IMG 20210502 WA0009

ಪಾವಗಡ: ಅನ್ನದಾನ ಕ್ಕೆ ಮುಂದಾದ ಕರವೇ…..!

DISTRICT NEWS ತುಮಕೂರು

ಪಾವಗಡ. ಲಾಕ್ ಡೌನ್ ನಿಂದ ಜನ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಅವರ ನೆರವಿಗೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಘರಾನಾ ನಾಗ ಅವರು ಮುಂದಾಗಿದ್ದಾರೆ. ಹಸಿದವರಿಗೆ ಊಟ ಕೊಡುವ ಮೂಲಕ ಮಾನವೀಯತೆಯಿಂದ ಮೆರೆದಿದ್ದಾರೆ.

..ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ವಿಕೆಂಡ್ ಕರ್ಪ್ಯೂ ನಿಂದ ಬಂದ್ ಆಗಿದ್ದು ಯಾವುದೇ ಹೋಟೆಲ್ ತೆರೆಯದ ಕಾರಣ ಊಟವಿಲ್ಲದೇ ಸಾರ್ವಜನಿಕರು, ನಿರ್ಗತಿಕರು ಪರದಾಡುತ್ತಿದುದ್ದು ನೋವಿನ ಸಂಗತಿಯಾಗಿತ್ತು.

ಇದೇ ಸಂದರ್ಭದಲ್ಲಿ ಘರಾನಾ ನಾಗ ಅವರಿಂದ ಅನ್ನದಾನ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಮನುಷ್ಯನಿಗೆ ಹಸಿವು ಎನ್ನುವುದು ದೊಡ್ಡ ವೈರಿ ಇದ್ದ ಹಾಗೆ. ಹಣ್ಣವಿಲ್ಲದೇ ಮನುಷ್ಯ ಬದುಕುತ್ತಾನೆ. ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ. ನಾನು ಪ್ರತಿದಿನ ಆಹಾರ ವಿತರಣೆ ಮಾಡುತ್ತೇನೆ. ಅದರ ಜೊತೆಯಲ್ಲಿ ಬಂದ್ ಇರುವ ಹಿನ್ನೆಲೆಯಲ್ಲಿ‌ ಹೋಟೆಲ್ ಬಂದ್ ಆಗಿದ್ದು ಸಾರ್ವಜನಿಕರಿಗೆ, ಬಡವರಿಗೆ ಊಟ ಸಿಗದೇ ಪರದಾಡಿದ್ದ ಕಂಡು ತುಂಬಾ ನೋವಾಯಿತು.

ಮನುಷ್ಯ ಕೋಟಿ ಇದ್ದರೇನು ಫಲ, ಹಸಿದವರಿಗೆ ಒಂದು ಹೊತ್ತು ಅನ್ನ ನೀಡದೇ ಇದರೇ ಎಲ್ಲಾ ವ್ಯರ್ಥ. ನಾನು ನೊಂದವರಿಗೆ ಊರುಗೋಲು ಆಗಬೇಕೆಂಬ ಆಸೆ ಎಂದು ತನ್ನ ಮನದಾಳದ ಮಾತನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಅನಿಲ್ ಕುಮಾರ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು

ವರದಿ: ಬುಲೆಟ್ ವೀರಸೇನಯಾದವ್