- ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರ : ಆಂಬುಲೆನ್ಸ್ ಇಲ್ಲದೆ ವ್ಯಕ್ತಿ ಸಾವು.
- ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಕ್ಕೆ ಜಮೀನು ನೀಡಿದ ಕುಟುಂಬಕ್ಕೆ ಬಂತು ದುರಂತ :
ಪಾವಗಡ : ತಾಲ್ಲೂಕಿನ ವೈ.ಎನ್. ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಶುಕ್ರವಾರರಂದು ಮಧ್ಯಾಹ್ನ 12 ಗಂಟೆಗೆ ಒಬ್ಬ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಎರಡು ಮೂರು ದಿನ ಹಿಂದೆ ಪಾವಗಡ ತಾಲ್ಲೂಕು ವ್ಯಾಪ್ತಿಯ ಬರುವ ಲಿಂಗದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಘಟನೆ ಮಾಸುವ ಮುನ್ನವೆ ಇಂದು ಮತ್ತೆ ವೈ.ಎನ್.ಹೊಸಕೋಟೆ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇಲ್ಲದೆ ಒಬ್ಬ ಮೃತಪಟ್ಟ ಘಟನೆ ವರಧಿಯಾಗಿದೆ ಮೃತರನ್ನು ಇದೆ ಗ್ರಾಮದ ಸೈಯದ್ ಅಕ್ರಮ್ (42) ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.
ಮಧ್ಯಾಹ್ನ 12 ಗಂಟೆ ಸಮಯಕ್ಕೆ ಸರಿಯಾಗಿ ಉಸಿರಾಟದ ತೊಂದರೆ ಉಂಟಾಗಿದೆ ಕೂಡಲೆ ವೈ.ಎನ್.ಹೊಸಕೋಟೆ ಹೊರವಲಯದಲ್ಲಿ ಇರುವ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಕೂಡಲೆ ಸ್ವಂದಿಸಿದ ವೈದ್ಯರು ಇವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಈ ಕೂಡಲೆ ನೀವು ಪಾವಗಡ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಕೂಡಲೆ ಆಂಬುಲೆನ್ಸ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಆಂಬುಲೆನ್ಸ್ ಬರುವುದು ಒಂದೂವರೆ ಗಂಟೆ ತಡವಾದ ಕಾರಣ ವ್ಯಕ್ತಿ ಯ ಸಾವು ಸಂಭವಿಸಿದೆ.

ವೈ ಎನ್ ಹೊಸಕೋಟೆಯ ದೌರ್ಭಾಗ್ಯ :
ನಮ್ಮ ಊರಿನಲ್ಲಿ ಸುಮಾರು 16 ಸಾವಿರ ಜನಸಂಖ್ಯೆ ಇದ್ದು ಸರಿಯಾದ ಚಿಕಿತ್ಸೆ ಸೌಲಭ್ಯ ಇಲ್ಲದೆ ಇರುವುದು ನಮ್ಮ ದೌರ್ಭಾಗ್ಯ ಇಂದು ನನ್ನ ತಮ್ಮನ ಸಾವಿಗೆ ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಇರುವುದೆ ಮುಖ್ಯ ಕಾರಣ ಇವನ ಸಾವಿಗೆ ಸರ್ಕಾರದ ವೈಪಲ್ಯವೆ ಕಾರಣ ಎಂದು ಮೃತ ವ್ಯಕ್ತಿಯ ಅಣ್ಣ ಸೈಯದ್ ನಯಾಜ್ ತಮ್ಮ ಹಳಲನ್ನು ತೊಡಿಕೊಂಡರು.
ಆರೋಗ್ಯ ಕೇಂದ್ರ ನಿರ್ಮಾಣ ಕ್ಕೆ ಜಮೀನು ನೀಡಿದ ಕುಟುಂಬಕ್ಕೆ ಬಂತು ದುರಂತ :
ಊರಿನ ಜನರಿಗೆ ಅನುಕೂಲ ಆಗಲಿ ಎಂದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕೊಟ್ಟಿದ್ದೆನೆ ಆದರೆ ಇಂದು ಇದೆ ಜಾಗದಲ್ಲಿ ನನ್ನ ಮಗ ಸರಿಯಾದ ವ್ಯವಸ್ಥೆ ಇಲ್ಲದೆ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ನನ್ನ ಮಗನಿಗೆ ಈ ಪರಿಸ್ಥಿತಿ ಇದ್ದರೆ ಇನ್ನು ಸಾರ್ವಜನಿಕರ ಪರಿಸ್ಥಿತಿ ಹೇಗೆ ಇರಬೇಕು ನನ್ನ ಮಗನಿಗೆ ಬಂದ ಪರಿಸ್ಥಿತಿ ಬೇರೆ ಯಾವ ಮಕ್ಕಳಿಗೂ ಬೇಡ ಕೂಡಲೆ ಸರ್ಕಾರ ಇದರ ಬಗ್ಗೆ ಗಮನ ಆರಿಸಿ ಸೂಕ್ತ ರೀತಿಯಲ್ಲಿ ಸರಿಯಾದ ವೈದ್ಯರು , ಚಿಕಿತ್ಸೆ ಸಲಕರಣೆಗಳು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮೃತ ವ್ಯಕ್ತಿಯ ತಂದೆ ಸಾಧಿಕ್ ಸಾಬ್ ಆಗ್ರಹಿಸಿದರು.
ಸುಮಾರು ತಿಂಗಳಿಂದ ಸಮುದಾಯದ ಆರೋಗ್ಯ ಕೇಂದ್ರದಲ್ಲೆ ಕೆಟ್ಟು ನಿಂತಿರುವ ಸರ್ಕಾರಿ ಆಂಬುಲೆನ್ಸ್ ಸರಿಯಾದ ನಿರ್ವಹಣೆ ಮಾಡದೆ ಸರ್ಕಾರಿ ಆಂಬುಲೆನ್ಸ್ ಇದ್ದರು ಅದನ್ನು ಬಳಕೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಕ್ಕೆ ಜ್ವಲಂತ ಸಾಕ್ಷಿ ಯಾಗಿದೆ.
ಆಸ್ಪತ್ರೆಯಲ್ಲೆ ಸಿಬ್ಬಂದಿಯನ್ನು ಆಂಬುಲೆನ್ಸ್ ಬಗ್ಗೆ ವಿಚಾರಿಸಿದಾಗ ನಮ್ಮ ಇಡಿ ಪಾವಗಡ ತಾಲ್ಲೂಕಿನಲ್ಲಿ 108 ಕೆವಲ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಇಂತಹ ತುರ್ತು ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಸ್ಥಳೀಯರ ಖಾರು – ಬಾರು – ಸಾರ್ವಜನಿಕರ ಪರದಾಟ :
ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಅತಿ ಹೆಚ್ಚಿನದಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಸ್ಥಳಿಯರೆ ಆಗಿರುವ ಕಾರಣ ಅವರಲ್ಲಿ ಅವರಿಗೆ ಬಿನ್ನಬಿಪ್ರಾಯಗಳು ಉಂಟಾಗಿ ಸಾರ್ವಜನಿಕರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರ ಎಂಬ ಅಂಶ ಸಾರ್ವಜನಿಕರಿಂದ ವ್ಯಕ್ತವಾಗಿದೆ ಮತ್ತು ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಮರೀಚಿಕೆ ಯಾಗಿದೆ. ಪಾವಗಡ ತಾಲ್ಲೂಕಿನಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಇರುವ ಪಟ್ಟಣ ದಲ್ಲಿ ಅನುಭವಿ ವೈದ್ಯರನ್ನು ನೀಡುವಲ್ಲಿ ಗ್ಯಾರಂಟಿ ಸರ್ಕಾರ ವಿಫಲವಾಗಿದೆ.

ಪ್ರತಿ ನಿತ್ಯ ಇಲ್ಲಿ ಸುಮಾರು 300 ರಿಂದ 350. ಜನ ಈ ಆರೋಗ್ಯ ಕೇಂದ್ರ ಕ್ಕೆ ತಪಾಸಣೆಗೆ ಬರುತ್ತಾರೆ ಆದರೆ ದಾದಿಯರೆ ಚುಚ್ಚುಮದ್ದು ನೀಡಬೇಕು ದಾದಿಯರೆ ಔಷದಿಗಳನ್ನು ನೀಡಬೇಕಾದ ಪರಿಸ್ಥಿತಿ ಇದೆ. ಪಾರ್ಮಸಿ ಸಿಬ್ಬಂದಿ ಇದ್ದರು ಇಲ್ಲದಂತೆ ಆಗಿದೆ
ವೈ ಎನ್ ಹೊಸಕೋಟೆ ಗ್ರಾಮದ ಜನರಿಗೆ ಆರೋಗ್ಯದ ಗ್ಯಾರೆಂಟಿ ಇಲ್ಲವಾಗಿದೆ ಎನ್ಬುತ್ತಾರೆ ಸಾರ್ಜನಿಕರು.
ವರದಿ : ಶ್ರೀನಿವಾಸಲು ಎ
