IMG 20240929 WA0001 scaled

ಪಾವಗಡ : ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ, 32 ಜನರ ಬಂಧನ….!

DISTRICT NEWS ತುಮಕೂರು

 

ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ, 32 ಜನರ ಬಂಧನ.

ಪಾವಗಡ: ಪಾವಗಡ ಪಟ್ಟಣ ಠಾಣೆಯ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡಿ 32 ಜನ ಜೂಜು ಕೋರರನ್ನು ಬಂಧಿಸಿ ನಗದನ್ನು ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದ ಆಂಧ್ರ ಗಡಿಯಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ರವರ ಮಾರ್ಗದರ್ಶನದಲ್ಲಿ ತುಮಕೂರು ಪಿ ಎಸ್ ಐ ಪ್ರಸನ್ನ ಕುಮಾರ್ ಮತ್ತು ಪಾವಗಡ ಠಾಣೆಯ ಸಿಪಿಐ ಸುರೇಶ್ ರವರ ತಂಡ ಬಿಲ್ಲೆ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪಾವಗಡ ಪೊಲೀಸರು ದಾಳಿ ಮಾಡಿ, 32 ಜನರನ್ನು ಬಂಧಿಸಿ, ಅವರಿಂದ 2.27.420 ರೂಪಾಯಿಗಳ ನಗದು, 25 ಬೈಕ್ ಗಳು ಮತ್ತು 29 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನವರೆಂದು ತಿಳಿದು ಬಂದಿದೆ.
ಪಾವಗಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವರದಿ : ಶ್ರೀನಿವಾಸಲು A.

Leave a Reply

Your email address will not be published. Required fields are marked *