- ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು.
- ಸ್ವಂತ ಮಕ್ಕಳಂತೆ ಬೆಳೆಸಿದ್ದೆ
- ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಪಾವಗಡ: ತಾಲ್ಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ರೈತ ಎಚ್.ಪಿ. ಕೃಷ್ಣಪ್ಪ ಅವರ ಜಮೀನಿನಲ್ಲಿ ಫಸಲಿಗೆ ಬಂದಿದ್ದ 63ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಡಿದು ಹಾಕಿರುವ ಘಟನೆ ನಡೆದಿದೆ.

ವೈ.ಎನ್. ಹೊಸಕೋಟೆ ಹೋಬಳಿಯ ಜೋಡಿ ಅಚ್ಚಮ್ಮನಹಳ್ಳಿ ಸರ್ವೆ ನಂ 8/1 ರ ವ್ಯಾಪ್ತಿಯ ಮೇಗಳಪಾಳ್ಯ ಗ್ರಾಮಕ್ಕೆ ಹೊಂದಿ ಕೊಂಡಂತೆ, ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ರೈತ ಕೃಷ್ಣಪ್ಪ ಅವರಿಗೆ ಸೇರಿದ ಜಮೀನು ಇದ್ದು ಈ ಜಮೀನಿನಲ್ಲಿ ಸುಮಾರು ಎರಡೂವರೆ ಸಾವಿರ ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಅದರಲ್ಲಿ 63ಕ್ಕೂ ಹೆಚ್ಚು ಗಿಡಗಳನ್ನು ಯಾರೋ ಕಿಡಿಗೇಡಿಗಳು ಮಚ್ಚಿನಿಂದ ಕಡಿದು ಹಾಕಿದ್ದಾರೆ. ಜೊತೆಗೆ ನೀರು ಪೂರೈಕೆಯ ಪೈಪ್‌ಲೈನ್ ಮತ್ತು ಔಷಧಿ ಬಿಡುವ ಪಿಲ್ಟರ್ ಗಳನ್ನು ಒಡೆದು ಹಾಕಿದ್ದಾರೆ.

ಕಳೆದ ವಾರ ನಾನು ಕೊಳವೆಬಾವಿಯ ದುರಸ್ತಿಗಾಗಿ ಮೋಟಾರ್ ಮೇಲೆತ್ತಿದ್ದೆ. ಗಮನಿಸಿದ ದುಷ್ಕರ್ಮಿಗಳು ಕೊಳವೆಬಾವಿಯಲ್ಲಿ ಕಲ್ಲು ಹಾಕಿದ್ದರು. ಎಂಬ ಅಂಶವನ್ನು ಅವರು ವೈ ಎನ್ ಹೊಸಕೋಟೆ ಯ ಪೋಲೀಸ ರ ಮುಂದೆ ವಿವರಿಸಿದ್ದಾರೆ.
ಸ್ವಂತ ಮಕ್ಕಳಂತೆ ಬೆಳೆಸಿದ್ದೆ :
ಇದನ್ನೆಲ್ಲ ಗಮನಿಸಿದಾಗ ಉದ್ದೇಶಪೂರ್ವಕವಾಗಿ ನನಗೆ ತೊಂದರೆ ನೀಡಬೇಕು ಎಂಬ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾರೆ. ಇದರಿಂದ ನನಗೆ ಸುಮಾರು ಒಂದೂವರೆ ಲಕ್ಷ ರೂ. ನಷ್ಟವಾಗಿದೆ. ಮೂರು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಹಾಕಿ ಸ್ವಂತ ಮಕ್ಕಳಂತೆ ಬೆಳೆಸಿದ್ದೇನೆ. ನಾನು ಆರ್ಥಿಕವಾಗಿ ಬೆಳೆಯಬಾರದು, ಪ್ರಗತಿ ಹೊಂದಬಾರದು ಎಂಬ ದುರುದ್ದೇಶದಿಂದ ಈ ಹೀನ ಕೃತ್ಯ ಎಸಗಿದ್ದಾರೆ.
ನನ್ನ ಪ್ರಾಣಕ್ಕೂ ಸಂಚಕಾರ :
ಇಂತಹ ಸಮಾಜಘಾತುಕ ಚಟುವಟಿಕೆಗಳಿಂದ ನಮ್ಮಂತಹ ಸಣ್ಣ ರೈತರು ಬದುಕಲು ಸಾಧ್ಯವಾಗುವುದಿಲ್ಲ. ರಾತ್ರಿ ವೇಳೆ ಒಬ್ಬಂಟಿಯಾಗಿ ಓಡಾಡುವ ನನ್ನ ಪ್ರಾಣಕ್ಕೂ ಸಂಚಕಾರ ತರಬಹುದು” ಎಂದು ರೈತ ಕೃಷ್ಣಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಅನುಮಾನ :ಸಪ್ತಸ್ವರ ದೊಂದಿಗೆ ಮಾತನಾಡಿದ ರೈತ ಕೃಷ್ಣಪ್ಪ ನವರು ಕೆಲ ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಸಾಕ್ಷ ಇಲ್ಲದ್ದರಿಂದ ನಾನು ದೂರಿನಲ್ಲಿ ಉಲ್ಲೇಖಿಸಲು ಆಗಿಲ್ಲ. ವೈ ಎನ್ ಹೋಸಕೋಟೆ ಪೋಲೀಸರು ದಕ್ಷರಿದ್ದು ಇನ್ನು ಎರಡು ದಿನಗಳಲ್ಲಿ ತಂತ್ರಜ್ಞಾನ ಸಹಾಯದಿಂದ ಆರೋಪಿಯನ್ನು ಪತ್ತೆ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದಿದ್ದಾರೆ.
ಈ ಸಂಬಂಧ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಬಿ ಎನ್ ಎಸ್ ಕಾಯ್ದೆ ಕಲಂ 329(3), 324(5) ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪೊಲೀಸರು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಎಂದು ದೂರುದಾರರು ವಿನಂತಿಸಿ ಕೊಂಡಿದ್ದಾರೆ
