ್ ಡಿ ಎನ್ ವರದರಾಜು, ಇಓ ಜಾನಕಿರಾಮ್, ತಹಶೀಲ್ದಾರ್ ವರದರಾಜು, ಗ್ರೇಡ್ 2, ತಹಸೀಲ್ದಾರ್ ಎನ್ ಮೂರ್ತಿ, ಕಂದಾಯ ಅಧಿಕಾರಿ ರಾಜಗೋಪಾಲ್,
ಕ್ಷೇತ್ರ ಶಿಕ್ಷಣಾಧಿಕಾರಿ, ಇಂದ್ರಾಣಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ವರದಿ. ಶ್ರೀನಿವಾಸಲು. A