*ಮಳೆನೀರಿಗೆ ಕೊಚ್ಚಿ ಹೋದ ಹನುಮಂತಪುರ ಗ್ರಾಮದ ನಿವಾಸಿ ದ್ಯಾವಪ್ಪ……ಕೊಚ್ಚಿ ಹೋದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್*
ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ಹನುಮಂತಪುರ ಗ್ರಾಮದ ವಾಸಿಯಾದ ಸುಮಾರು 64 ವರ್ಷ ವಯಸ್ಸುಳ್ಳ ದ್ಯಾವಪ್ಪ ಬಿನ್ ನರಸಿಂಹಯ್ಯ ಎಂಬುವರು ದಿನನಿತ್ಯದಂತೆ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದರು.
ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುವ ಸಂದರ್ಭದಲ್ಲಿ ಮಳೆ ಅತಿ ಹೆಚ್ಚು ಬೀಳುತ್ತಿರುವ ಕಾರಣ ಹನುಮಂತಪುರ ಕೆರೆಯ ಕೋಡಿ ನೀರು ಮತ್ತು ಊರಿನಲ್ಲಿ ಅರೆಯುವ ನೀರು, ಕಾಲುವೆಗೆ ಬಂದು ರಭಸವಾಗಿ ಹರಿದು ಹೋಗುತ್ತಿರುವಾಗ.
ಸಂಜೆ ಸುಮಾರು ಏಳು ಗಂಟೆ ಸಮಯದಲ್ಲಿ ದ್ಯಾವಪ್ಪ ಎಂಬುವರು ಹರಿಯುವ ನೀರಿನ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುತ್ತಾರೆ. ಮಳ ರಾತ್ರಿಯಲ್ಲ ತುಂಬಾ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಚರಣೆ ಕೈಗೊಳ್ಳಲು ಹಾಗೂ ಹುಡುಕಾಟ ನಡೆಸಲು ಆಗಿರುವುದಿಲ್ಲ.
ಕೊಚ್ಚಿ ಹೋದ ವ್ಯಕ್ತಿಯ ವಿಚಾರ ತಿಳಿದ ತಕ್ಷಣ ಬೆಳಿಗ್ಗೆಗೆ ತಹಶೀಲ್ದರಾದ ಟಿ ಜಿ ಸುರೇಶ್ ಆಚಾರ್ ಆರ್ ಐ ವೇಣುಗೋಪಾಲ, ಡಿವೈಎಸ್ಪಿ ವೆಂಕಟೇಶ್ ನಾಯ್ಡು. ಸರ್ಕಲ್ ಇನ್ಸ್ಪೆಕ್ಟರ್ ಎಂ ಎಸ್ ಸರ್ದಾರ ಮಿಡಿಗೇಶಿ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ತಾರಾ ಸಿಂಗ್ .ಗ್ರಾಮ ಲೆಕ್ಕಾಧಿಕಾರಿ ಕೆಂಪಯ್ಯ. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆವಿ ವೆಂಕಟಚಲಪ. ಡಿಎಂ ನಾಗರಾಜು.. ಚಾಲಕ ಎಂ ವಿ ರಾಘವೇಂದ್ರ. ಅಗ್ನಿಶಾಮಕರಾದ ಅನಿಲ್ ದೊಡ್ಡಮನಿ ಮಂಜಣ್ಣ ಪಿ ಇವರೆಲ್ಲರೂ ಸಹ ಹುಡುಕಾಟ ಕಾರ್ಯಾಚರಣೆಯ ಸ್ಥಳದಲ್ಲಿ ಹಾಜರಿದ್ದರು.
ಕೊಚ್ಚಿ ಹೋದ ವ್ಯಕ್ತಿಯ ಹುಡುಕಾಟವನ್ನು ಹನುಮಂತಪುರದಿಂದ ಅಪೇನಹಳ್ಳಿ ಗ್ರಾಮದವರಿಗೂ ಹರಿಯುವ ಕಾಲುವೆಯಲ್ಲಿ ಜೆಸಿಪಿ ಮೂಲಕ ಎಷ್ಟೇ ಹುಡುಕಾಟ ನಡೆಸಿದರು ಕೂಡ ಕೊಚ್ಚಿ ಹೋದ ವ್ಯಕ್ತಿಯ ಸುಳಿವು ಮಾತ್ರ ಸಿಗಲೆ ಇಲ್ಲ ಇನ್ನೂ ಹೆಚ್ಚಿನ ಹುಡುಕಾಟ ನಡೆಸಲು. ಮುಂದುವರಿಸಿದಾಗ ತುಂಬಾ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಸಂಜೆವರೆಗೂ ಗ್ರಾಮದಲ್ಲಿ ಇದ್ದು ಮಳೆಯ ನಿಂತ ತಕ್ಷಣ ಹುಡುಕಾಟ ಕಾರ್ಯಾಚರಣೆ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿರುತ್ತಾರೆ.
ವರದಿ.. ಲಕ್ಷ್ಮಿಪತಿ ದೊಡ್ಡ ಎಲ್ಕೂರು