IMG 20220729 WA0024

Karnataka:61 ಯೋಜನೆಯ ₹3829 ಕೋಟಿಬಂಡವಾಳ ಹೂಡಿಕೆ ಅನುಮೋದನೆ….!

BUSINESS

ಒಟ್ಟು 61 ಯೋಜನೆಯ ₹3829 ಕೋಟಿಬಂಡವಾಳ ಹೂಡಿಕೆ ಅನುಮೋದನೆ- ಸಚಿವ ನಿರಾಣಿ**

  • 133 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ತೀರ್ಮಾನ
  • ರಾಜ್ಯದಲ್ಲಿ 19510 ಉದ್ಯೋಗ ಸೃಷ್ಟಿ
  • ಕೈಗಾರಿಕೆಗಳ ಉತ್ತೇಜನ ಹಾಗೂ
    ಬಂಡವಾಳ ಹೂಡಿಕೆಗೆ ವಿಶೇಷ ಒತ್ತು

ಬೆಂಗಳೂರು,ಜುಲೈ 29- ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ₹3829.46 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 61ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ 133ನೇ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಒಟ್ಟು 61 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ₹3829. 46 ಕೋಟಿ ಮೊತ್ತದ ಹೊಡಿಕೆ ಮಾಡುವುದರಿಂದ ರಾಜ್ಯದಲ್ಲಿ ಸುಮಾರು 19150 ಉದ್ಯೋಗಗಳು ಸೃಷ್ಡಿಯಾಗಲಿವೆ ಎಂದು ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದ್ದಾರೆ.
₹50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ಒಟ್ಟು 13 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಇದರಿಂದ ಅಂದಾಜು ₹2979.35 ಕೋಟಿ ಹೂಡಿಕೆಯಾಗಿ 16158 ಉದ್ಯೋಗ ಸೃಜನೆಯಾಗಲಿವೆ ಎಂದು ಹೇಳಿದರು.
ಇದೇ ವೇಳೆ ₹15 ಕೋಟೆಯಿಂದ ₹50 ಕೋಟಿ ಒಳಗಿನ 42 ಯೋಜನೆಗೆ ಹಸಿರು ನಿಶಾನೆಯನ್ನು ನೀಡಲಾಗಿದೆ. ₹774.51 ಕೋಟಿ ಹೂಡಿಕೆಯೊಂದಿಗೆ 3352 ಉದ್ಯೋಗ ಲಭಿಸಲಿವೆ.
ಹೆಚ್ಚುವರಿ ಬಂಡವಾಳ ಹೂಡಿಕೆಯ ಒಟ್ಟು 6 ಯೋಜನೆಯಿಂದ ₹75. 60 ಕೋಟಿ ಹೂಡಿಕೆಯಾಗಲಿದೆ.
ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಂದು ಎಲ್ಲಾ ‌ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರುಕಳಿಸಿರುವುದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯತ್ತ ಸಚಿವ ನಿರಾಣಿ ಅವರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.
ಉದ್ಯಮಿಗಳ ಆಕರ್ಷಣೆ , ಕೈಗಾರಿಕೆಗಳ ಪುನಶ್ಚೇತನ, ಬಂಡವಾಳ ಹೂಡಿಕೆ ಮಾಡುವವರಿಗೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯ ಸೇರಿದಂತೆ ಕೈಗಾರಿಕಾ ವಲಯದಲ್ಲಿ ಅಮೂಲಾಗ್ರ ಬದಲಾವಣೆ ಮುನ್ನುಡಿ ಬರೆಯುತ್ತಿದ್ದಾರೆ.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಇಲಾಖೆಯ ಆಯುಕ್ತೆ, ಗುಂಜನ್ ಕೃಷ್ಣ , ಕೆಐಎಎಡಿಬಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಅನುಮೋದನೆ ನೀಡಿರುವ ಯೋಜನೆಗಳು

ಟೊಯೋಟಾ ಕಿರ್ಲೋಸ್ಕರ್ ಆಟೋ ಪಾಟ್ಸ್೯ ₹445 ಕೋಟಿಹೂಡಿಕೆ, 1198 ಉದ್ಯೋಗ ಸೃಷ್ಟಿ

ಮೈಕ್ರಾನ್ ಟೆಕ್ನಾಲಜಿ ಆಪರೇಷನ್ ಇಂಡಿಯಾ ಎಲ್ ಎಲ್ ಪಿ.
₹397 ಕೋಟಿ ಹೂಡಿಕೆ ಹಾಗೂ 797 ಉದ್ಯೋಗ

ಸೀತರಾಮಂ ಇಸ್ಟಾಟ್ ಪ್ರೈ. ಲಿ. ₹376 ಕೋಟಿ ಹೂಡಿಕೆ. 400 ಉದ್ಯೋಗ

ಜಿಂದಾಲ್ ಇಂಡಸ್ಟ್ರೀಸ್ ಹೀಸಾರ್ ಪ್ರೈ. ಲಿ, ₹340 ಕೋಟಿ ಹೂಡಿಕೆ, 310 ಉದ್ಯೋಗ

ಸೂರಾಜ್ ಆಗ್ರೋ ಡಿಸ್ಡೀಲಿಸ್ ಲಿ ₹185 ಕೋಟಿ ಹೂಡಿಕೆ,
170 ಉದ್ಯೋಗ

ನಹಾರಾಸ್ ಎಂಜಿನಿಯರಿಂಗ್ ಇಂಡಿಯಾ ಪ್ರೈ.ಲಿ ₹120 ಕೋಟಿ ಹೂಡಿಕೆ, 353 ಉದ್ಯೋಗ

ಶ್ರೀ ಬ್ರಮ್ಮೇಶ್ವರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮಾಗೂರ್, ₹112 ಕೋಟಿ ಹೂಡಿಕೆ, 80 ಉದ್ಯೋಗ

ಲೂಜಾನ್ ಫಾರ್ಮಾ ಪ್ರೈ‌.ಲಿ. ₹97.50 ಕೋಟಿ ಹೂಡಿಕೆ,
246 ಉದ್ಯೋಗ

ಎನ್.ಎಸ್.ಪಿ. ಡಿಸ್ಟಿಲರಿ ಪ್ರೈ.ಲಿ ₹64.64 ಕೋಟಿ ಹೂಡಿಕೆ,
116 ಉದ್ಯೋಗ

ಸ್ಟ್ರೀಂಗ್ ಬಯೋ ಪ್ರೈ. ಲಿ ₹75 ಕೋಟಿ, 48 ಉದ್ಯೋಗ

ಋಷಿಲ್ ಡೆಕೋರ್ ಲಿ ₹72.76 ಕೋಟಿ ಹೂಡಿಕೆ, 310 ಉದ್ಯೋಗ