1

ತುಮಕೂರು : ನಾಯಕತ್ವ ಗುಣ, ಒರಟು ಮಾತಿಲ್ಲ

DISTRICT NEWS ತುಮಕೂರು

ನಾಯಕತ್ವ ಗುಣ ಒರಟು ಮಾತಿಲ್ಲ: ನಾಡೋಜ ಡಾ. ಬರಗೂರು ರಾಮಚಂದ್ರಪ್ಪ
ತುಮಕೂರು: ಬಹುಪಾಲು ರಾಜಕಾರಣಿಗಳಿಗೆ ಸೌಜನ್ಯವಿರಲ್ಲ ಆದರೆ ಡಾ.ಜಿ.ಪರಮೇಶ್ವರ ಅವರು ಇವರಲ್ಲಿ ಒಳಗೊಂಡಿಲ್ಲ. ನಾಯಕತ್ವ ಗುಣ ಒರಟು ಮಾತಿಲ್ಲ. ಶಿಕ್ಷಣ ಸಾಮ್ರಾಜವನ್ನು ಕಟ್ಟಿದ ಕೀರ್ತಿ ಡಾ.ಎಚ್.ಎಂ.ಗಂಗಾಧರಯ್ಯ ಅವರದ್ದು, ಅದನ್ನು ಮುನ್ನಡೆಸಿಕೊಂಡು ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಡೆಸಿರುವ ಬಗ್ಗೆ ಬಂಡಾಯ ಸಾಹಿತಿ ಹಾಗೂ ಸಿನಿಮಾ ನಿರ್ದೇಶಕ, ಸಂಸ್ಕøತಿ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಶ್ಲಾಘಿಸಿದ್ದರು.

ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ, ಸಿದ್ಧಾರ್ಥ ನಗರ, ತುಮಕೂರು ವತಿಯಿಂದ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಮಾಜಿ ಉಪಮುಖ್ಯಮಂತ್ರಿ ಮತ್ತು ಕೊರಟಗೆರೆ ವಿಧಾನಸಭಾಕ್ಷೇತ್ರದ ಶಾಸಕರು ಡಾ.ಜಿ.ಪರಮೇಶ್ವರ ಅವರ ಕುರಿತ ಪ್ರೊ.ಮಾದೇವ್ ಭರಣಿ ಸಂಪಾದಿತ “ಸವ್ಯಸಾಚಿ” ಗೌರವಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಗೌರವ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಟ್ಟ ಕಡೆಯ ಪ್ರಜೆಗೆ ಶಿಕ್ಷಣ ತಲುಪಿಸುವ ಕೆಲಸ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದರು.

ರಾಜಕಾರಣಿಗಳು ಮಾತ್ರವಲ್ಲ ಹಲವಾರು ನಾಯಕ, ಖಳನಾಯಕ ಹುಸಿ ಬೌದ್ಧಿಕ ಕಾರ್ಖಾನೆಗಳು ಆಗುತ್ತಿವೆ. ಧರ್ಮ ಸಂಸ್ಕøತಿ ವ್ಯಕ್ತಿ ಅಪಖ್ಯಾತವಾಗುತ್ತಿದೆ. ಆದರೆ ಡಾ.ಜಿ. ಪರಮೇಶ್ವರ ಅವರು ಯಾವುದೇ ಕಳಂಕ ಹುಸಿ ಮಾತಿಗೆ ಸಿಕ್ಕದೆ ಒಳ್ಳೆ ರಾಜಕಾರಣಿ ಎಂದು ಅವರನ್ನು ಹೊಗಳಿ ಕೊಂಡಾಡಿದರು.

ಸವ್ಯಸಾಚಿಯ ಗೌರವ ಗ್ರಂಥದಲ್ಲಿ ಡಾ.ಎಚ್.ಎಂ.ಗಂಗಾಧರಯ್ಯನವರ ಭಾವಚಿತ್ರದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರ ಇರುವುದು ಸಂತೋಷದ ವಿಷಯ. ಸುಮಾರು 11ಸಾವಿರ ಶಾಲೆಗಳನ್ನು ನಡೆಸಿ ಹಲವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಿರುವುದೇ ದಿಕ್ಸೂಚಿ. ಕುರ್ಚಿಯಲ್ಲಿ ಕೂರುವವರು ಎತ್ತರದಲ್ಲಿ ಕುಳಿತುಕೊಳ್ಳಬೇಕು ಆಗ ಮಾತ್ರ ಪ್ರಜಾಸತ್ಮಕ ಮೌಲ್ಯ ಕುಂಠಿತವಾಗುವುದಿಲ್ಲ ಎಂದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಮಾತನಾಡಿ, ತಮ್ಮ ಹಳೆ ವಿದ್ಯಾರ್ಥಿ ಜೀವನವನ್ನು ಸ್ಮರಿಸುತ್ತಾ ತಮ್ಮ ಸಹೋದರರಾದ ಐವರಲ್ಲಿ ನಾಲ್ವರು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದು, ಅವರಲ್ಲಿ ಮೂವರು ರಾಮಕೃಷ್ಣ ಆಶ್ರಮದಲ್ಲಿ ಕೈಂಕರ್ಯ ಮಾಡುತ್ತಿದ್ದಾರೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದಲೇ ರಾಮಕೃಷ್ಣ ಆಶ್ರಮಕ್ಕೆ ಕೊಡುಗೆಯಾಗಿ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕವಿ, ನಾಟಕಕಾರ, ಕಾದಂಬರಿಕಾರರು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಪದ್ಮಶ್ರೀ ಡಾ.ಚಂದ್ರಶೇಖರ ಕಂಬಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ನವದೆಹಲಿ ಅವರು ‘ಸವ್ಯಸಾಚಿ’ ಗೌರವಗ್ರಂಥವನ್ನು ಬಿಡುಗಡೆ ಮಾಡಿದರು.

ಇಂಡೋ ಶ್ರೀಲಂಕಾ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್, ಹೈಪ್ರೀಸ್ಟ್‍ಜಂಬೂದ್ವೀಪ, ಶ್ರೀಲಂಕಾ ಬುದ್ದಿಸ್ಟ್‍ಟೆಂಪಲ್, ಸಮಥ್, ವಾರಣಾಸಿಯ ಅಧ್ಯಕ್ಷರಾದ ಡಾ.ಕೆ.ಸಿರಿ ಸುಮೇಧಾಥೇರಾ, ಆಡಳಿತ ಮಂಡಳಿ ಸದಸ್ಯರು ಶ್ರೀಮತಿ ಕನ್ನಿಕಾ ಪರಮೇಶ್ವರಿ, ಆಡಳಿತ ಮಂಡಳಿ ಸದ್ಯಸರು ಡಾ.ಅನಂದ್, ಸಾಹೇ ಉಪಕುಲಪತಿ ಬಾಲಕೃಷ್ಣ ಶೆಟ್ಟಿ, ನಗರದ ಅಗಳಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಸುಶೀಲ್ ಮಹಾಪತ್ರ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಕುಡ್ವ ನೆಲಮಂಗಲದ ಬೇಗೂರುನಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಪ್ರಾಂಶುಪಾಲರಾದ ಶ್ರೀನಿವಾಸ ಸೇರಿದಂತೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು, ಭೋದಕ ಮತ್ತು ಭೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

5

ರಾಜಕಾರಣಿಗಳು ಹಾಜರ್:
ಸೊಗಡು ಶಿವಣ್ಣ, ಟಿ.ಬಿ.ಜಯಚಂದ್ರ, ಷಡಕ್ಷರಿ, ರಂಗನಾಥ್, ಹುಲಿನಾಯ್ಕರ್, ಎಂ.ಟಿ. ಕೃಷ್ಣಪ್ಪ, ಮಲ್ಲಾಜಮ್ಮ, ಬಲೀಜಿತ್ ಸಿಂಗ್ ಮತ್ತು ಕುಟುಂಬ, ನಿವೇದಿತಾ ಆಳ್ವ, ನಿಂಗಪ್ಪ, ಸೋಮಶೇಖರ್, ಲೊಕೇಶ್ವರ, ಲಕ್ಷಣದಾಸ್, ನಾಗಣ್ಣ, ಡಾ.ವೈ, ಎಂರೆಡ್ಡಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರುಗಳು ಮತ್ತು ಅನುಯಾಯಿಗಳು ಡಾ.ಜಿ.ಪರಮೇಶ್ವರ ಅವರ ಗೌರವ ಗ್ರಂಥ ಸವ್ಯಸಾಚಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಗ್ರಂಥಕುರಿತು: ಪ್ರೊ.ಮಾದೇವ್ ಭರಣಿ ಸಂಪಾದಿತ “ಸವ್ಯಸಾಚಿ” ಗೌರವಗ್ರಂಥದಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಹತ್ತಿರದಿಂದ ನೋಡಿದ ಸಾಮಾಜಿಕ ಹೋರಾಟಗಾರರು, ರಾಜ್ಯದಉದ್ದಗಲಕ್ಕು ಇರುವ ಪತ್ರಕರ್ತರು, ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರು, ಕಲೆ, ಸಾಹಿತ್ಯಸೇರಿದಂತೆರಾಜಕೀಯವಾಗಿ, ಶೈಕ್ಷಣಿಕವಾಗಿ ಎಲ್ಲಾ ಆಯಾಮದಲ್ಲಿ ನೋಡಿದ ಹಲವಾರು ಗಣ್ಯರುಜಾತ್ಯಾತೀತವಾಗಿ ಪಕ್ಷಾತೀತವಾಗಿ ಲೇಖನಗಳು ಗ್ರಂಥದಲ್ಲಿ ಒಳಗೊಂಡಿದೆ. ಗ್ರಂಥವು1 ಕೆ.ಜಿ.200ಗ್ರಾಂ ತೂಕ ಹೊಂದಿದ್ದು, 476 ಪುಟಗಳಿದ್ದು, ನಾಲ್ಕು ಭಾಗಗಳಿವೆ.

7

101 ಪೂರ್ಣಕುಂಭದ ಸ್ವಾಗತ


ಡಾ. ಜಿ. ಪರಮೇಶ್ವರ ಮತ್ತು ಶ್ರೀಮತಿ ಕನ್ನಿಕಾ ಪರಮೇಶ್ವರ ದಂಪತಿ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಅತಿಥಿಗಳನ್ನು ನಾದಸ್ವರದೊಂದಿಗೆ 101 ಪೂರ್ಣಕುಂಭ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಶ್ರೀ ಸಿದ್ಧಾರ್ಥ ನಗರದ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಬುದ್ಧಗೀತೆಯನ್ನು ಹಾಡಿದರು. ಡಾ.ಜಿ.ಪರಮೇಶ್ವರ ಮತ್ತು ಕನ್ನಿಕಾ ಪರಮೇಶ್ವರಿ ಅವರು ಕಾರ್ಯಕ್ರಮಕ್ಕೂ ಮುನ್ನ ಅವರ ತಂದೆ-ತಾಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು.
ಅಶೀವರ್ಚನ: ಮಹಾರಾಷ್ಟ್ರ – ಕರ್ನಾಟಕದಿಂದ ಆಶ್ರಮಗಳಿಂದ ನಾಡಿನೆಲ್ಲೆಡೆ ಸುಮಾರು 15ಕ್ಕೂ ಬೌದ್ಧಭಿಕ್ಕುಗಳಿಂದ ಡಾ.ಜಿ.ಪರಮೇಶ್ವ ದಂಪತಿಗೆ ಆಶೀರ್ವಚನ ಮಾಡಿದರು.