ತಾಲೂಕಿನಾದ್ಯಂತ ಅತ್ಯುತ್ತಮವಾಗಿ ನಡೆದ ವಿಶ್ವ ಯೋಗ ದಿನಾಚರಣೆ.
ಪಾವಗಡ : ಇಂದಿನ ಯಾಂತ್ರಿಕ ಯುಗದಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು.
ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವೊಂದೇ ಪ್ರಮುಖ ದಾರಿ ಎಂದು ಸಿದ್ದ ಸಮಾಧಿ ಯೋಗದ ಆಚಾರ್ಯರಾದ ವಿ ಎನ್ ರಾಮಲಿಂಗ ರೆಡ್ಡಿ ತಿಳಿಸಿದರು.
ಪಟ್ಟಣದ ಜೈ ಗುರುದೇವ ಶಾಲೆಯಲ್ಲಿ ಏರ್ಪಡಿಸಿದ್ದ 9ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅವರು ಮಾತನಾಡಿದರು.
2023ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಸ್ಥಾಪನೆಯಾಗಿ 9ನೇ ವರ್ಷವನ್ನು ಪೂರೈಸುತ್ತದೆ. “ಒಂದು ಭೂಮಿ, ಒಂದು ಕುಟುಂಬ” ಎಂಬ ಭಾರತದ ಆಶಯವನ್ನು ಸೂಚಿಸುವ “ಯೋಗಕ್ಕಾಗಿ ವಸುದೈವ ಕುಟುಂಬಕಂ” ಎಂಬುವುದು ಈ ವರ್ಷದ ಥೀಮ್ ಎಂದು ಇದು ಜಗತ್ತಿಗೆ ಭಾರತ ಸಾರಿದ ಸಂದೇಶ ಎಂದರು.
ಯೋಗಾಭ್ಯಾಸದಿಂದಾಗುವ ಹಲವಾರು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಯೋಗ ದಿನವು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಯೋಗವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಪ್ರಾಮುಖ್ಯತೆಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸಿ ಸಮತೋಲನವನ್ನು ಸಾಧಿಸಲು ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್. ಎಸ್. ವೈ ಆಚಾರ್ಯರಾದ ವಿ .ಎನ್ ರಾಮಲಿಂಗ ರೆಡ್ಡಿ, ಪತಂಜಲಿ ಯೋಗ ಶಿಕ್ಷಕರಾದ ವೀರೇಶ್, ಶಾಲೆಯ ಖಚಾಂಶಿ ಪರಂದಾಮ ರೆಡ್ಡಿ,
ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ, ಶಿಕ್ಷಕಿಯರಾದ ಶಾತಾಜ್, ರೇಷ್ಮಾ , ಪುಷ್ಪ, ಉಷಾ, ರೇಷ್ಮಾ ಎನ್, ವಿದ್ಯಾರ್ಥಿಗಳು ಹಾಜರಿದ್ದರು.
ಪಟ್ಟಣದ ನ್ಯಾಯಾಲಯದಲ್ಲಿ ಪತಂಜಲಿ ಯೋಗ ಶಿಕ್ಷಣದ ಗುರುಗಳಾದ ಅಂತರಗಂಗೆ ಶಂಕರಪ್ಪನವರ ನೇತೃತ್ವದಲ್ಲಿ .
9ನೇ ಅಂತರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಪಟ್ಟಣದ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂಎಸ್ ಹರಿಣಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಕಾಂತ್ ರವೀಂದ್ರ,
ಅಧಿಕ ಸಿವಿಲ್ ನ್ಯಾಯಾಧೀಶರಾದ ವಿಸ್ಮಿತ ಮೂರ್ತಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ವಿ ಮಂಜುನಾಥ್, ವಕೀಲ ಸಂಘದ ಅಧ್ಯಕ್ಷರಾದ ಶೇಷನಂದನ್, ವಕೀಲರ ಮತ್ತು ಸಿಬ್ಬಂದಿಗಳು
ವಿವಿಧ ರೀತಿಯ ಯೋಗಭ್ಯಾಸಗಳನ್ನು ಮಾಡಿದರು.
ಪಟ್ಟಣದ ಕುಮಾರಸ್ವಾಮಿ ಬಡಾವಣೆಯ ಅಂಗನವಾಡಿ ಶಾಲೆಯ ಪುಟಾಣಿ ಮಕ್ಕಳು ಯೋಗಭ್ಯಾಸದಲ್ಲಿ ತೊಡಗಿದರು. ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಯೋಗ ದಿನಾಚರಣೆ ಅಂಗವಾಗಿ ವಿವಿಧ ಯೋಗಾಸನಗಳನ್ನು ಮಾಡಿದರು
ವೈ.ಎನ್.ಹೊಸಕೋಟೆ : ವಿಶ್ವ ಯೋಗ ದಿನಾಚರಣೆ…
ಪ್ರಾಥಮಿಕ ಹಂತದಿಂದಲೇ ಯೋಗ ಶಿಕ್ಷಣ ವಿದ್ಯಾರ್ಥಿಗಳಿಗೆ ಲಭಿಸಬೇಕು ಎಂದು ಯೋಗಪಟು ಜಿ.ಬಿ.ಸತ್ಯನಾರಾಯಣ ತಿಳಿಸಿದರು.
ಬುಧವಾರದಂದು ಗ್ರಾಮದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪತಂಜಲಿ ಯೋಗಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದಿಂದ ಶಾರೀರಿಕ ಮತ್ತು ಮಾನಸಿಕ ಅರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ಖಾಯಿಲೆಗಳು ದೂರವಾಗುತ್ತವೆ. ಆದಾಗಿ ಬಾಲ್ಯದಿಂದಲೇ ಜೀವನದಲ್ಲಿ ಯೋಗಾಭ್ಯಾಸವನ್ನು ರೂಡಿಸಿಕೊಂಡರೆ, ಉತ್ತಮ ಜೀವನ ಪಡೆಯಲು ಸಹಕಾರಿಯಾಗುತ್ತದೆ. ಅದಾಗಿ ಶಿಕ್ಷಣ ಇಲಾಖೆಯಲ್ಲಿ ಪ್ರತಿ ಶಾಲೆಯಲ್ಲೂ ಯೋಗಶಿಕ್ಷಕರನ್ನು ಸರ್ಕಾರ ನೇಮಕ ಮಾಡಬೇಕು ಎಂದರು
ಪ್ರಪಂಚದಾದ್ಯಂತ ಯೋಗ ಮನ್ನಣೆ ಪಡೆಯುತ್ತಿದೆ. ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಯೋಗಶಿಕ್ಷಣ ಪ್ರಯೋಜನಗಳನ್ನು ಅರಿತ ವಿಶ್ವದ ವಿವಿಧ ದೇಶಗಳಲ್ಲಿ ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ ಮತ್ತು ಈ ಶಿಕ್ಷಣವನ್ನು ನೀಡಿದ ಭಾರತದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸ್ಥಳೀಯವಾಗಿ ಯೋಗದ ಮಹತ್ವ ಅರಿತುಕೊಳ್ಳುವಲ್ಲಿ ಜನತೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಪ್ರತಿಯೊಬ್ಬರೂ ಯೋಗದ ಮಹತ್ವ ಅರಿತು ಯೋಗಭ್ಯಾಸ ಮಾಡಬೇಕು ಎಂದು ಗ್ರಾಮದ ಆರ್ಯವೈಶ್ಯ ಸಂಘದ ಅಧ್ಯಕ್ಷ ಎನ್.ಅರ್.ಅಶ್ವಥಕುಮಾರ್ ತಿಳಿಸಿದರು.
ಯೋಗಶಿಕ್ಷಣ ಸಮಿತಿಯ ಅಧ್ಯಕ್ಷ ಎನ್.ಜಿ.ಶ್ರೀನಿವಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಕಿ ಬಿ.ಕೆ.ರಾಜಶ್ರೀ, ಪರಿಸರ ಪ್ರಿಯರು ಸಂಘದ ಅಧ್ಯಕ್ಷ ಡಾ.ಎಂ.ಪ್ರೇಮಯೋಗಿ ಮಾತನಾಡಿದರು.
ಯೋಗಪಟುಗಳಾದ ಹೆಚ್.ಎಸ್.ಶ್ರೀಶೈಲಮೂರ್ತಿ, ಹೆಚ್.ಸಿ.ಮುರಳಿ, ಬಿ.ಎಲ್.ವೆಂಕಟೇಶ್, ಬಾಲಾಜಿ, ಎಂ.ಸಿ.ನಾಗರಾಜು, ಟಿ.ವಿ.ನಾಗರಾಜು ಸೇರಿದಂತೆ ಪತಂಜಲಿ ಶಿಕ್ಷಣ ಸಮಿತಿ ಸದಸ್ಯರು ಮತ್ತು ಈಶ್ವರಿ ವಿಶ್ವವಿದ್ಯಾಲಯದ ಸದಸ್ಯರು ಇದ್ದರು.