ಪಾವಗಡ ತಾಲೂಕಿನಲ್ಲಿ ಕಡಲೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಉಪಮುಖ್ಯಮಂತ್ರಿ ಡಾ ಜಿ ಎಸ್ ಪರಮೇಶ್ವರ್.
ಪಾವಗಡ: ಮಳೆಯ ಅಭಾವ ಕೇವಲ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ ಇಡೀ ರಾಜ್ಯದಲ್ಲಿಯೇ ಬರದ ಛಾಯೆ ಇದೆ ಎಂದು ಉಪಮುಖ್ಯಮಂತ್ರಿ, ಡಾ. ಜಿ ಎಸ್ ಪರಮೇಶ್ವರ್ ತಿಳಿಸಿದರು.
ಪಟ್ಟಣದ ಶಿರಾ ರಸ್ತೆಯ ನಂದಿನಿ ಉಪ ಕೇಂದ್ರದ ಲ್ಲಿ ಸೋಮವಾರ ಹಮ್ಮಿಕೊಂಡಿದ ರಾಸುಗಳ ಮರಣ ಪರಿಹಾರ ಚೇಕ್ ಹಾಗೂ ಮೇವು ಕಿಟ್ ಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಾಡಿಕೆಯಂತೆ ತಾಲೂಕಿನಲ್ಲಿ 19ಸಾವಿರ ಹೆಕ್ಟರ್ ನಲ್ಲಿ ಕಡಲೆ ಬೆಳೆ ಹಾಕಬೇಕಿದ್ದು, ಮಳೆ ಅಭಾವದಿಂದ ಕೇವಲ 4 ಸಾವಿರ ಹೆಕ್ಟೇರ್ ನಲ್ಲಿ ಕಡಲೆಬೀಜ ಬಿತ್ತನೆಯಾಗಿದ್ದು ಮಳೆ ಕೈಕೊಟ್ಟ ಹಿನ್ನೆಲೆ ಕಡಲೆ ಗಿಡಗಳು ನಾಲ್ಕು ಇಂಚು ಬೆಳೆ ಬೆಳೆದು ಸಂಪೂರ್ಣವಾಗಿ ಒಣಗಿ ಹೋಗಿವೆ ಎಂದರು.
ಕುಡಿಯುವ ನೀರಿನ ಸಮಸ್ಯೆ ತುಂಬಾ ಗಂಭೀರವಾಗಿದ್ದು, ಕೆರೆಗಳು, ಬೋರ್ವೆಲ್ ಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದು ರೈತರು ಸಂಕಷ್ಟಕೀಡಾಗಿದ್ದಾರೆ ಎಂದು, ಈ ರೀತಿಯ ಬರ ಪರಿಸ್ಥಿತಿ ರಾಜ್ಯದಲಿ ತಾನೆಂದು ನೋಡಿಲ್ಲವೆಂದರು.
ಕೊಳವೆ ಬಾವಿಗಳಲಿ ನೀರು ಇಲ್ಲ,ಬಹುತೇಕ ಕೆರೆಗಳು ಬಿತ್ತಿರುವುದಿಂದ ಕೆರೆಗಳಲ್ಲಿ ಸಹ ನೀರಿಲ್ಲ ,ಆದ್ದರಿಂದ ಮೇವಿನ ಕೊರತೆಯಾಗದಂತೆ ಹಾಲು ಒಕ್ಕೂಟದಿಂದ ಮೇವಿನ ಬೀಜ ನೀಡಲು ಅಧ್ಯಕ್ಷರಿಗೆ ಸೂಚನೆ ನೀಡಿದ್ದೇನೆ ಎಂದರು .ಇಡಿ ಜಿಲ್ಲೆಯಲ್ಲಿ ಒಂದು ಲಕ್ಷ ಕಿಟ್ ಗಳನ್ನು ಹಾಲು ಒಕ್ಕೂಟದಿಂದ ನೀಡಲಾಗುತ್ತದೆ ಈ ಮೇವಿನ ಕಿಟ್ ಗಳನ್ನು ಬಳಸಿಕೊಂಡು ರೈತರು ನೀರು ಇರುವ ಕಡೆ ಮೇವು ಬೆಳಸಿಕೊಂಡು ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಿ ನೀರು ಮತ್ತು ಮೇವನ್ನು ಮಿತವಾಗಿ ಬಳಸಿ ಎಂದರು.ಪ್ರಕೃತಿ ವಿಕೋಪ,ಮತ್ತು ಬರ ಇಡಿ ದೇಶದಲ್ಲಿ ಇದೆ. ಸರ್ಕಾರ ಜನರು ರೈತರ ಪರವಾಗಿ ಏನು ಮಾಡಬೇಕು ಅದನ್ನು ಮಾಡುತ್ತೆವೆ ಎಂದರು.
ಬರ ವೀಕ್ಷಣೆಗಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಂತ್ರಿಗಳು ಅಧಿಕಾರಿಗಳೊಂದಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಬರ ಅಧ್ಯಯನ ಮಾಡಿ ಬರಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಬರದಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತಿಯ ಮುಖ್ಯಸ್ಥರೊಂದಿಗೆ ಸಭೆ ಮಾಡಿ ಅಗತ್ಯವಿರುವ ಕಡೆ ಬೋರ್ವೆಲ್ ಕೊರಿಸಲು ಹಣ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಹಾಗೂ ಕರಾವಳಿ ಪ್ರದೇಶದಲ್ಲಿ ಮಳೆ ಆಗುತ್ತಿರುವುದ್ದರಿಂದ ಡ್ಯಾಮ್ ಗಳು ತುಂಬುತ್ತಿವೆ.2350 ಕೋಟಿ ವೆಚ್ಚದಲ್ಲಿ ತುಂಗಭದ್ರಾ ಹಿನ್ನೀರಿ ನಿಂದ ಪಾವಗಡ ಸೇರಿದಂತೆ ನಾಲ್ಕು ತಾಲ್ಲೂಕು ಗಳಿಗೆ ನೀರು ಬರುತ್ತಿದೆ.ಈ ಹಿಂದೆಯು ಸಹ ಮೊದಲ ಸಲ ವೆಂಕಟರಮಣಪ್ಪ ನಾನು ಶಾಸಕರಾಗಿದ್ದಾಗ ವೆಂಕಟರಮಣಪ್ಪ ಮೊದಲು ಪಾವಗಡಕ್ಕೆ ಕುಡಿಯುವ ನೀರಿನ ಯೋಜನೆ ಕೊಡಿ ಎಂದು ಮುಖ್ಯಮಂತ್ರಿ ಎಸ್ ಎಂ ಕೃಷ್ಣ ರವರ ಬಳಿ ಹಠ ಹಿಡಿದು ನಾಗಲಮಡಿಕೆಯಿಂದ ಪಾವಗಡಕ್ಕೆ ಕುಡಿಯುವ ನೀರು ಕಲ್ಪಸಲು ಚೇಕ್ ಡ್ಯಾಮ್ ಕಟ್ಟಿಸಿದ್ದರು.ಕುಡಿಯುವ ನೀರಿಗಾಗಿ ಐದು ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದರು.
ತಾಲೂಕಿನ ಕಿಲಾರ್ಲ ಹಳ್ಳಿ, ಬಾಲಮ್ಮನಹಳ್ಳಿಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಒಣಗಿದ ಬೆಳೆಗಳನ್ನು ಪರಿಶೀಲಿಸಿ ರೈತರ ಸಮಸ್ಯೆಗಳನ್ನು ಕೇಳಿದರು.
ಈ ವೇಳೆ ಶಾಸಕ ಹೆಚ್ ವಿ ವೆಂಕಟೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್,
ಕೆ ಎಸ್ ಆರ್ ಟಿ ಸಿ ಮಾಜಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಕಾಡುಗೋಲ್ಲರ ಸಂಘದ ಅಧ್ಯಕ್ಷ ಮಹೇಶ್,ತುಮುಲ್ ನಿರ್ದೇಶಕ ಚನ್ನಮಲ್ಲಪ್ಪ ಮತ್ತಿತರರು ಹಾಜರಿದ್ದರು.
ವರದಿ : ಶ್ರೀನಿವಾಸಲುಎ
