ಆನೇಕಲ್ ಪೊಲೀಸ್ ಠಾಣೆಯ ಹೊನ್ನಕಳಸಾಪುರ ಬೀಟ್ ಸಿಬ್ಬಂದಿ ಇಡೀ ಗ್ರಾಮಸ್ಥರನ್ನ ಕಂಡು ಉಭಯ ಕುಶಲೋಪಹರಿ ವಿಚಾರಿಸಿ ಗ್ರಾಮದ ಅಪರಾಧ ಇನ್ನಿತರೆ ಸಮಸ್ಯೆಗಳನ್ನು ವಿಚಾರಿಸಿದರು.
ಬಹುವಾಗಿ ಹೊನ್ನಕಳಸಾಪುರದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಬೀಟ್ ಸಿಬ್ಬಂದಿ ಎಸ್ ಮೌಲ ಮಾಹಿತಿ ನೀಡಿದರು.
ಅಪರಿಚಿತ, ಗುಮಾನಿ ವ್ಯಕ್ತಿಗಳ ಚಲನವಲನ ಅನುಮಾನ ಮೂಡಿದರೆ ಅವರ ಕುರಿತು ತಕ್ಷಣ ಆನೇಕಲ್ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿದರು.
ದೇವಾಲುಗಳು, ಶಾಲೆ ಅಂಗಳ, ಅರಳೀಕಟ್ಟೆ, ಅಂಗನವಾಡಿ ಕೇಂದ್ರಗಳ ವಲಯಗಳಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ಗ್ರಾಮಸ್ಥರಿಂದ ಕೋರಲಾಯಿತು.
ಶಾಲಾ ಶಿಕ್ಷಕರು, ಗ್ರಾಮದ ಹಿರಿಯರು, ಮಹಿಳೆಯರು ಹೋರಾಟಗಾರರು ಸ್ತ್ರೀ ಶಕ್ತಿ ಸಂಘಟನೆಗಳು, ದಲಿತ ಸಂಘಟನೆಗಳು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಮರಳಿದರು.
ವರದಿ: ಹರೀಶ್