*ಅವಿರೋಧವಾಗಿ ಆಯ್ಕೆಯಾದ ಮರುವೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷಣಿಯಾದ ಸುಮಾ ಸಿದ್ದೇಶ್
ಮಧುಗಿರಿ: ತಾಲೂಕಿನ ಕಸಬಾ ಹೋಬಳಿ ಮರುವೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಹದಿನಾಲ್ಕು ಜನ ಸದಸ್ಯರಿಂದ ಯಾರೂ ಕೂಡ ಅಧ್ಯಕ್ಷರ ಸ್ಥಾನಕ್ಕೆ ಯಾರೂ ಕೂಡ ನಾಮಪತ್ರ ಸಲ್ಲಿಸದೆ ಸುಮಾ ಸಿದ್ದೇಶ್ ರವರೇ ಅಧ್ಯಕ್ಷರ ಹುದ್ದೆಗೆ ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ಟಿ ಎಸ್ ಸುರೇಶ ಆಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು
ನಂತರ ನೂತನ ಅಧ್ಯಕ್ಷೆ ಸುಮಾ ಸಿದ್ದೇಶ್ ಮಾತನಾಡಿ ಎಲ್ಲಾ ಸದಸ್ಯರು ನನ್ನ ಸಹಮತದಿಂದ ಆಯ್ಕೆ ಮಾಡಿರುವುದಕ್ಕೆ ತುಂಬು ಹೃದಯದ ಅಭಿನಂದನೆಗಳು ಮತ್ತು ಊರಿನ ಮುಖಂಡರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಮತ್ತು ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು
ನಂತರ ಜೆ.ಡಿ.ಎಸ್ ಮುಖಂಡ ವೆಂಕಟಾಪುರ ಗೋವಿಂದರಾಜು ಮಾತನಾಡಿ ಮರುವೇಕೆರೆ ಗ್ರಾಮಪಂಚಾಯಿತಿಯಲ್ಲಿ ಹಿಂದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯ ಕೇಶವಮೂರ್ತಿ ಅವರನ್ನು 15 ತಿಂಗಳು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವಿ. 15 ತಿಂಗಳ ನಂತರ ಮತ್ತೊಬ್ಬರಿಗೆ ಬಿಟ್ಟುಕೊಡಬೇಕೆಂದು ಮಾತುಕತೆಯಾಗಿತ್ತು. ಅದರಂತೆ ಇವತ್ತು ಜೆ.ಡಿ.ಎಸ್ ನ ಬೆಂಬಲಿತ ಸುಮಾ ಸಿದ್ದೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು
ನಂತರ ಮರುವೇಕೆರೆ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಮಾತನಾಡಿ ಇವತ್ತು ನಾವು 14 ಜನ ಸದಸ್ಯರು ಸೇರಿ ಪಕ್ಷಾತೀತವಾಗಿ ಸುಮಾ ಸಿದ್ದೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯರು ಎಲ್ಲಾ ಸೇರಿ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿಯ ಉಪಾಧ್ಯಕ್ಷ ಮತ್ತು ಸದಸ್ಯರು ಹಾಗೂ ಮತ್ತು ಗ್ರಾಮದ ಮುಖಂಡರುಗಳಾದ ಸಿದ್ದೇಶ್. ವೆಂಕಟಾಪುರ ಗೋವಿಂದರಾಜು, ರಂಗಣ್ಣ, ಲಕ್ಷ್ಮಿ, ಶ್ರೀರಂಗಪ್ಪ ಪ್ರಮುಖ ಮುಖಂಡರು ಇದ್ದರು
ವರದಿ ಲಕ್ಷ್ಮಿಪತಿ ದೊಡ್ಡ ಎಲ್ಕೂರು