ಆನೇಕಲ್ : ಕನ್ನಡ ಜಾಗೃತಿ ವೇದಿಕೆಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಯುವ ಜನೋತ್ಸವ ಮತ್ತು ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಮಾತನಾಡಿ ನೆಲ,ಜಲ,ನಾಡು, ನುಡಿ ವಿಚಾರದಲ್ಲಿ ರಾಜಕೀಯ ಸಲ್ಲದು. ಉದ್ಯೋಗ, ಶಿಕ್ಷಣ ಕನ್ನಡಿಗರಿಗೆ ದೊರೆಯುವಂತಾಗಬೇಕು. ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ನಿರಂತರವಾಗಿ ಕನ್ನಡ ಜಾಗೃತಿ ವೇದಿಕೆಯು ಕನ್ನಡಿಗರ ಜಾಗೃತಿಗಾಗಿ ಹೋರಾಟ ನಡೆಸಿದೆ. ಯುವ ಸಮುದಾಯದಲ್ಲಿ ಕನ್ನಡ ಪ್ರಜ್ಞೆಯನ್ನು ಮೂಡಿಸಲು ಯುವ ಜನೋತ್ಸವವನ್ನು ಆಯೋಜಿಸಲಾಗಿದೆ ಎಂದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಕರ್ನಾಟಕದ ಅವಿಭಾಜ್ಯ ಅಂಗಗಳಾದ ಹೊಸೂರು, ಸೊಲ್ಲಾಪುರ, ಕಾಸರಗೋಡು ಸೇರಿದಂತೆ ವಿವಿಧ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕು.ತಮಿಳುನಾಡಿನ ಹೊಸೂರು ನಮ್ಮದು, ಬನ್ನಿ ಹೊಸೂರು ಚಳುವಳಿಗೆ – ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಹೊಸೂರು ಚಳವಳಿ’ ರೂಪಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಕನ್ನಡ ಪರ ಕಾರ್ಯಕರ್ತರು, ಹೋರಾಟಗಾರರು ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ರಾಜ್ಯದ ಗಡಿಭಾಗವಾದ ಆನೇಕಲ್‌ನಲ್ಲಿ ಪ್ರತಿಯೊಂದು ಹೋರಾಟಕ್ಕೂ ನೂರಾರು ಹೋರಾಟಗಾರರು ಇಲ್ಲಿಂದ ಬರುವುದೇ ಇದಕ್ಕೆ ಸಾಕ್ಷಿಯಾಗಿದೆ ಕನ್ನಡ ಪರ ಹೋರಾಟಗಳು ಕಣ್ಮರೆಯಾಗುತ್ತಿವೆ. ಯುವಕರಲ್ಲಿ ಹೋರಾಟದ ಕಿಚ್ಚು ಕಾಣುತ್ತಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಿಗರು ಪರಕೀಯರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಕನ್ನಡ ಪರ ಹೋರಾಟಗಳು ನಿರಂತರವಾಗಿ ಹಲವು ಹೋರಾಟಗಳು ನಡೆದರೂ ರಾಜ್ಯದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಸಂಪೂರ್ಣವಾಗಿ ಜಾರಿಯಾಗಿಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಹಲವು ಸಮಸ್ಯೆಗಳು ಉಂಟಾಗಿವೆ. ರಾಜಕೀಯ ಪಕ್ಷಗಳು ಕನ್ನಡಪರ ನಿಲುವು ತಾಳುವ ನಿಟ್ಟಿನಲ್ಲಿ ಕನ್ನಡಿಗರು ಎಚ್ಚರಿಕೆ ನೀಡಬೇಕಾಗಿದೆ.
ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ, ಯುವ ಘಟಕದ ಅಧ್ಯಕ್ಷ ಎಸ್.ಕೆ. ಗೌರೀಶ್, ಕವಿ ಡಾ.ತಾ.ನಂ. ಕುಮಾರಸ್ವಾಮಿ, ಪುರಸಭಾ ಸದಸ್ಯರಾದ ಭಾರವಿ, ಕವಿತಾ, ಭುವನಾ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಆದೂರು ಪ್ರಕಾಶ್, ಮುಖಂಡರಾದ ಟಿ.ವಿ. ಬಾಬು, ಹುಲ್ಲಹಳ್ಳಿ ಶ್ರೀನಿವಾಸ್, ಪಟಾಪಟ್ ಶ್ರೀನಿವಾಸ್, ಪಟಾಪಟ್ ರವಿ, ನಾಗರಾಜು ಸೋನಿ, ದೇವೇಗೌಡ, ಗೋಪಾಲರೆಡ್ಡಿ, ಮಿಲಿಟರಿ ನಾರಾಯಣಪ್ಪ, ಆನಂದ ಚಕ್ರವರ್ತಿ, ಮಲ್ಟಿಮೀಡಿಯಾ ಚಂದ್ರು, ಡಾ.ಪಿ. ವೆಂಕಟೇಶ್, ಮಹೇಶ್, ಮಂಜೇಗೌಡ, ಮಧುಕುಮಾರ್, ಎಂ. ಮಹಾನ್, ಶಿವಸುಬ್ರಮಣಿ ಸಂತೋಷ್, ಸೆಟ್ರಿಂಗ್ ವೆಂಕಟೇಶ್, ಕೋದಂಡರಾಮ, ಕೆ.ನಾಗರಾಜ್, ಮದು. ಅಶೋಕ್, ಬಸವರಾಜ್, ಪಾರ್ವತಮ್ಮ, ಮಂಜುನಾಥ್, ದುಗ್ಗಯ್ಯ, ರತ್ನಮ್ಮ, ಮಂಜುನಾಥ್, ಶ್ರೀಧರ್. ನಾಗರತ್ನಮ್ಮ ಸೇರಿದಂತೆ ಕನ್ನಡ ಜಾಗೃತಿ ವೇದಿಕೆಯ ಪದಾದಿಕಾರಿಗಳು ಭಾಗವಹಿಸಿದ್ದರು. : ವರದಿ ಹರೀಶ್ ಗುರುಮೂರ್ತಿ ಆನೇಕಲ್