ದೇಶದ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ
ವೈ.ಎನ್.ಹೊಸಕೋಟೆ : ದೇಶದಾದ್ಯಂತ ಇರುವ ಗುಡಿಗೋಪುರಗಳು ಕಟ್ಟಡಗಳು ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಜನಾಂಗದ ಕೊಡುಗೆ ಅಪಾರವಾಗಿದೆ ಎಂದು ಶಿಕ್ಷಕ ಕಲ್ಲೇಶಪ್ಪ ಬಡಿಗೇರ ತಿಳಿಸಿದರು.
ಶನಿವಾರದಂದು ಗ್ರಾಮದ ಗಡಿನಾಡ ಸಾಂಸ್ಕೃತಿಕ ಭವನದಲ್ಲಿ ಸ್ಥಳೀಯ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡುತ್ತಾ, ಅವರು ವಿಶ್ವಕರ್ಮರಲ್ಲಿ ಶಿಲ್ಪಕೆತ್ತನೆ, ಕಮ್ಮಾರಿಕೆ, ಕಾಷ್ಟಕಲೆ, ಕಂಚಿನ ಕುಸರಿಕಲೆ ಮತ್ತು ಅಕ್ಕಸಾಲಿ ಕಲೆಗಳನ್ನು ಕರಗತ ಮಾಡಿಕೊಂಡು ಆ ಮೂಲಕ ಅದ್ಬುತ ಕಲಾಸೃಷ್ಟಿ ಮಾಡುವ ಜನ ಇವರಾಗಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಲೆಯ ಸೊಬಗು ಅರಳುವುದಕ್ಕೆ ಮೂಲ ಕಾರಣರಾದ ವಿಶ್ವಕರ್ಮ ಸಮುದಾಯ ಆದುನಿಕತೆ ತಕ್ಕಂತೆ ಬೆಳೆಯಬೇಕಾಗಿದೆ.
ವಿಶ್ವಕರ್ಮ ಜನಾಂಗದ ಮಹತ್ವವನ್ನು ಗುರ್ತಿಸಿರುವ ಸರ್ಕಾರ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿದೆ. ನಿಗಮದಿಂದ ದೊರೆಯುವ ಸವಲತ್ತುಗಳನ್ನು ದಕ್ಷವಾಗಿ ಬಳಸಿಕೊಳ್ಳಬೇಕು. ಕಾರ್ಮಿಕ ಇಲಾಖೆಯಡಿ ಹಲವು ಸೌಲಭ್ಯಗಳಿವೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಕುಲಕಸುಬುಗಳನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ನೀಡುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಶಾಂತಮ್ಮಬಸವರಾಜು, ಎಲ್.ಕೆ.ರಘು, ಮುಖಂಡರಾದ ಓಬಳೇಶ್, ತಿಪ್ಪೇಸ್ವಾಮಿ, ಖಲಂದರ್, ಸಂಘದ ಅಧ್ಯಕ್ಷರಾದ ಆದಿನಾರಾಯಣಚಾರಿ, ಹನುಮಂತಚಾರಿ, ಮಣಿಕಂಠಚಾರಿ, ಅಂಜನಾಚಾರಿ, ಪ್ರಸಾದಚಾರಿ, ಸತ್ಯನಾರಾಯಣಚಾರಿ, ಶಂಕರಾಚಾರಿ, ಉಮಾಕಾಂತಚಾರಿ, ಮಧುಸೂಧನಾಚಾರಿ, ನಂಜುಂಡಾಚಾರಿ, ವಿಕ್ರಮಚಾರಿ ಇತರರು ಇದ್ದರು.