ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಕರೆಗೆ ಐವತ್ತು ಸಾವಿರ ಬೆಳೆ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮನವಿ.
ಪಾವಗಡ: ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದು ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ದಾವಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾ ರಪ್ಪ ತಿಳಿಸಿದರು.
ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಸೋಮವಾರ ಬರ ವೀಕ್ಷಣೆಗಾಗಿ ಆಗಮಿಸಿದ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನಲ್ಲಿ ಇರುವ ಕೆರೆಗಳಲ್ಲಿ ಬೆಳೆದಿರುವ ಗಿಡ ಗಂಟೆಗಳು ಕುರುಚಲು ಗಿಡಗಳು. ಸೀಮೆ ಜಾಲಿ ಗಿಡಗಳು ಸ್ವಚ್ಚಗೊಳಿಸಿ 3 ಅಡಿಗಳಿಂದ 4 ಅಡಿಗಳು ಕೆರೆ ಹೊಳು ತೆಗೆದು ಕೆರೆ ಸ್ವಚ್ಛ ಗೊಳಿಸಿ 3 ಅಡಿಗಳಿಂದ 4 ಅಡಿಗಳಿಂದ ಹೂಳು ತೆಗೆಸಿ ಕೆರೆ ಸ್ವಚ್ಚಮಾಡಿ ನೀರು ತುಂಬಿಸುವ ಕಾರ್ಯವನ್ನು ಸರ್ಕಾರವು ಶೀಘ್ರವೇ ಮಾಡಿಸಿ
ತುಮಕೂರು ಜಿಲ್ಲೆಯ ನಾಲ್ಕು ತಾಲೂಕುಗಳ ರೈತರು ಬರದಿಂದ ತೀವ್ರ ತತ್ತರಿಸಿ ಹೋಗಿದ್ದು , ನಾಲ್ಕು ತಾಲೂಕುಗಳಿಗೆ ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ, ಹೇಮಾವತಿ ನೀರನ್ನು ಹರಿಸಬೇಕೆಂದು ಮನವಿ ಮಾಡಿದರು.
2025-26 ನೇ ಸಾಲಿನಲ್ಲಿ ರೈತರು ಅಲ್ಪ ಸ್ವಲ್ಪ ಮಳೆಗೆ ಸಾಲ ಸೂಲ ಮಾಡಿಕೊಂಡು ರೈತರುಗಳು ಉಳುಮೆ ಮಾಡಿಕೊಂಡು ಶೇಂಗಾ ತೊಗರಿ ಜೋಳ ರಾಗಿ ಮತ್ತು ಇನ್ನು ಮುಂತಾದ ಬೀಜಗಳನ್ನು ಹಾಕಿ ಸಕಾಲದಲ್ಲಿ ಮಳೆ ಬರದೆ ಮಳೆ ಬರದೇ ಇಟ್ಟ ಫಸಲುಗಳು ಸಂಪೂರ್ಣವಾಗಿ ಒಣಗಿ ನೆಲ ಕಚ್ಚಿ ಓಣಗಿ ಹೋಗಿದ್ದು
ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಪರಿಹಾರವಾಗಿ ಎಕರೆಗೆ 40 ರಿಂದ ಐವತ್ತು ಸಾವಿರ ರೂ ನೀಡಬೇಕೆಂದು ತಕ್ಷಣವೇ ಬರ ಪರಿಹಾರ ನಿದಿಯಿಂದ ಶೀಘ್ರವೇ ಬರ ಪರಿಹಾರ ಮುಂಜೂರು ಮಾಡಿಸಿ ಕೊಡಬೇಕೆಂದು ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಹೆಚ್ ವಿ ವೆಂಕಟೇಶ್, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಶಿವು, ಶಿವು ಚಿತ್ತಯ್ಯ ರಾಜಣ್ಣ ನಾರಾಯಣಪ್ಪ, ಮುಂತಾದವರು ಹಾಜರಿದ್ದರು.
ವರದಿ : ಶ್ರೀನಿವಾಸಲು ಎ
