IMG 20220727 WA0087

ಪಾವಗಡ:ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡದ ಬಿಜೆಪಿ ಸರ್ಕಾರ….!

DISTRICT NEWS ತುಮಕೂರು

ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡದ ಬಿಜೆಪಿ ಸರ್ಕಾರ… ಶಾಸಕ ವೆಂಕಟರಮಣಪ್ಪ   

ಪಾವಗಡ:    ಬ್ರಹ್ಮಾಂಡ  ಭ್ರಷ್ಟಾಚಾರದಲ್ಲಿ  ತೊಡಗಿರುವ ಬಿಜೆಪಿಯ 40% ಸರ್ಕಾರ, ಹಾಗೂ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿರುವ ಜೆಡಿಎಸ್ ಪಕ್ಷಗಳಿಗೆ 2023ರ  ವಿಧಾನಸಭೆ ಚುನಾವಣೆ ನುಂಗಲಾರದ ತುತ್ತಾಗುತ್ತದೆ ಎಂದು ಶಾಸಕ ವೆಂಕಟರಮಣಪ್ಪ ನುಡಿದರು.

 ಬುಧವಾರ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆಯುವ ಪಾದಯಾತ್ರೆ ಮತ್ತು ಸಿದ್ದರಾಮಯ್ಯನವರ 75 ಹುಟ್ಟುಹಬ್ಬದ  ಸಂಭ್ರಮಾಚರಣೆಯ ಸಲುವಾಗಿ  ನಡೆದ  ಪೂರ್ವಭಾವಿ ಸಭೆಯಲ್ಲಿ  ಅವರು ಮಾತನಾಡಿದರು.

ಜನರು ಜನಪ್ರತಿನಿಧಿಗಳನ್ನು ಆರಿಸಿ ಕಳಿಹಿಸಿರುವುದು ಒಳ್ಳೆಯ ಸರ್ಕಾರ ರಚನೆಯಾಗಿ ಜನಗಳಿಗೆ ಅನುಕೂಲ ಮಾಡುವರೆಂದು , ಆದರೆ ಜನರ ಆಶೀರ್ವಾದದಿಂದ  ರಚನೆಯಾದ ಬಿಜೆಪಿ ಸರ್ಕಾರವು  ಜನರಿಗೆ ಅನುಕೂಲ ಮಾಡುವುದಕ್ಕಿಂತ ಎಲ್ಲಾ ರೀತಿಯಲ್ಲಿ ತೆರಿಗೆಗಳನ್ನು ಹೆಚ್ಚಿಸಿ ಅನಾನುಕೂಲ ಮಾಡಿಕೊಟ್ಟಿದೆ , ಬಿಜೆಪಿ ಸರ್ಕಾರ ಅನೇಕ ಯೋಜನೆಗಳಿಗೆ  ಅನುದಾನ ನೀಡದೆ ಜನರನ್ನು ಶೋಷಣೆ ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸುವರೆಂದು ಶಾಸಕ ವೆಂಕಟರಮಣಪ್ಪ ದೂರಿದರು.                                                  ಭದ್ರಾ ಮೇಲ್ದಂಡೆ, ತುಂಗಭದ್ರ ನೀರಾವರಿ ಯೋಜನೆ, ವಿವಿಧ ಕಾಮಗಾರಿಗಳಿಗೂ ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.

 ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮುಂದಾದಾಗ ಸ್ಥಳೀಯ ಜೆಡಿಎಸ್ ಶಾಸಕರು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆಂದು, ಈ ರೀತಿಯಾಗಿ ರಾಜಕೀಯ ದುರುದ್ದೇಶದಿಂದ ಕೆಲಸಗಳನ್ನು ಮಾಡಿದರೆ ತಾಲೂಕು ಅಭಿವೃದ್ಧಿ ಹೇಗಾಗುತ್ತದೆ ಎಂದರು.   ಚುನಾವಣೆ ವೇಳೆ ಕುಮಾರಸ್ವಾಮಿ ಸಾಲ ಮನ್ನಾ ಹೆಸರಿನಲ್ಲಿ ಸುಳ್ಳು ಹೇಳಿಕೊಂಡು 20 ಸ್ಥಾನ ಪಡೆಯಲು ಹೆಣಗಾಡುತ್ತಾರೆ. ಕಾಂಗ್ರೆಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಪಡೆಯುವ ಲೆಕ್ಕಾಚಾರ ತಂದೆ ಮಕ್ಕಳದ್ದು ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಮಾತನಾಡಿ. 75 ನೇ ವರ್ಷದ ಸ್ವಾತಂತ್ರ ಮಹೋತ್ಸವದ ಅಂಗವಾಗಿ ಅರಸೀಕೆರೆ, ಲಿಂಗದಹಳ್ಳಿ, ವೈ.ಎನ್.ಹೊಸಕೋಟೆ, ವಿರುಪಸಮುದ್ರ, ತಿರುಮಣಿ ಸೇರಿದಂತೆ ವಿವಿದೆಡೆಯಿಂದ ಪಟ್ಟಣಕ್ಕೆ ಪಾದಯಾತ್ರೆ ನಡೆಸಲಾಗುವುದು. ಸಿದ್ದರಾಮೋತ್ಸವದಲ್ಲಿ ಜನತೆ ಭಾಗವಹಿಸಿ ಅವರಿಗೆ ಗೌರವ ಸೂಚಿಸಬೇಕು ಎಂದರು.

  ಮಾಜಿ ಶಾಸಕ ಸೋಮ್ಲಾನಾಯ್ಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ನರಸಿಂಹಯ್ಯ, ವಕೀಲ ವೆಂಕಟರಾಮರೆಡ್ಡಿ, ಕೆಪಿಸಿಸಿ ಸದಸ್ಯ ಕೋಟೆ ಪ್ರಭಾಕರ್, ಸಣ್ಣರಾಮರೆಡ್ಡಿ, ತಿಪ್ಪೇಸ್ವಾಮಿ, ಫಜ್ಲುಸಾಬ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಣ್ಣ, ಮೈಲಪ್ಪ, ಮಂಜಣ್ಣ ಮಾತನಾಡಿದರು.

  ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯ ಕ್ಷ ಸುದೇಶ್ ಬಾಬು, ಪುರಸಭೆ ಅಧ್ಯಕ್ಷ ವೇಲುರಾಜು, ಸದಸ್ಯ ಪಿ.ಎಚ್.ರಾಜೇಶ್, ರವಿ, ಮೊಹಮದ್ ಇಮ್ರಾನ್, ಮುಖಂಡ ಶಂಕರರೆಡ್ಡಿ, ಅಶೋಕ್, ಗುರಪ್ಪ, ನಿಸಾರ್, ನಾಗರಾಜು, ಗೋವಿಂದಪ್ಪ, ನಾರಾಯಣಪ್ಪ, ಮಾರಪ್ಪ ಉಪಸ್ಥಿತರಿದ್ದರು