ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾವಗಡ ತಾಲ್ಲೂಕಿಗೆ 55.19 % ಫಲಿತಾಂಶ
ಪಾವಗಡ : ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಾವಗಡ ತಾಲ್ಲೂಕಿಗೆ 55.19% ಫಲಿತಾಂಶ ಬಂದಿದ್ದು.
ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಶಿರಾ ಪ್ರಥಮ ಸ್ಥಾನ ಗಳಿಸಿದ್ದು, ಮಧುಗಿರಿ ಎರಡನೇ ಸ್ಥಾನ, ಕೊರಟಗೆರೆ ಮೂರನೇ ಸ್ಥಾನ ಮತ್ತು ಪಾವಗಡ ನಾಲ್ಕನೇ ಸ್ಥಾನಗಳಿಸಿದೆ.
ಪಟ್ಟಣದ ಗುರುಕುಲ ಶಾಲೆಯ ನೇಹಾ ಎಸ್ ಎನ್ 614 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದು.
ಪಟ್ಟಣದ ಸರ್ಕಾರಿ ಆದರ್ಶ ಶಾಲೆಯ ಗಂಗೋತ್ರಿ ಮತ್ತು ಗುರುಕುಲ ಶಾಲೆಯ ಯಶಸ್ ತಲಾ 613 ಅಂಕಗಳಿಸಿದ್ದು ತಾಲ್ಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢಶಾಲೆಯ ಸಾಯಿ ಸಂತೋಷ್ ರೆಡ್ಡಿ ಬಿ 604 ಅಂಕಗಳನ್ನು ಗಳಿಸುವ ಮೂಲಕ ತಾಲ್ಲೂಕಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಶೇಕಡ 100% ಫಲಿತಾಂಶ.
ಕೋಟೆಗುಡ್ಡ ಸಹನಾ ಆಂಗ್ಲ ಪ್ರೌಢಶಾಲೆ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆ ಕೊಡುಗೆಹಳ್ಳಿ ಶೇಕಡ 100% ಫಲಿತಾಂಶ ಸಾಧಿಸಿದೆ
ಶೂನ್ಯ ಫಲಿತಾಂಶ.
ತಾಲ್ಲೂಕಿನ ಕಿಲಾರ್ಲ ಹಳ್ಳಿಯ ರಾಷ್ಟ್ರ ಪ್ರಗತಿ ಅನುದಾನಿತ ಪ್ರೌಢಶಾಲೆ ತಾಲ್ಲೂಕಿನಲ್ಲಿಯೇ ಶೂನ್ಯ ಫಲಿತಾಂಶ ಪಡೆದ ಶಾಲೆಯಾಗಿದೆ.
2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 3055 ವಿದ್ಯಾರ್ಥಿಗಳು ಕುಳಿತಿದ್ದು, 1686 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ವರ್ಷ ಇದೇ ಪ್ರಥಮ ಬಾರಿಗೆ ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಇಲಾಖೆಯ ಆದೇಶದಂತೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ನಡೆಯದಂತೆ ಕಟ್ಟುನಿಟಿನ ಕ್ರಮ ಕೈಗೊಳ್ಳಲಾಗಿತ್ತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 604 ಅಂಕ ಗಳಿಸಿ ತಾಲ್ಲೂಕಿಗೆ ತೃತೀಯ ಸ್ಥಾನ ಗಳಿಸಿದ್ದು.
ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಶಾಲೆಯ ಖಜಾಂಶಿ ಪರಂದಾಮ ರೆಡ್ಡಿ, ಮತ್ತು ಶಿಕ್ಷಕ ವರ್ಗದವರು ಅಭಿನಂದಿಸಿದರು.
ವರದಿ : ಶ್ರೀನಿವಾಸಲು