IMG 20230124 100041 scaled

ಪಾವಗಡ: ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ….!

DISTRICT NEWS ತುಮಕೂರು

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ.

ಪಾವಗಡ: ತಾಲ್ಲೂಕಿನ ವೈ. ಎನ್. ಹೊಸಕೋಟೆ ಯಲ್ಲಿ ಮಂಗಳವಾರ ಬೆಳಿಗ್ಗೆ ವಿದ್ಯಾರ್ಥಿಯೊಬ್ಬನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ವೈ. ಎನ್. ಹೊಸಕೋಟೆ ಗ್ರಾಮದ ಏಳನೇ ತರಗತಿಯ ರೋಹಿತ್ (13) ಮೃತ ವಿದ್ಯಾರ್ಥಿ.
ರೋಹಿತ್ ವೈ. ಎನ್. ಹೊಸಕೋಟೆಯಲ್ಲಿ 7ನೇ ತರಗತಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು , ತಂದೆ ಮಲ್ಲಿಕಾರ್ಜುನ್ ಬೆಳಿಗ್ಗೆ ಶಾಲೆಗೆ ಹೋಗುವಂತೆ ತಿಳಿಸಿದ್ದು,, ವಿದ್ಯಾರ್ಥಿ ಬೆಳಿಗ್ಗೆ ಸ್ನಾನ ಮಾಡಲು ಹೋಗಿ , ಬಚ್ಚಲಿನ ಬಾಗಿಲು ಬಡಿದಾಗ ಏನೂ ಮಾತನಾಡದಿದ್ದಾಗ ಕುಟುಂಬ ಸದಸ್ಯರು ಬಾಗಿಲು ಮುರಿದು ನೋಡಿದಾಗ ರೋಹಿತ್ ನೀರು ತರುವ ಹಗ್ಗದಿಂದ ಬಚ್ಚಲು ಮನೆಯ ಕಬ್ಬಿಣದ ಕೊಂಡಿಗೆ ನೇಣು ಹಾಕಿಕೊಂಡಿದ್ದು ಕಂಡು ಬಂದಿದ್ದು
ಕೂಡಲೆ ವೈ. ಎನ್ ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಇಲ್ಲವೆಂದು ತಿಳಿದು ಪಾವಗಡದ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷೆ ಮಾಡಿ ವಿದ್ಯಾರ್ಥಿ ಮರಣ ಹೊಂದಿರುತ್ತಾನೆ ಎಂದು ತಿಳಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆ ಸಂಬಂಧ ವೈ. ಎನ್. ಹೊಸಕೋಟೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.ಿ

ವರದಿ : ಶ್ರೀನಿವಾಸಲು ಎ