IMG 20240912 WA0000

ಪಾವಗಡ : ಜಾಮೀನು ಅರ್ಜಿ ವಜಾ…..!

DISTRICT NEWS ತುಮಕೂರು

ಜಾಮೀನು ಅರ್ಜಿ ವಜಾ.

ಪಾವಗಡ : ಪಟ್ಟಣದ ಪೆನುಗೊಂಡ ರಸ್ತೆ ಯ ಪ್ರಾವಿಷನ್ ಸ್ಟೋರ್ ಹತ್ತಿರ ದಿನಾಂಕ 18 /6 /2024 ರಂದು ಆರೋಪಿಗಳು ಅಂಗಡಿ ಬಳಿ ಬಂದು ಸಕ್ಕರೆ ಕೇಳುವ ನೆಪದಲ್ಲಿ ಅಂಗಡಿ ಮಹಿಳೆಯ ಕೊರಳಿನಲ್ಲಿದ್ದ 30 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದು.ಘಟನೆಯ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಪೊಲೀಸರು ದಸ್ತು ಕಾರ್ಯ ಮಾಡುತ್ತಿದ್ದಾಗ ಮಹಾರಾಷ್ಟ್ರ ಮೂಲದ ಹಸನ್ ಆಲಿ ಮತ್ತು ಮಹಮ್ಮದ್ ಅಲಿ ಇರಾನಿ ಸಿಕ್ಕಿಬಿದ್ದಿದ್ದು.ಅವರು ಪಾವಗಡ ಪಟ್ಟಣದಲ್ಲಿ ಒಬ್ಬ ಹೆಂಗಸಿನ ಬಳಿ ಇರುವ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ನಂತರ ಪೊಲೀಸರು ಕೂಲಂಕುಷವಾಗಿ ವಿಚಾರಿಸಿದಾಗ
ಆರೋಪಿಗಳು ನಾವು ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುವುದು,
ಒಂಟಿ ವೃದ್ಧ ಮಹಿಳೆಯರನ್ನು ಯಾಮಾರಿಸಿ ಅವರಿಂದ ಬಂಗಾರದ ಸರಗಳನ್ನು ಚಾಕ ಚಕ್ಯತೆಯಿಂದ ಬಿಚ್ಚಿಸಿಕೊಂಡು ಪರಾರಿ ಯಾಗುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣಾ ಸಿ ಐ ಸುರೇಶ್ ಆರೋಪಿಗಳಿಂದ 204 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು , ಆರೋಪಿಗಳು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು.

ನ್ಯಾಯಾಲಯವು ಜಾಮೀನು ಅರ್ಜಿಯ ವಾದ ಪ್ರತಿವಾದ ಆಲಿಸಿ , ದಾಖಲಾತಿ ಪರಿಶೀಲಿಸಿ ಪಟ್ಟಣದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಿಯಾಂಕ ಬಿ ರವರು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯನ್ನು
ವಜಾ ಮಾಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಿಎಚ್ ಸಣ್ಣೀರಪ್ಪ ವಾದ ಮಂಡಿಸಿದರು.

ವರದಿ. ಶ್ರೀನಿವಾಸಲು. A