IMG 20240616 WA0036 scaled

ಪಾವಗಡ: ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ವಿತರಣೆ….!

DISTRICT NEWS ತುಮಕೂರು

ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ವಿತರಣೆ.

ಪಾವಗಡ : ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ
ಭಾನುವಾರ ಶಾಸಕ ಹೆಚ್ ವಿ ವೆಂಕಟೇಶ್ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಸಿ ಡಿ ಪಿ ಓ ಸುನಿತ ಡಿ.ಜಿ ಮಾತನಾಡಿ ತಾಲೂಕಿನಾದ್ಯಂತ 336 ಅಂಗನವಾಡಿ ಕೇಂದ್ರಗಳಿದ್ದು, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲಾಗುವುದೆಂದು.
ಭಾನುವಾರ ಸಾಂಕೇತಿಕವಾಗಿ ಶಾಸಕರ ಮೂಲಕ ಮೂರು ಸ್ಮಾರ್ಟ್ ಫೋನ್ ವಿತರಿಸುವುದಾಗಿ ತಿಳಿಸಿದರು.

ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು, ಅಂಗನವಾಡಿಗಳಲ್ಲಿ ಉತ್ತಮ ಸೇವೆ ಸಲ್ಲಿಸಲು ಸ್ಮಾರ್ಟ್ ಫೋನ್ ಅವಶ್ಯಕತೆ ಇದೆ ಎಂದರು.
ಪೋಷಣ್ ಅಭಿಯಾನದ ಮೂಲಕ ಮಕ್ಕಳ ಆರೋಗ್ಯ, ಆಹಾರದ ಕುರಿತು ವರದಿಯನ್ನು ತಂತ್ರಾಂಶದಲ್ಲಿ ದಾಖಲಿಸಲು, ಅಂಗನವಾಡಿ ಕಾರ್ಯಕರ್ತೆಯರ ಚಟುವಟಿಕೆಗಳನ್ನು ವೇಗಗೊಳಿಸಲು ಸ್ಮಾರ್ಟ್ ಫೋನ್ ವಿಚರಿಸಲಾಗಿದೆ ಎಂದರು.

ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ಮಕ್ಕಳ ಮತ್ತು ಗರ್ಭಿಣಿಯರ ಮಾಹಿತಿ ಮತ್ತು ಪ್ರತಿದಿನ ನಿತ್ಯದ ಚಟುವಟಿಕೆಗಳನ್ನು ದಾಖಲಿಸಲು ಸಹಾಯವಾಗುತ್ತದೆ ಎಂದರು

ವರದಿ : ಶ್ರೀನಿವಾಸಲು A.