IMG 20230605 WA00331

ಪಾವಗಡ:ರೈತರ ಸಮಸ್ಯೆಗಳಿಗೆ ಕೃಷಿ ಇಲಾಖೆಯವರು ಸ್ಪಂದಿಸಬೇಕು….!

ತುಮಕೂರು

ರೈತರ ಸಮಸ್ಯೆಗಳಿಗೆ ಕೃಷಿ ಇಲಾಖೆಯವರು ಸ್ಪಂದಿಸಬೇಕು . ಶಾಸಕ ಹೆಚ್.ವಿ ವೆಂಕಟೇಶ್.

ಪಾವಗಡ : ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಕೃಷಿ ಇಲಾಖೆಯ ವತಿಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ಶೇಂಗಾ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮ ಉದ್ದೇಶಿಸಿ,  ಶಾಸಕರಾದ ಶ್ರೀ ಹೆಚ್ ವಿ ವೆಂಕಟೇಶ್ ಮಾತನಾಡಿ.

 ಪಕ್ಕದ ಆಂಧ್ರಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಶೇಂಗಾ ಬೆಲೆ ಜಾಸ್ತಿ ಇದ್ದು, ಅದಕ್ಕೆ ಸಂಬಂಧಿಸಿದಂತೆ ಕೃಷಿ ಮಂತ್ರಿಗಳ ಬಳಿ ಚರ್ಚಿಸಲಾಗುವುದೆಂದು.

ಇತ್ತೀಚಿನ ದಿನಗಳಲ್ಲಿ ರೈತಾಪಿ ವರ್ಗದವರು ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಿದ್ದು, ರೈತರ ಕಷ್ಟ ಏನು ಎಂಬುದನ್ನು ಸ್ವತಹ ರೈತನಾಗಿರುವ ತನಗೆ ಅರಿವಿದೆ ಎಂದು, ತಾನು ರೈತರ ಪರವಾಗಿ ಧ್ವನಿ ಎತ್ತುವುದಾಗಿ ತಿಳಿಸಿದರು.

ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆ ರೈತರಿಗೆ ಸಕಾಲಕ್ಕೆ ಉತ್ತಮ ಗುಣಮಟ್ಟದ ಬೀಜಗಳನ್ನು ಒದಗಿಸಬೇಕೆಂದರು.

ಕೃಷಿ ಇಲಾಖೆಯವರು ರೈತರಿಗೆ ಎಲ್ಲಾ ತರಹ ಸಹಕಾರ ನೀಡಬೇಕೆಂದು, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು.

ರೈತರಿಂದ ಕೃಷಿ ಇಲಾಖೆ ಬಗ್ಗೆ ಯಾವುದಾದರೂ ದೂರಗಳು ಬಂದರೆ ತಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

 ಕಾರ್ಯಕ್ರಮ ಉದ್ದೇಶಿಸಿ ಕೃಷಿ ಇಲಾಖೆಯ ಸಹಾಯ ನಿರ್ದೇಶಕಿ ವಿಜಯಾ ಮೂರ್ತಿ ಮಾತನಾಡಿ , ಕೃಷಿ ಪರಿಕರ ಮತ್ತು ಗುಣಮಟ್ಟ ನಿಯಂತ್ರಣ ಯೋಜನೆ ಅಡಿಯಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ನೀಡಲು 5 ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಎಂದು. ಈಗಾಗಲೇ

ಬಿತ್ತನೆ ಬೀಜ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ ಎಂದು, 

ಇಂದು ಸಂಕೇತವಾಗಿ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡಿ, ನಾಳೆಯಿಂದ ಎಲ್ಲಾ ಕೇಂದ್ರಗಳಲ್ಲಿ ಬೀಜ ವಿತರಣೆ ಮಾಡಲಾಗುವುದೆಂದು.

ಕೆ 6 ಮತ್ತು ಟಿಎಂವಿ2 ಮಾದರಿಯ ಎರಡು ರೀತಿಯ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುವುದೆಂದರು.

ಕಾರ್ಯಕ್ರಮದಲ್ಲಿ  ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು ರವರು, ಪುರಸಭಾ ಸದಸ್ಯರಾದ ಟೆಂಕಾಯಿಲ ರವಿ ರವರು, ಯುವ ಮುಖಂಡರಾದ ವೆಂಕಟಮ್ಮನಹಳ್ಳಿ ನಾಣಿ ರವರು, ಶಂಕರ್ ರೆಡ್ಡಿ ರವರು, ರೈತಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ ರವರು, ಪೂಜಾರಪ್ಪ ನವರು ಸೇರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು..