ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಮೂರು ವರ್ಷದ ಒಳಗಾಗಿ ಪೂರ್ಣ- ಕೇಂದ್ರ ಸಚಿವ ನಾರಾಯಣ ಸ್ವಾಮಿ
ಪಾವಗಡ……. ಇಂದು ತಾಲೂಕಿನ ಬುಗುಡೂರು ಮತ್ತು ರಾಪ್ಟೆ ಮಾರ್ಗದ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ್ತು ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು. ನಂತರ ಎ ನಾರಾಯಣಸ್ವಾಮಿ ಮಾತನಾಡುತ್ತಾ, ಹಲವಾರು ವರ್ಷಗಳಿಂದ ಈ ಭಾಗದ ರಸ್ತೆಗಳು ಹಾಳಾಗಿದ್ದು, ಇಂದು ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು
. ತಾಲೂಕಿನ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಮೂರು ವರ್ಷದ ಒಳಗಾಗಿ ಸಂಪೂರ್ಣ ಕಾಮಗಾರಿಗಳು ಮುಗಿಯಲಿವೆ ಎಂದರು. ನಂತರ ಶಾಸಕ ವೆಂಕಟರವಣಪ್ಪ ಮಾತನಾಡುತ್ತಾ, ಇಂದು 60 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು, ಹಿಂದಿನ ವರ್ಷ ಉತ್ತಮ ಮಳೆಯಾದ ಪರಿಣಾಮ ಈಗ ಬೇಸಿಗೆಯಲ್ಲಿ ಕುಡಿ ನೀರಿನ ಸಮಸ್ಯೆ ಉದ್ಭವವಾಗಿಲ್ಲ ಎಂದರು. ತಾಲೂಕಿನ ಎಲ್ಲಾ ಕಡೆ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ ಎಂದರು. ಹಾಗೂ ವೆಂಕಟಾಪುರ ಮತ್ತು ಕುಮುಟ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ನರಸಿಂಹಯ್ಯ, ಪುರಸಭೆ ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಡಾ.ಜಿ.ವೆಂಕಟರಾಮಯ್ಯ, ಭಾಸ್ಕರ್ ನಾಯ್ಡು, ನಾರಾಯಣರೆಡ್ಡಿ, ರಾಮಚಂದ್ರ, ಸುಬ್ಬರಾಯಪ್ಪ, ಸಿದ್ದರಾಮ, ಪರಂದಾಮರೆಡ್ಡಿ, ಮಾದವರಾಜ, ಶೇಖರ್, ಬಿಜೆಪಿ ತಾಲ್ಲೂಕು ಘಟಕದ ಕಾರ್ಯದರ್ಶಿ ಅಶೋಕ್, ಪ್ರಸಾದ್, ಮಧು ಉಪಸ್ಥಿತರಿದ್ದರು.
ಬವರದಿ: ಶ್ರೀನಿವಾಸಲು ಎ.