edd6e688 3f8b 4931 bef0 5e40b6014856

ತುಮಕೂರು ಸ್ಮಾಟ್ ಸಿಟಿ  ಡಿಜಿಟಲ್ ಲೈಬ್ರರಿ ಮುಡಿಗೆ ಮೂರನೇ ಪ್ರಶಸ್ತಿ ಗರಿ

DISTRICT NEWS ತುಮಕೂರು

ತುಮಕೂರು ಸ್ಮಾಟ್ ಸಿಟಿ  ಡಿಜಿಟಲ್ ಲೈಬ್ರರಿ ಮುಡಿಗೆ ಮೂರನೇ ಪ್ರಶಸ್ತಿ ಗರಿ

ತುಮಕೂರು(ಕವಾ) ಜೂ.26: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ವತಿಯಿಂದ ರಾಷ್ಟ್ರಮಟ್ಟದಲ್ಲಿ ಸ್ಮಾಟ್ರ್ಸಿಟಿ ಯೋಜನೆಗಳ 6ನೇ ವಾರ್ಷಿಕೋತ್ಸವ ನಿಮಿತ್ತ ನಡೆದ ಸ್ವರ್ಧೆಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಡಿಜಿಟಲ್ ಗ್ರಂಥಾಲಯಕ್ಕೆ 3ನೇ ಸ್ಥಾನ ದೊರಕಿದೆ.

ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಒಂದಾದ ಡಿಜಿಟಲ್ ಲೈಬ್ರರಿ ಯೋಜನೆಗೆ ಡಿಜಿಟಲ್ ಲೈಬ್ರರಿ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ.
ಜೂನ್ 25ರಂದು ನಡೆದ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(ಒoಊUಂ) 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ Iಟಿಜiಚಿ Smಚಿಡಿಣ ಅiಣies ಂತಿಚಿಡಿಜs ಅoಟಿಣesಣ 2020 (ISಂಅ 2020) ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಅನುμÁ್ಠನಗೊಂಡಿರುವ ಉತ್ತಮ ಯೋಜನೆಗಳ ಪೈಕಿ “ಡಿಜಿಟಲ್ ಲೈಬ್ರರಿ”ಯೋಜನೆಗೆ ಪ್ರಶಸ್ತಿ ಲಭಿಸಿದೆ.
ಎಲ್ಲಿಂದಲಾದರೂ ಓದು- ಈ ಲೈಬ್ರರಿಯ ವಿಶೇಷತೆ: ಈ ಪ್ರಶಸ್ತಿಯು ವಿಶಿಷ್ಟ ಹಾಗೂ ವಿನೂತನವಾಗಿದ್ದು, ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ ಡಿಜಿಟಲ್ ಲೈಬ್ರರಿ ಯೋಜನೆ ಇದೇ ಮೊದಲನೆಯದಾಗಿದೆ. ಡಿಜಿಟಲ್ ಲೈಬ್ರರಿ ಯೋಜನೆ ಓದುಗರಿಗೆ ಸೊಗಸಾದ ಯೋಜನೆಯಾಗಿದ್ದು, ಸಾಂಪ್ರದಾಯಿಕ ಗ್ರಂಥಾಲಯಗಳಿಗಿಂತ ವಿಭಿನ್ನವಾಗಿರುತ್ತದೆ. “ಎಲ್ಲಿಂದಾದರೂ ಓದು” ಈ ಯೋಜನೆಯ ವಿಶೇಷತೆಯಾಗಿದೆ. ಅಪರೂಪದ ಪುಸ್ತಕಗಳು, ವಿವಿಧ ಕ್ಷೇತ್ರಗಳಿಗೆ ಹಾಗೂ ಕೋಸ್ರ್ಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಡಿಜಿಟಲ್ ಲೈಬ್ರರಿಯಲ್ಲಿ ಸಂಗ್ರಹಿಸಲಾಗಿದೆ. ಈವರೆಗೂ ಈ ಯೋಜನೆಯಡಿ 26 ಸಾವಿರಕ್ಕಿಂತ ಹೆಚ್ಚು ಬಳಕೆದಾರರು (ಮಕ್ಕಳು, ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಧ್ಯಾಪಕರು, ಸರ್ಕಾರಿ ನೌಕರರು ಮತ್ತು ಕೈಗಾರಿಕ ವೃತ್ತಿಪರರು ಇತ್ಯಾದಿ) ಈ ಡಿಜಿಟಲ್ ಲೈಬ್ರರಿ ಪೋರ್ಟಲ್/ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ. ಈ ಸೌಲಭ್ಯವನ್ನು ಏಕಕಾಲದಲ್ಲಿ 20 ಬಳಕೆದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಬಹುದಾಗಿದೆ. ದೇಶದ ಇತರೆ ನಗರಗಳು ಈ ವಿನೂತನ ಯೋಜನೆಯನ್ನು ಪ್ರಶಂಸಿಸಿ ತಮ್ಮ ತಮ್ಮ ನಗರಗಳಲ್ಲೂ ಕೂಡ ಅನುμÁ್ಠನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.