ರಾಷ್ಟ್ರಮಟ್ಟದಲ್ಲಿ ಪೋಲಾರ್ ಬೇರ್ ನ 200ನೇ ಮಳಿಗೆ ಉದ್ಘಾಟನೆ; ಬೆಂಗಳೂರಿನಲ್ಲೇ 100ನೇ ಮಳಿಗೆ ಆರಂಭ
ಆಗಸ್ಟ್ 10, ಬೆಂಗಳೂರು: ಐಸ್ ಕ್ರೀಮ್ ಪ್ರಿಯರ ನೆಚ್ಚಿನ ತಾಣ ದಿ ಐಸ್ ಕ್ರೀಮ್ ಸಂಡೇ ಝೋನ್ ಪೋಲಾರ್ ಬೇರ್, ಬೆಂಗಳೂರಿನಲ್ಲಿ ತನ್ನ 100ನೇ ಮಳಿಗೆ ಉದ್ಘಾಟಿಸಿದೆ. ರಾಷ್ಟ್ರಮಟ್ಟದಲ್ಲಿ ತನ್ನ 200ನೇ ಮಳಿಗೆಯನ್ನು ಪ್ರಾರಂಭಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ಸಂಪೂರ್ಣ ಭಾರತೀಯ ಮಾಲೀಕತ್ವದ ಹಾಗೂ ಸ್ವಯಂ-ಬಂಡವಾಳ ಹೂಡಿಕೆಯೊಂದಿಗೆ ಬೆಳೆದಿರುವ ಪೋಲಾರ್ ಬೇರ್, 2008ರಲ್ಲಿ ಬೆಂಗಳೂರಿನ ಐಟಿಪಿಎಲ್ ಬಳಿ ಕೇವಲ ಒಂದು ಸಣ್ಣ ಮಳಿಗೆಯಿಂದ ಪ್ರಾರಂಭವಾಗಿತ್ತು. ಇಂದು ದೇಶದ 35ಕ್ಕೂ ಹೆಚ್ಚು ನಗರಗಳಲ್ಲಿ 200ಕ್ಕೂ ಅಧಿಕ ಡೈನ್-ಇನ್ ಸಂಡೇ ಪಾರ್ಲರ್ ಗಳನ್ನು ಹೊಂದುವ ಮೂಲಕ ಭಾರತದ ಅತಿದೊಡ್ಡ ದೇಶೀಯ ಡೆಸರ್ಟ್ ಬ್ರ್ಯಾಂಡ್ ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಉದ್ಯಮಿ ಕಿಶೋರ್ ರೈ ಅವರಿಂದ ಸ್ಥಾಪಿತವಾದ ಈ ಸಂಸ್ಥೆ, ಗುಣಮಟ್ಟ, ಹೊಸತನ ಮತ್ತು ಮರೆಯಲಾಗದ ಗ್ರಾಹಕ ಅನುಭವಕ್ಕೆ ಆದ್ಯತೆ ನೀಡುತ್ತಾ ಸ್ಥಿರವಾಗಿ ಬೆಳೆದಿದೆ. ಯಾವುದೇ ಹೊರಗಿನ ಫಂಡಿಂಗ್ ಇಲ್ಲದೆ ಸುಸ್ಥಿರ ಬೆಳವಣಿಗೆ ಕಾಣುತ್ತಿರುವ ಈ ಬ್ರ್ಯಾಂಡ್, ಲಕ್ಷಾಂತರ ಗ್ರಾಹಕರ ನಂಬಿಕೆ ಮತ್ತು ಬಲವಾದ ಫ್ರಾಂಚೈಸಿ ಜಾಲವನ್ನು ನಿರ್ಮಿಸಿಕೊಂಡು ಪ್ರೀಮಿಯಂ ಡೆಸರ್ಟ್ ಮಾರುಕಟ್ಟೆಯಲ್ಲಿ ತನ್ನದೇ ಆದ ಶ್ರೇಷ್ಠ ಸ್ಥಾನ ಕಾಯ್ದುಕೊಂಡಿದೆ.
ವೈವಿಧ್ಯಮಯ ಐಸ್ ಕ್ರೀಮ್ ಸಂಡೇಗಳು, ಶೇಕ್ ಗಳು, ಸಾರ್ಬೆಟ್ ಗಳು ಹಾಗೂ ಐಸ್ ಕ್ರೀಮ್ ಕೇಕ್ ಗಳ ಮೂಲಕ ಬೃಹತ್ ಗ್ರಾಹಕ ಬಳಗವನ್ನು ಇದು ಹೊಂದಿದೆ. ಸಿಹಿ ತಿನಿಸುಗಳನ್ನು ಕೇವಲ ಆಹಾರವಾಗಿಷ್ಟೇ ಅಲ್ಲದೆ, ಕುಟುಂಬ ಮತ್ತು ಸ್ನೇಹಿತರು ಒಂದೆಡೆ ಸೇರಿ ಸಂಭ್ರಮಿಸುವ ಸುಂದರ ಅನುಭವವನ್ನಾಗಿ ಬದಲಾಯಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ.
ಈ ಅಭೂತಪೂರ್ವ ಮೈಲಿಗಲ್ಲಿನ ಕುರಿತು ಮಾತನಾಡಿದ ಪೋಲಾರ್ ಬೇರ್ ಸಂಸ್ಥಾಪಕ ಕಿಶೋರ್ ರೈ ಅವರು, “ಪ್ರತಿಯೊಬ್ಬ ಗ್ರಾಹಕನಿಗೂ ಮರೆಯಲಾಗದ ಐಸ್ ಕ್ರೀಮ್ ಸಂಡೇ ಅನುಭವ ನೀಡುವ ಸರಳ ದೃಷ್ಟಿಕೋನದೊಂದಿಗೆ 2008ರಲ್ಲಿ ನಮ್ಮ ಪಯಣ ಆರಂಭವಾಯಿತು. ಆ ಸಮಯದಲ್ಲಿ ಮಾರುಕಟ್ಟೆಯು ಹೆಚ್ಚಾಗಿ ಸಾಮಾನ್ಯ ಐಸ್ ಕ್ರೀಮ್ ಸ್ಕೂಪ್ ಗಳನ್ನು ಮಾರುವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ ಸಂಡೇ ವಿಭಾಗದಲ್ಲಿ ಅಪಾರ ಸಾಮರ್ಥ್ಯವಿರುವುದನ್ನು ನಾವು ಗುರುತಿಸಿದೆವು. ಅತ್ಯುತ್ತಮ ಡೈರಿ ಪದಾರ್ಥಗಳು ಹಾಗೂ ಎಚ್ಚರಿಕೆಯಿಂದ ಸಿದ್ಧಪಡಿಸಿದ ಪಾಕವಿಧಾನ ಬಳಸಿ, ಗ್ರಾಹಕರಿಗೆ ರೋಚಕ ರುಚಿಯ ಅನುಭವ ನೀಡಲು ಮುಂದಾದೆವು. ಇಂದು ಪ್ರತಿಯೊಂದು ಮಳಿಗೆಯೂ ಜನರು ದೈನಂದಿನ ಕ್ಷಣಗಳನ್ನು ಸಂಭ್ರಮಾಚರಣೆ ಮಾಡುವ ತಾಣವಾಗಿದೆ. ಬೆಂಗಳೂರಿನಲ್ಲೇ 100 ಪಾರ್ಲರ್ ಗಳನ್ನು ತಲುಪಿರುವುದು ನಮ್ಮ ಆಶಯಕ್ಕೆ ಸಿಕ್ಕ ಜಯ. ಭಾರತದ ಒಂದೇ ನಗರದಲ್ಲಿ ಪ್ರಮುಖ ಡೆಸರ್ಟ್ ಚೈನ್ ಈ ಮಟ್ಟದ ಬೆಳವಣಿಗೆ ಸಾಧಿಸಿರುವುದು ವಿರಳ. ನಮ್ಮ ಗ್ರಾಹಕರ ಅಚಲ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಸದಾ ಚಿರಋಣಿ” ಎಂದು ಸಂತಸ ಹಂಚಿಕೊಂಡರು.
ಸಂಸ್ಥೆಯ ವಾಣಿಜ್ಯ ಮತ್ತು ಕಾರ್ಯಾಚರಣೆ ವಿಭಾಗದ ಹಿರಿಯ ವೈಸ್ ಪ್ರೆಸಿಡೆಂಟ್ ಪ್ರಶಾಂತ್ ಪ್ರಕಾಶ್ ಮಾತನಾಡಿ, “ಪೋಲಾರ್ ಬೇರ್ ನಲ್ಲಿ ಮಾಡುವ ಪ್ರತಿಯೊಂದು ಕೆಲಸದಲ್ಲೂ ಗುಣಮಟ್ಟಕ್ಕೆ ಮೊದಲ ಆದ್ಯತೆ. ಅತ್ಯುತ್ತಮ ಪದಾರ್ಥಗಳ ಸಂಗ್ರಹಣೆಯಿಂದ ಹಿಡಿದು ಪ್ರತಿಯೊಂದು ಔಟ್‌ಲೆಟ್‌ನಲ್ಲಿ ಕಟ್ಟುನಿಟ್ಟಾದ ಗುಣಮಟ್ಟ ಕಾಯ್ದುಕೊಳ್ಳುವವರೆಗೆ ನಾವು ವಿಶೇಷ ಗಮನ ಹರಿಸುತ್ತೇವೆ. ಗ್ರಾಹಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ನವೀನ ಫ್ಲೇವರ್‌ಗಳು ಹಾಗೂ ಸಂಡೇ ಕಾಂಬಿನೇಷನ್‌ಗಳನ್ನು ಪರಿಚಯಿಸಲಾಗುತ್ತಿದೆ. ರುಚಿ, ತಾಜಾತನ ಮತ್ತು ಅತ್ಯುತ್ತಮ ಸೇವೆಯನ್ನು ಒದಗಿಸುವುದೇ ನಮ್ಮ ಮುಖ್ಯ ಗುರಿ” ಎಂದರು.
ಭಾರತೀಯರಲ್ಲಿ ಡೆಸರ್ಟ್ ಸವಿಯುವ ಶೈಲಿ ಸಂಪೂರ್ಣ ಬದಲಾಗಿದೆ. ಒಮ್ಮೆ ಅಪರೂಪಕ್ಕೊಮ್ಮೆ ತಿನ್ನುವ ತಿನಿಸಾಗಿದ್ದ ಡೆಸರ್ಟ್, ಇಂದು ರಾತ್ರಿಯ ಊಟದ ನಂತರ ಕುಟುಂಬ ಸಮೇತ ಸವಿಯುವ ಅಭ್ಯಾಸವಾಗಿ ಬದಲಾಗಿದೆ. ಗ್ರಾಹಕರ ಈ ಜೀವನಶೈಲಿಗೆ ತಕ್ಕಂತೆ ಪೋಲಾರ್ ಬೇರ್ ಹ್ಯಾಂಡ್‌ಕ್ರಾಫ್ಟೆಡ್ ಸಂಡೇಗಳು ಹಾಗೂ ಆಕರ್ಷಕ ಡೈನ್-ಇನ್ ಸೌಲಭ್ಯವನ್ನು ನೀಡುತ್ತಾ ಬಂದಿದೆ.
ಕಂಪನಿಯ ಶೇ. 65ರಷ್ಟು (ಮೂರರಲ್ಲಿ ಎರಡರಷ್ಟು) ಮಳಿಗೆಗಳು ದೀರ್ಘಕಾಲದ ಫ್ರಾಂಚೈಸಿ ಪಾಲುದಾರರಿಂದ ಯಶಸ್ವಿಯಾಗಿ ನಡೆಸಲ್ಪಡುತ್ತಿವೆ. ಕಂಪನಿ-ಮಾಲೀಕತ್ವ ಮತ್ತು ಫ್ರಾಂಚೈಸಿ ಮಾದರಿಯ ಹೈಬ್ರಿಡ್ ನೆಟ್ ವರ್ಕ್ ಮೂಲಕ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಸಂಸ್ಥೆ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಹಾಲಿ ಮಾರುಕಟ್ಟೆಗಳನ್ನು ಮತ್ತಷ್ಟು ವಿಸ್ತರಿಸುವುದರ ಜೊತೆಗೆ, ದೇಶದ ಹೊಸ ರಾಜ್ಯ ಹಾಗೂ ನಗರಗಳಿಗೂ ಹೆಜ್ಜೆ ಇಡಲು ಪೋಲಾರ್ ಬೇರ್ ಬ್ಲೂಪ್ರಿಂಟ್ ಸಿದ್ಧಪಡಿಸಿದೆ.
