IMG 20221025 WA0010

ಪಾವಗಡ: ಸಂಚಾರ ನಿಯಮ ಪಾಲನೆ ಮಾಡಲು ಮನವಿ…!

DISTRICT NEWS ತುಮಕೂರು

ವಾಹನ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ ಸಿಐ ಅಜಯ್ ಸಾರಥಿ

ಪಾವಗಡ: ಸಂಚಾರಿ ನಿಯಮಗಳನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಪಟ್ಟಣದ ಪೊಲೀಸ್ ಠಾಣೆಯ ಸಿ ಐ ಅಜಯ್ ಸಾರಥಿ ನೇತೃತ್ವದಲ್ಲಿ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪಟ್ಟಣದ ಪ್ರಮುಖ ಸ್ಥಳಗಳು ಸೇರಿದಂತೆ ಶನಿಮಹಾತ್ಮಸ್ವಾಮಿ ದೇಗುಲ ವೃತ್ತ ದಲ್ಲಿ ಮಂಗಳವಾರ ಪಟ್ಟಣ ಠಾಣೆ ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವುದರಿಂದ ಆಗುವ ಸಮಸ್ಯೆಗಳ ಬಗ್ಗೆ, ಜನರು ಗಾಡಿ ಓಡಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ಸಂಚಾರಿ ನಿಯಮಗಳನ್ನು ಪಾಲಿಸದೆ, ಅಡ್ಡಾದಿಡ್ಡಿಯಾಗಿ ಓಡಿಸಿದರೆ, ಮತ್ತು ಹೆಲ್ಮೆಟ್ ಹಾಕದಿದ್ದರೆ, ಕೇಸ್ ಹಾಕಲಾಗುವುದೆಂದು, ನಾಗರಿಕರು ಪೊಲೀಸರಿಗೆ ಸಹಕರಿಸಬೇಕೆಂದು ತಿಳಿಸಿದರು

IMG 20221025 WA0011


ಇತ್ತೀಚೆಗೆ ತಾಲೂಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ, ಬಹುತೇಕ ಮಂದಿ ಸಾವಿಗೀಡಾಗಲು ಹೆಲ್ಮೆಟ್ ಹಾಕದಿರುವುದೇ ಪ್ರಮುಖ ಕಾರಣವೆಂದು . ಹೆಲ್ಮೆಟ್ ಧರಿಸಿದ್ದರೆ ಗಾಯಗಳಾಗಿ ಸಾವಿನಿಂದ ಪಾರಾಗಬಹುದ್ದಿತ್ತು. ಆದರೆ ನಿರ್ಲಕ್ಷ್ಯದಿಂದಾಗಿ ಪ್ರಾಣ ಹಾನಿ ಸಂಭವಿಸುತ್ತಿದೆ ಎಂದು ಪೊಲೀಸ್ ಇನ್ ಸ್ಪೆಕ್ಟರ್ ಅಜಯಸಾರಥಿ ತಿಳಿಸಿದರು.

ಮನೆಯಲ್ಲಿ ಕುಟುಂಬ ಸದಸ್ಯರಿಗೆ ವಾಹನ ಚಾಲಕರ ಬಗ್ಗೆ ಕಾಳಜಿ ಇರುವಂತೆಯೇ ಪೊಲೀಸರಿಗೂ ಸಾರ್ವಜನಿಕರ ಬಗ್ಗೆ ಕಾಳಜಿ ಇರುತ್ತದೆ.

IMG 20221025 WA0007

ಶಾಲಾ ಕಾಲೇಜುಗಳ ಮಕ್ಕಳಿಗೆ ವಾಹನಗಳನ್ನು ಕೊಡಬಾರದು. ಒಂದು ವೇಳೆ ಅನಾಹುತ ಸಂಭವಿಸಿದರೆ ವಾಹನ ಮಾಲೀಕರು ಜವಬ್ಧಾರರಾಗುತ್ತಾರೆ. ವಾಹನ ಚಾಲನೆ ಮಾಡಿದವರು, ವಾಹನ ಕೊಟ್ಟ ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು

ವರದಿ: ಶ್ರೀನಿವಾಸಲು ಎ