ಪಾವಗಡ: : – ತಾಲ್ಲೂಕಿನ ನಿಡಗಲ್,ಕಸಬಾ ಹೋಬಳಿಗಳಲ್ಲಿ ಮಂಗಳವಾರ ಮುಂಜಾನೆ ಸುರಿದ ಪುಬ್ಬಾ ಮಳೆ ರಭಸಕ್ಕೆ ಹಳ್ಳಕೊಳ್ಳ, ಕೆರೆ ಕಟ್ಟೆ ಕುಂಟೆಗಳಿಗೆ ನೀರು ಬಂದು ಜನರ ಮೊಗದಲ್ಲಿ ಸಂತಸ ಮೂಡಿಸಿದ್ದು ಒಂದೆಡೆಯಾದ್ರೆ….
ಇದೇ ಮಳೆಯ ಪರಿಣಾಮ ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲದೆ ಮನೆಗಳಿಗೆ ನೀರು ತುಂಬಿ ಅವಂತಾರ ಸೃಷ್ಟಿಸಿದ ದೃಶ್ಯ ಮತ್ತೊಂದೆಡೆ..
ಪಾಪ ಮುಗ್ದ ಬಡಜನರು ಸರಿಯಾದ ಸೂರಿನ ವ್ಯವಸ್ಥೆಗಳಿಲ್ಲದೆ ಮಳೆಯ ನೀರು ಒಳನುಗ್ಗುತ್ತಿವೆ. ಇನ್ನು ಅಲ್ಲಲ್ಲಿ ಸಿಸಿ ರಸ್ತೆಗಳ ಅವ್ಯವಸ್ಥೆ ರೂಪದಲ್ಲಿ ನಿರ್ಮಾಣದ ಕಾರ್ಯವೇನೋ ಮಾಡಿದ್ದಾರೆ ಆದರೆ ಚರಂಡಿಗಳನ್ನ ನಿರ್ಮಿಸದೆ ರಸ್ತೆಯ ನೀರು ಸೀದಾ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಇದರಿಂದ ಜನರು ಮನೆಯೊಳಗಿನ ನೀರನ್ನು ಹೊರ ಹಾಕುವುದೇ ಒಂದು ಸಾಹಸ ದೃಶ್ಯವಾಗಿದೆ.
ಇದಕ್ಕೆ ನೈಜ ನಿದರ್ಶನ ಇಲ್ಲಿದೆ ನೋಡಿ…
ನೀವು ನೋಡುತ್ತಿರೋದು ಪಾವಗಡ ತಾಲ್ಲೂಕಿನ ಕರೇಕ್ಯಾತನಹಳ್ಳಿ ಗ್ರಾಮದ ತುಮುಸ್ವಾರಪ್ಪ ಹಾಗೂ ಅವರ ಪತ್ನಿ ಮನೆಯೊಳಗೆ ನುಗ್ಗಿದ ಮಳೆ ನೀರನ್ನ ಹೊರ ಹಾಕುತ್ತಿರುವ ದೃಶ್ಯ ಇದಾಗಿದೆ.
ಕಳೆದ ಹಲವು ವರ್ಷಗಳಿಂದ ಇದೆ ಪರಿಸ್ಥಿತಿಯಿದೆ. ಸಿ ಸಿ ರಸ್ತೆಯ ಪಕ್ಕದಲ್ಲಿ ಚರಂಡಿ ಅಗಲಿಕೆಯಿಲ್ಲದ ಕಾರಣ ಮಳೆ ನೀರು ತುಂಬಿ ಮನೆಯೊಳಗೆ ನುಗ್ಗುತ್ತಿವೆ, ಇದರಿಂದ ಮನೆಯಲ್ಲಿದ್ದ ದವಸ ಧಾನ್ಯಗಳು ನೆನೆದು ನಷ್ಟವಾಗಿದೆ.ಕೂಲಿ ನಾಲಿ ಮಾಡೋದನ್ನ ಬಿಟ್ಟು ನೀರನ್ನ ಹೊರ ಹಾಕುವುದೇ ದಿನವಿಡಿ ಆಗುತ್ತದೆ ದಯಮಾಡಿ ಅನುಕೂಲ ಮಾಡಿ ಎಂದು
ಮಂಗಳವಾಡ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಎಷ್ಟೇ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ…ನಮ್ಮನ್ನ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.
ಪಾವಗಡ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ಇಂತಹುದೇ ಸಮಸ್ಯೆಗಳಿವೆ…ಕೆಲ ಪಂಚಾಯಿತಿ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡುತನದಿಂದ ವರ್ತಿಸುತ್ತಿರುವುದು ದುರಂತವೇ ಸರಿ….
ಇನ್ನಾದರೂ ಸಂಬಂಧಿಸಿದ ಮಂಗಳವಾಡ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಇತ್ತ ಕಡೆ ಗಮನಹರಿಸಿ ನೊಂದವರ ಆಸರೆಗೆ ನಿಲ್ಲಬೇಕಾಗಿದೆ….
ವರದಿ: ನವೀನ್ ಕಿಲಾರ್ಲಹಳ್ಳಿ