IMG 20260810 WA0049

ಪಾವಗಡ : ವಿದ್ಯಾರ್ಥಿ ದತ್ತಾಂಶ ನಿರ್ವಹಣಾ ಸಹಾಯಕರ ಹುದ್ದೆ ಗೆ ಅರ್ಜಿ ಆಹ್ವಾನ…!

DISTRICT NEWS ತುಮಕೂರು

 

ಪಾವಗಡ : ವಿದ್ಯಾರ್ಥಿ ದತ್ತಾಂಶ ನಿರ್ವಹಣಾ ಸಹಾಯಕರ ಹುದ್ದೆ ಗೆ ಅರ್ಜಿ ಆಹ್ವಾನ

ಪಾವಗಡ: ಪಟ್ಟಣದ ಬಳ್ಳಾರಿ ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢ ಶಾಲಾ ವಿಭಾಗ) ಯಲ್ಲಿ ಕಾರ್ಯನಿರ್ವಹಿಸಲು ವಿದ್ಯಾರ್ಥಿ ದತ್ತಾಂಶ ನಿರ್ವಹಣಾ ಸಹಾಯಕರು ಹುದ್ದೆ 1 ಭದ್ರತಾ ಸಿಬ್ಬಂದಿ 1 ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಾಲೆಯ ಉಪ ಪ್ರಾಂಶುಪಾಲರಾದ ಲಕ್ಷ್ಮಿ ನರಸಮ್ಮ ಸೋಮವಾರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ದತ್ತಾಂಶ ನಿರ್ವಹಣಾ ಸಹಾಯಕರ ಹುದ್ದೆಗೆ ಪತಿ ಮಾಹೆಯಾನ: ರೂ.10,000/- ಸಂಭಾವನೆ ನೀಡಲಿದ್ದು,
ವಿದ್ಯಾರ್ಹತೆ: ಯಾವುದೇ ಪದವಿ ಉತ್ತೀರ್ಣ ಹಾಗೂ ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರಗಳು. ಹೆಚ್ಚಿನ ಕಂಪ್ಯೂಟರ್ ಕೋರ್ಸ್ ಮಾಡಿದವರಿಗೆ ಆದ್ಯತೆ. ಮತ್ತು ಡೆಮೋ ಮೂಲಕ ಆಯ್ಕೆ ಮಾಡಲಾಗುವುದು ಎಂದು.
ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳಾದ ಎಸ್ ಎಸ್ ಎಲ್ ಸಿ ಅಂಕಪಟ್ಟಿ,. ಪಿಯುಸಿ/ತತ್ಸಮಾನ ಅರ್ಹತಾ ಪ್ರಮಾನ ಪತ್ರಗಳು, ಪದವಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳು ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್,. ಬ್ಯಾಂಕ್ ಖಾತೆ ವಿವರಗಳು
ಇತ್ತೀಚಿನ 2 ಭಾವ ಚಿತ್ರಗಳು ಸಲ್ಲಿಸ ಬೇಕೆಂದು.

ಭದ್ರತಾ ಸಿಬ್ಬಂದಿ ಹುದ್ದೆಗೆ ಎಸ್ ಎಸ್ ಎಲ್ ಸಿ ಉತ್ತಿರ್ಣರಾಗಿರ ಬೇಕು ಪತಿ ಮಾಹೆಯಾನ: ರೂ.10,000/- ಸಂಭಾವನೆ ನೀಡಲಾಗುವುದೆಂದು ಅರ್ಜಿ ಸಲ್ಲಿಸುವ ವೇಳೆ ಅಗತ್ಯ ದಾಖಲೆಗಳಾದ
ಎಸ್ ಎಸ್.ಎಲ್.ಸಿ ಅಂಕಪಟ್ಟಿ, ಆಧಾರ್ ಕಾರ್ಡ್
ಬ್ಯಾಂಕ್ ಖಾತೆ ವಿವರಗಳು, ಇತ್ತೀಚಿನ 2 ಭಾವ ಚಿತ್ರಗಳು ಸಲ್ಲಿಸಬೇಕೆಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-12.08.2026 ಶಾಲೆಗೆ ಬಂದು ಖುದ್ದಾಗಿ ಅರ್ಜಿ ಸಲ್ಲಿಸಬಹುದು ಎಂದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ:- 9482940528 ಕರೆ ಮಾಡಬೇಕಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *