*ಮಧುಗಿರಿ. ಪಟ್ಟಣದ ಒಕ್ಕಲಿಗರ ಸಮುದಾಯ ಭವನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ. ಆಯೋಜನೆ ಮಾಡಿದ ಸರ್ವಪಲ್ಲಿ ರಾಧಾಕೃಷ್ಣನ್ ರವರ 135 ನೇ ಜನ್ಮದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು..
ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ವಿ.ವೀರಭದ್ರಯ್ಯ ಮಾತನಾಡಿ ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೂ ಮಂಜೂರು ಮಾಡುವಂತೆ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಸದನದ ಹೊರಗೆ ಮತ್ತು ಒಳಗೆ ಬಗೆಹರಿಸಲು ಸದಾ ಸಿದ್ದನಾಗಿರುತ್ತೇನೆ ಎಂದರು.
ಶಿಕ್ಷಕ ವೃತ್ತಿಯು ಗೌರವಯುತ ಹಾಗೂ ಮನಸ್ಸಿಗೆ ನೆಮ್ಮದಿ ತಂದು ಕೊಡುವಂತಹ ವೃತ್ತಿಯಾಗಿದೆ. ಇಂದು ಶಿಕ್ಷಕರು ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡಿದ್ದಾರೆ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನೀಡುವಂತಹ ಶಿಕ್ಷಣವು ಕೊನೆಯವರೆಗೂ ಉಳಿದುಕೊಳ್ಳುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಗ್ಗಿಹಳ್ಳಿ ಸೇವಾಶ್ರಮದ ಶ್ರೀ ಶ್ರೀ ರಾಮಕೃಷ್ಣ ಚೈತನ್ಯ ಸ್ವಾಮೀಜಿಗಳು, ಪುರಸಭಾ ಅಧ್ಯಕ್ಷರಾದ ತಿಮ್ಮರಾಜು, ಕನ್ನಡಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸಹನಾ ನಾಗೇಶ್ ಬಿ
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಂಜುಂಡಯ್ಯ, ಬಿ ಆರ್ ಸಿ ಹನುಮಂತರಾಯಪ್ಪ, ತಾಲೂಕು ನೌಕರರ ಸಂಘದ ಅಧ್ಯಕ್ಷ ವಿ ಎಚ್ ವೆಂಕಟೇಶಯ್ಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಂಜಯ್, ಎಂ ಎನ್ ನಟರಾಜು, ಸಿಂಧು, ಸಿದ್ದೇಶ್ ವೆಂಕಟರಮಣಪ್ಪ, ಪದ್ಮಾವತಮ್ಮ, ಜಿಟಿ ಮಂಜುಳಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ರಂಗಧಾಮಯ್ಯ. ಹಾಗೂ ಎಲ್ಲಾ ಶಿಕ್ಷಕ ವೃಂದದವರು ಹಾಗೂ ನಿವೃತ್ತ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು