IMG 20220903 WA0046

ಆನೇಕಲ್: ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದಿಂದ ಗಡಿನಾಡು ಸಾಂಸ್ಕೃತಿಕ ಉತ್ಸವ…!

DISTRICT NEWS ಬೆಂಗಳೂರು

ಆನೇಕಲ್: ಇಂಡ್ಲವಾಡಿ ಸರ್ಕಾರಿ ಪ್ರೌಢಶಾಲೆಯ ಬಯಲು ರಂಗಮಂದಿರದಲ್ಲಿ ಪುಣ್ಯಕೋಟಿ ಸಾಂಸ್ಕೃತಿಕ ಕಲಾ ಬಳಗ ಬೆಂಗಳೂರು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯತಿ ಇವರ ಸಹಕಾರದೊಂದಿಗೆ ೭೫ ಭಾರತ ಸ್ವಾತಂತ್ರ ಅಮೃತೋತ್ಸವದ ಸವಿನೆನಪು ಅಂಗವಾಗಿ ಗಡಿನಾಡು ಸಾಂಸ್ಕೃತಿಕ ಉತ್ಸವ, ಸಂಗೀತ, ನೃತ್ಯ, ನಾಟಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ ಅಧ್ಯಕ್ಷರಾದ ಬೆಟ್ಟಪ್ಪ ಅವರು ನೆರವೇರಿಸಿ ಮಾತನಾಡುತ್ತಾ ಗಡಿನಾಡು ಭಾಗಗಳಲ್ಲಿ ಮಕ್ಕಳು ಮತ್ತು ಜನರು ಬೇರೆ ಭಾಷೆಗಳು ಪ್ರಭಾವಕ್ಕೆ ಒಳಗಾಗದೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸವುದು ಪ್ರತಿಯೊಬ್ಬರ ಕರ್ತವ್ಯ ಕನ್ನಡ ಭಾಷೆ ಮೇಲೆ ಅಭಿಮಾನ ಬೆಳಿಸಿಕೊಳ್ಳುವುದರ ಜೊತೆಗೆ ನಮ್ಮ ಅಭಿವೃದ್ಧಿ ಸಾಧ್ಯ. ಸ್ಥಳೀಯ ಪ್ರತಿಭೆಗಳು, ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ವರ್ಷಕ್ಕೆ ಎರಡು ಬಾರಿಯಾದರೂ ನಾಟಕ ಇನ್ನಿತರ ಕಲೆಗಳನ್ನು ನಿರಂತರವಾಗಿ ಈ ನಮ್ಮ ಗಡಿ ಭಾಗದಲ್ಲಿ ನಡೆಯುವಂತಾಗಲಿ ಎಂದರು.

IMG 20220903 WA0044


ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ, ಗಡಿನಾಡು ಭಾಗದಲ್ಲಿ ಹಳ್ಳಿಗಳಲ್ಲಿ ಜನ ಅವಿದ್ಯಾವಂತರಾದರು ಭಾಷೆಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟು ಜನಪದ ಸೋಬಾನೆ ರಂಗಭೂಮಿ ಕೋಲಾಟ ಕಲೆಗಳನ್ನ ಉಳಿಸಿಕೊಂಡು ಸಾಂಸ್ಕೃತಿಕವಾಗಿ ದೇಶವನ್ನು ಕಟ್ಟಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯರಾದ ಸಿ.ನಾಗರಾಜು ಮಾತನಾಡಿ ಗಡಿಗಳಲ್ಲಿ ಜನರು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದಾರೆ ಉತ್ಸವಗಳು ಹುಣ್ಣಿಮೆ ಜಾತ್ರೆಗಳು ದೇಶದ ಎಲ್ಲಾ ಭಾಗಗಳಲ್ಲೂ ಬೇರೆ ಬೇರೆ ರೂಪದಲ್ಲಿ ಆಚರಿಸಿ, ಭವಿಷ್ಯದ ದಿನಗಳನ್ನು ಸುಖ ಸಮೃದ್ಧಿಯಿಂದ ಕೂಡಿರುವಂತೆ ಹಿರಿಯರು ಕಾಪಿಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತರಾದ ಲಕ್ಷ್ಮಿ ನಾರಾಯಣಚಾರ್ಯರು ಮತನಾಡಿ. ಇಂತಹ ಕಲೆಗಳು ಬೆಳೆಯಬೇಕಾದರೆ ಕಲಪೋಷಕರು ಅವಶ್ಯಕತೆಯಿದೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಕಲೆ ಮಾಯವಾಗಿ ಪ್ರತಿಯೊಬ್ಬ ಮನುಷ್ಯ ಒತ್ತಡವನ್ನು ಅನುಭವಿಸುತ್ತಾ ಅನಾರೋಗ್ಯಕ್ಕೆ ಈಡಾಗಿದ್ದಾನೆ ಸಂಗೀತದಿಂದ ಉತ್ಸವಗಳಿಂದ ನೆಮ್ಮದಿಯ ಬದುಕನ್ನು ಕಾಣಬಹುದಾಗಿದೆ ಇಂತಹ ಉತ್ತಸವಗಳು ಪ್ರತಿ ಹಳ್ಳಿಗಳಲ್ಲಿ ನಡಿಯುವಂತಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಗಡಿನಾಡು ಕಲಾವಿದರನ್ನು , ಕರ್ನಾಟಕ ಗತವೈಭವ ಸಾರುವ ನೃತ್ಯ, ಪುಣ್ಯಕೋಟಿ ನೃತ್ಯ, ಮಹಿಷ ಮರ್ದಿನಿ ಯಕ್ಷ, ಸಮೂಹ ಜಾನಪದ ನೃತ್ಯ, ಸಾಲುಮರದ ತಿಮ್ಮಕ್ಕನವರ ಪರಿಸರ ಜಾಗೃತಿ ಮೂಡಿಸುವ- ಪರಿಸರ ನಾಟಕ, ಭಜನಾ, ಕನ್ನಡ ಗೀತೆಗಳ ರಂಗ ಗೀತೆಗಳು ಗಾಯನ, ಮಾಡಿದ ಗಾಯಕರು, ರಂಗಭೂಮಿ ಕಲಾವಿದರು, ಬಯಲಾಟ ಕಲಾವಿದರು,ಇವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರತ್ನಮ್ಮ ಅಶ್ವತಪ್ಪ ,ಪಿಡಿಒ ಆನಂದ್ ಇ, ಕಲಾವಿದರು ತಿಲಕ್ ರಾಜ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಜಯಶ್ರೀ ಅಚ್ಚುತರಾಜು, ಕೃಷ್ಣಮೂರ್ತಿ (ಐಸಿಎಂ), ಪಟೇಲ್ ವೆಂಕಟೇಶ್ ,ಲಕ್ಷ್ಮಿ ,ರಮೇಶ್, ರಾಧಾ ರವಿಕುಮಾರ್ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಮೂರ್ತಿ ಗ್ರಾಮ ಪಂ ಸದಸ್ಯರುಗಳಾದ ನೀಲ ಹೊಸಣ್ಣ ಶುಭಾನಂದ್ ಲೋಕೇಶ್ ಭಾಸ್ಕರ್ ಮುತ್ತು ರಾಯಪ್ಪ ಕಾಡುಜಕ್ಕನಹಳ್ಳಿ ಮಹದೇವ್ ಅರೇಹಳ್ಳಿ ಮಂಜು,ಮಧು ಸೋಮಶೇಖರ್ ಲಕ್ಷ್ಮಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಪಂಚಾಯಿತಿ ಸಿಬ್ಬಂದಿ ವರ್ಗದವರು ಕನ್ನಡ ಪರ ಸಂಘ ಸಂಸ್ಥೆಗಳು ಮಹಿಳಾ ಸಂಘಟನೆಗಳು ಸ್ಥಳೀಯ ಎಲ್ಲಾ ಕಲಾವಿದರು ಕನ್ನಡ ಅಭಿಮಾನಿಗಳು ಸೇರಿದ್ದರು.: ವರದಿ ಹರೀಶ್ ಗುರುಮೂರ್ತಿ ಆನೇಕಲ್