IMG 20211026 WA0009

ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ಉತ್ಪಾದಕರ ಸಂಸ್ಥೆ ರಚನೆ….!

DISTRICT NEWS ತುಮಕೂರು

ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ಉತ್ಪಾದಕರ ಸಂಸ್ಥೆ ರಚನೆ

ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ ರೇಷ್ಮೆ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ನೇಕಾರರು ಹೆಚ್ಚಾಗಿರುವುದರಿಂದ ಉತ್ಪಾದಕರ ಸಂಸ್ಥೆ ರಚನೆ ಮಾಡಲು ಇಲಾಖೆ ಉದ್ದೇಶಿಸಿದ್ದು, ನೇಕಾರರ ಸಹಕರಿಸಬೇಕಾಗ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಸುಮಲತ ತಿಳಿಸಿದರು.

ಗ್ರಾಮದ ಸಿದ್ದಲಿಂಗೇಶ್ವರ ಉಣ್ಣೆ ಮತ್ತು ಕೈಮಗ್ಗ ನೇಕಾರ ಸಂಘದಲ್ಲಿ ಮಂಗಳವಾರದಂದು ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಕನಿಷ್ಟ ೧೫೦ ಜನ ಸದಸ್ಯರನ್ನು ಹೊಂದಿರುವಂತೆ ಉತ್ಪಾದಕ ಸಂಘ ರಚನೆಯಾಗಬೇಕಾಗಿದೆ. ಸದಸ್ಯರಾಗ ಬಯಸುವವರು ೧೫೦೦ ಷೇರು ಬಂಡವಾಳ ಹೂಡಬೇಕಾಗಿದೆ. ಸಂಘ ರಚನೆಯಾದ ನಂತರ ೩ ವರ್ಷಗಳ ಕಾಲ ಪ್ರತಿವರ್ಷ ೧೦ ಲಕ್ಷ ರೂಗಳಂತೆ ಒಟ್ಟು ೩೦ ಲಕ್ಷ ರೂಪಾಯಿಗಳು ಸಂಘಕ್ಕೆ ಇಲಾಖೆಯ ಪ್ರೋತ್ಸಾಹ ಧನ ದೊರೆಯುತ್ತದೆ ಎಂದರು.
ಇಲಾಖೆಯಲ್ಲಿ ಈಗಾಗಲೇ ನೇಕಾರರಿಗೆ ಹಲವು ಸೌಲಭ್ಯಗಳು ದೊರೆಯುತ್ತಿವೆ. ವಿಮೆ, ಟೆಕ್ಸ್ ಟೈಲ್ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ, ೬೦ ವರ್ಷ ತುಂಬಿದ ಇಲಾಖೆಯಿಂದ ನೇಕಾರ ಸನ್ಮಾನ್ ರಾಜ್ಯ ಪ್ರಶಸ್ತಿ ಪಡೆದಿರುವ ನೇಕಾರರಿಗೆ ಪ್ರತಿ ತಿಂಗಳು ೮೦೦೦ ರೂ ಪಿಂಚಣಿ ಇನ್ನಿತರೆ ಸೌಲಭ್ಯಗಳು ಚಾಲ್ತಿಯಲ್ಲಿವೆ. ಹಾಗಾಗಿ ಉತ್ಪಾದಕರ ಸಂಘ ರಚನೆಯನ್ನು ಮಾಡಿದರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಇಲಾಖೆಯ ಸಹನಿರ್ದೇಶಕ ಸಂತೋಷ್, ಸೊಸೈಟಿ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿಗಳಾದ ಪ್ರಭಾಕರ, ಸಿ.ಎ.ಬಾಲಾಜಿ, ವಿಜಯ ಕುಮಾರ್ ಮತ್ತು ನೇಕಾರರು ಇದ್ದರು.

ವರದಿ: ಸತೀಶ್