IMG 20200816 WA0056

ಭತ್ತ ನಾಟಿ ಕಾರ್ಯಕ್ಕೆ ಚಾಲನೆ…!

DISTRICT NEWS ಮಂಡ್ಯ

ಭತ್ತ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು
ಖುದ್ದು ಡ್ರಂ ಸೀಡರ್ ಚಲಾಯಿಸಿದ ಕೆಸಿಎನ್

ಮಂಡ್ಯ -16 : ಧರ್ಮಸ್ಥಳದಂತೆ ಬೇರೆ ಸಂಸ್ಥೆಗಳು ಕೆಲಸ ಮಾಡಿದರೇ, ರಾಜ್ಯದಲ್ಲಿ ರೈತರಿಗೆ ಇನ್ನಷ್ಟು ಅನುಕೂಲ ಆಗತ್ತೆ. ಧರ್ಮಸ್ಥಳದ ಜತಗೆ ಬೇರೆ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಆಯೋಜಿಸಿದ ಯಂತ್ರಶ್ರೀ ಯೋಜನೆಯಡಿ ಭತ್ತನಾಟಿ ಕಾರ್ಯಕ್ಕೆ ಕೆ.ಆರ್. ಪೇಟೆ ಅಕ್ಕಿ ಹೆಬ್ಬಾಳುವಿನ ಪ್ರಗತಿಪರ ರೈತ ಹೆಚ್.ಟಿ. ರಾಜು ಅವರ ಹೊಲದಲ್ಲಿ ಸಚಿವರು ಚಾಲನೆ ನೀಡಿದರು. ಸಾಮಾನ್ಯ ರೈತನಂತೆ ಪಂಚೆ ಎತ್ತಕಟ್ಟಿ ಕೃಷಿ ಕೆಲಸಕ್ಕೆ ಇಳಿದ ಸಚಿವರು, ಸ್ವತಃ ಡ್ರಂ ಸೀಡರ್ ನ ಚಲಾಯಿಸಿ ಭತ್ತ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ರೈತ ಬಂಧುಗಳು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬೇಕು. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಬೇಸಾಯ ಮಾಡಿ ಹೆಚ್ಚಿನ ಲಾಭಗಳಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕು. ರೈತರ ಕಷ್ಟಸುಖ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ ನಾನೊಬ್ಬ ಬಡರೈತನ ಮಗ. ಭೂಮಿತಾಯಿಯನ್ನು ನಂಬಿಕೊಂಡು ಬೇಸಾಯ ಮಾಡಿದರೆ ಎಂದಿಗೂ ರೈತರಿಗೆ ಕಷ್ಟಬರುವುದಿಲ್ಲ. ರೈತರ ಹಿತಕಾಯಲು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ನೀಡಲು ಸರ್ಕಾರವು ಬದ್ಧವಾಗಿದೆ ಎಂದು ಸಚಿವರು ಹೇಳಿದರು.

ಪೂಜ್ಯರು ಸಾವಿರಾರು ಕಾರ್ಯಕ್ರಮ ಆಯೋಜಿಸಿದ್ದಾರೆ. ಕೂಲಿ ಆಳಿನ ಸಮಸ್ಯೆ, ದುಬಾರಿ ವೆಚ್ಚವನ್ನು ಅರಿತು ಯಂತ್ರ ಆಧಾರಿತ ಕೃಷಿಯನ್ನು ಜಾರಿ ಮಾಡಿದ್ದಾರೆ. ರಾಜ್ಯದಲ್ಲಿ ಹದಿನೈದು ಸಾವಿರ ಎಕರೆಯಲ್ಲಿ ಭತ್ತನಾಟಿ ಮುಂದಾಗಿದ್ದಾರೆ. ಎಕರೆಗೆ 2-3 ಸಾವಿರ ಖರ್ಚು ಆಗುತ್ತದೆ. ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ಸೌಲಭ್ಯ, ಹಸಿರು ಎಲೆ ಗೊಬ್ಬರ ತಯಾರಿಕೆಗೆ ಸಹಾಯಧನ ನೀಡಲಾಗುತ್ತದೆ. ನಾನ್ ಕೂಡ ನಾಟಿ ಮಾಡಿದ್ದೀನಿ, ಬದ್ ಸವರಿದ್ದೀನಿ. ಅಚ್ಚುಕಟ್ಟು ಮಾಡಿದ್ದೀನಿ. ರೈತರ ಕಷ್ಟ ಎನು ಎನ್ನುವುದು ನನಗೆ ಅರಿವಿದೆ. ನನ್ನ ಮೊದಲ ಸಂಬಳದಲ್ಲಿ ಹದಿನಂಟು ರೂಪಾಯಿ ಧರ್ಮಸ್ಥಳಕ್ಕೆ ಕಳಿಸಿದ್ದ ರಸೀದಿ ನನ್ನ ಹತ್ರ ಇನ್ನೂ ಇದೆ. ನನಗೆ ಜ್ಯಾಂಡೀಸ್ ಮೀರೋಗಿತ್ತು. ಆಗ ನನ್ನ ತಾಯಿ ಧರ್ಮಸ್ಥಳಕ್ಕೆ ಹರಕೆ ಕಟ್ಟಿಕೊಂಡಿದ್ದರು. ಈಗಲೂ ಕೂಡ ನನ್ನ ಯಾವುದೇ ವ್ಯವಹಾರಕ್ಕೂ ಮುನ್ನ ಧರ್ಮಸ್ಥಳಕ್ಕೆ ಮೊದಲ ಚೆಕ್ ನೀಡುತ್ತೇನೆ ಎಂದು ಹೇಳಿದರು. ಅಲ್ಲದೆ ಕೃಷಿಗೆ ಪ್ರವಾಸೋದ್ಯಮದ ಸ್ಪರ್ಶ ನೀಡಲು ಸರ್ಕಾರದಲ್ಲಿ ಚಿಂತನೆ ನಡೆದಿದೆ. ಸಚಿವರಾದ ಸಿಟಿ ರವಿ, ಬಿಸಿ ಪಾಟೀಲ್ ಮತ್ತು ನಾನು ಯೋಜನೆ ರೂಪಿಸುತ್ತಿದ್ದೇವೆ. ಈಗಾಗಲೆ ಮೀಟಿಂಗ್ ಕೂಡ ಮಾಡಿ ರೂಪುರೇಷೆ ರೂಪಿಸುವ ಕಾರ್ಯ ಮಾಡಿದ್ದೇವೆ. ಧರ್ಮಸ್ಥಳದ ಪೂಜ್ಯರ ಮಾರ್ಗದರ್ಶನದಲ್ಲಿ ಈ ಯೋಜನೆ ತರುತ್ತೇವೆ. ಕೃಷಿ ಬಗ್ಗೆ ಇತ್ತೀಚಿನ ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ. ನಗರ ಪ್ರದೇಶದ ಜನ ಬಂದು ಒಂದೆರಡು ದಿನ ಹಳ್ಳಿಯಲ್ಲೇ ವಾಸವಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು. ಆ ಮೂಲಕ ಕೃಷಿ ಬಗ್ಗೆ ಅವರು ಮಾಹಿತಿ ಪಡೆದುಕೊಳ್ಳಬೇಕು. ಇದಕ್ಕೆ ಅಗ್ರಿ ಟೂರಿಸಂ ಸಹಾಯವಾಗಲಿದೆ ಎಂದು ಸಚಿವ ಡಾ| ನಾರಾಯಣ ಗೌಡ ಹೇಳಿದರು.

ಆದಿಚುಂಚನಗಿರಿಯ ಹೇಮಗಿರಿ ಶಾಖಾಮಠದ ಕಾರ್ಯದರ್ಶಿಗಳಾದ ಡಾ.ರಾಮಕೃಷ್ಣೇಗೌಡ ಮತ್ತು ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ. ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಚಂದ್ರಶೇಖರ್, ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಹೇಮಗಿರಿಯ, ಬಿಜಿಎಸ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಪವಿತ್ರ, ಕೃಷಿ ಅಧಿಕಾರಿ ಶ್ರೀಧರ್ ಮತ್ತಿತರರು ಭತ್ತ ನಾಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.