ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ, ಚಂದ್ರಶೇಖರ್ ರೆಡ್ಡಿ ಆಯ್ಕೆ
ಪಾವಗಡ: ತಾಲ್ಲೂಕಿನ ಕೆ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ ರೆಡ್ಡಿ 2022-2023 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2007ರಲ್ಲಿ ರಾಯಚೂರು ಜಿಲ್ಲೆಯ ಈಚನಾಳ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 9 ವರ್ಷ ಸೇವೆ ಸಲ್ಲಿಸಿ, ನಂತರ ಪಾವಗಡ ತಾಲೂಕಿನ ಕೆ.ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿ ಕಳೆದ ಏಳು ವರ್ಷಗಳಿಂದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಚಂದ್ರಶೇಖರ್ ರೆಡ್ಡಿ ಮಾತನಾಡಿ ತಾವು ಮೂಲತಃ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕಡಗತೂರು ಗ್ರಾಮದವರಾಗಿದ್ದಾರೆಂದು.
ಶಿಕ್ಷಕರಾಗಿ ಕೆ.ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿ ಬಂದಾಗ ಒಂದರಿಂದ ಐದನೇ ತರಗತಿಯಲ್ಲಿ 64 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ತಾವು ಕೆ.ರಾಂಪುರ ಶಾಲೆಗೆ ಬಂದ ನಂತರ ಐದು ವರ್ಷಗಳಿಂದ ಯಾವುದೇ ಮಗು ಖಾಸಗಿ ಶಾಲೆಗೆ ಹೋಗಿಲ್ಲವೆಂದು, ತಮ್ಮ ಶಾಲೆಯಲ್ಲಿ ಓದಿದ ಅನೇಕ ಮಕ್ಕಳು ಮುರಾರ್ಜಿ, ಆದರ್ಶ ,ಕಿತ್ತೂರಾಣಿ ಚೆನ್ನಮ್ಮ ಇತರೆ ವಸತಿ ಶಾಲೆಗಳ ಪರೀಕ್ಷೆಗಳಲ್ಲಿ ತಮ್ಮ ಶಾಲೆಯಿಂದ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆಂದು, ಪ್ರತಿ ವರ್ಷ ವಸತಿ ಶಾಲೆಗಳ ಪರೀಕ್ಷೆಗಳಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಅಂಕ ಪಡೆದ 10 ವಿದ್ಯಾರ್ಥಿಗಳಲ್ಲಿ ಐದರಿಂದ ಆರು ವಿದ್ಯಾರ್ಥಿಗಳು ನಮ್ಮ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದರು.
ಈ ರೀತಿಯಾಗಿ ತಮ್ಮ ಶಾಲೆಯ ಮಕ್ಕಳು ಸಾಧನೆ ಮಾಡೋದಕ್ಕೆ ಪಾವಗಡದ ಜಪಾನಂದ ಸ್ವಾಮಿ ತಮ್ಮ ಶಾಲೆಯನ್ನು ದತ್ತು ಪಡೆದು ನಾಲ್ಕು ವರ್ಷಗಳಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ, ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಒದಗಿಸಿದ್ದಾರೆ.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಮಾರ್ಗದರ್ಶನ , ಕೆ.ರಾಂಪುರ ಗ್ರಾಮಸ್ಥರು ,ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಎಲ್ಲರ ಸಹಕಾರದಿಂದಾಗಿ ಈ ದಿನ ಉತ್ತಮ ಶಿಕ್ಷಕ ಪಡೆಯಲು ಸಾಧ್ಯವಾಯಿತು ಎಂದು, ಸರ್ಕಾರ ಪ್ರಶಸ್ತಿ ನೀಡಿದ್ದರಿಂದ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಲು ತನ್ನ ಜವಾಬ್ದಾರಿ ಜಾಸ್ತಿ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.