ಕೀಟನಾಶಕ ಮಳಿಗೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ದಾಳಿ.
ಪಾವಗಡ: ಸರ್ಕಾರದ ಪರವಾನಿಗೆ ಪಡೆಯದೆ ಅಕ್ರಮವಾಗಿ ಕೀಟನಾಶಕಗಳ ಔಷಧಿಗಳನ್ನು ವಿಕ್ರಯಿಸುತ್ತಿರುವ ಮಳಿಗೆಯ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ವೈ.ಎನ್.ಹೊಸಕೋಟೆಯಲ್ಲಿ ನಡೆದಿದೆ..
ಮಂಗಳವಾರ ಖಚಿತ ಮಾಹಿತಿ ಆಧಾರದ ಮೇಲೆ ಕೃಷಿ ಅಧಿಕಾರಿಗಳು ಪರವಾನಿಗೆ ಪಡೆಯದೆ ಕೀಟನಾಶಗಳನ್ನು ಮಾರಾಟ ಮಾಡುತ್ತಿದ್ದ ಗಾಯತ್ರಿ ಏಜೆನ್ಸಿ ಮಳಿಗೆ ಮೇಲೆ ದಾಳಿ ಮಾಡಿ ಕ್ರಿಮಿನಾಶಕಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಯತ್ರಿ ಏಜೆನ್ಸಿ ಅನುಮತಿ ಪಡೆಯದೆ ಕೇಂದ್ರ ಕ್ರಿಮಿನಾಶಕ ಮಂಡಳಿಯಲ್ಲಿ ನೋಂದಾಯಿತವಲ್ಲದ ಬ್ರೊನೊಪಾಲ್ ಕೀಟನಾಶಕ ಮಾರಾಟ ಮಾಡುತ್ತಿದ್ದು, ಸುಮಾರು 93 ಸಾವಿರ ರೂ ಮೌಲ್ಯದ 43 ಕೆ.ಜಿ ಯಷ್ಟು ಬ್ರೊನೊಪಾಲ್ ಕೀಟನಾಶಕ ವಶಪಡಿಸಿಕೊಳ್ಳಲಾಗಿದೆ. ಕಾನೂನು ಬಾಹಿರವಾಗಿ ಸುಮಾರು 1.35 ಲಕ್ಷ ರೂ ಮೌಲ್ಯದ 63 ಕೆ.ಜಿ. ಕೀಟನಾಶಕ ಮಾರಾಟ ಮಾಡಿರುವುದು ಪರಿಶೀಲನೆ ವೇಳೆ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೀಟನಾಶಕ ಕಾಯ್ದೆ 1968 ರಡಿ ಪ್ರಕರಣ ದಾಖಲಾಗಿದೆ.
ಜಂಟಿ ನಿರ್ದೇಶಕರ ಕಚೇರಿ ಸಹಾಯಕ ನಿರ್ದೇಶಕ, ಕೀಟ ನಾಶಕ ಪರಿವೀಕ್ಷಕ ಪುಟ್ಟರಂಗಪ್ಪ, ಕೃಷಿ ಅಧಿಕಾರಿ ಷಂಶದ್ ಉನ್ನೀಸಾ, ಚನ್ನಕೇಶವ ಧಾಳಿಯಲ್ಲಿ ಉಪಸ್ಥಿತರಿದ್ದರು.