IMG 20220607 WA0000

ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗ ವೀಣಾ ಮುನಿರೆಡ್ಡಿ

DISTRICT NEWS ಬೆಂಗಳೂರು

ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗ ವೀಣಾ ಮುನಿರೆಡ್ಡಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯ್ತಿಯ ಒಟ್ಟು 21 ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 10 ಜನ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಕವಿತಾ ರವರಿಗೆ ಬೆಂಬಲ ನೀಡಿದ್ದು 11 ಜನ ಸದಸ್ಯರು ಕಾಂಗ್ರೆಸ್ ಬೆಂಬಲಿಸಿ ಅಭ್ಯರ್ಥಿಯಾದ ವೀಣಾ ಮುನಿರೆಡ್ಡಿಯವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ … ಹಾರ ತುರಾಯಿಗಳನ್ನು ಹಾಕಿ ಸಿಹಿ ಹಂಚಿ ಪಟಾಕಿ ಸಿಡಿಸಿ ನೂತನ ಅಧ್ಯಕ್ಷರಾದ ವೀಣಾ ಮುನಿರೆಡ್ಡಿ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಆರ್. ಕೆ ರಮೇಶ್ ವೀಣಾ ರವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿ ಪಡಿಸಲಿ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೀಣಾ ಮುನಿರೆಡ್ಡಿ ಮಾತನಾಡಿ ನನ್ನನ್ನು ಆಯ್ಕೆಗೆ ಕಾರಣರಾದ ಆನೇಕಲ್ ಶಾಸಕ ಬಿ. ಶಿವಣ್ಣ, ಆರ್ ಕೆ ಕೇಶವರೆಡ್ಡಿ, ಹರೀಶ್ ಗೌಡ, ವೇಣುಗೋಪಾಲರೆಡ್ಡಿ, ಮರಸೂರು ಡಾ.ಭಾರ್ಗವ, ಕೆಂಪುವಡೇರಹಳ್ಳಿ ಮಂಜಣ್ಣ , ತಟ್ಟನಹಳ್ಳಿ ಬೈರೇಗೌಡ, ರತೀಶ್ ಬಾಬು, ಶೇಖರ್, ಹರೀಶ್, ಪ್ರಕಾಶ್, ಸರಸ್ವತಮ್ಮ, ಮಂಜುಳಮ್ಮ, ರೂಪ, ರತ್ನಮ್ಮ, ಎಲ್ಲಾ ಸದಸ್ಯರು ಎಲ್ಲಾ ಮುಖಂಡರು ಸೇರಿದಂತೆ ಇನ್ನಿತರರ ಸಹಕಾರದಿಂದ ಅಧ್ಯಕ್ಷೆ ಆಗಿದ್ದೇನೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಅಭಿವೃದ್ಧಿ ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ವರದಿ: ಹರೀಶ್