ಕನ್ನಡ ಸಾಹಿತ್ಯ ಪರಿಷತ್ತು ಅನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ಕರ್ನಾಟಕ ಸಂತೆ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘ ದ ಸಂಯುಕ್ತ ಆಶ್ರಯದಲ್ಲಿ ಆನೇಕಲ್ ಪಟ್ಟಣದ ಕಛೇರಿಯಲ್ಲಿಸಂತೆ ವ್ಯಾಪಾರಿಗಳಿಗೆ ಸಾಹಿತ್ಯದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ವಹಿಸಿದ್ದರು
ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷರಾದ ಎನ್ ಎಸ್ ಪದ್ಮನಾಭ ಉದ್ಘಾಟಿಸಿದರು ವಕೀಲರಾದ ಎಚ್ ಶ್ರೀನಿವಾಸ್ ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ಪುರಸಭೆ ಸದಸ್ಯರಾದ ಮುನವರ್ ಪ್ರಕಾಶ್ ವೇಣುಗೋಪಾಲ್ ರಾಮಚಂದ್ರ ಇದ್ದರು ಪುರಸಭೆ ಅಧ್ಯಕ್ಷರಾದ ಎನ್ ಎಸ್ ಪದ್ಮನಾಭ ಮಾತನಾಡಿ ಕನ್ನಡಿಗರಲ್ಲಿ ಕನ್ನಡ ಭಾಷೆಯ ಆಸಕ್ತಿ ಕಡಿಮೆಯಾಗಿರುವುದು ದುರಂತದ ವಿಚಾರ ಭಾಷೆ ಎಲ್ಲರನ್ನೂ ಕೂಡಿಸುವ ಕೊಂಡಿಯಾಗಿದೆ ಎಂದು ತಿಳಿಸಿದರು
ಹಿರಿಯ ವಕೀಲರಾದ ಹೆಚ್ ಶ್ರೀನಿವಾಸ್ ಮಾತನಾಡಿ ಜನಸಾಮಾನ್ಯರಲ್ಲಿ ಭಾಷೆಯ ಅರಿವನ್ನು ಮೂಡಿಸಿದರೆ ಭಾಷೆಗೆ ಕುತ್ತು ಬರುವುದಿಲ್ಲ ಹಳ್ಳಿಗಾಡಿನ ಜನ ಭಾಷೆಯಿಂದ ಯಾವುದೇ ನಿರೀಕ್ಷೆಯಿಲ್ಲದೆ ಭಾಷೆಯನ್ನು ಉಳಿಸ ಬಲ್ಲವರಾಗಿದ್ದಾರೆ ಎಂದು ತಿಳಿಸಿದರು
ಮುಖ್ಯ ಭಾಷಣಕಾರರಾಗಿ ವಿಶ್ವಚೇತನ ಕಾಲೇಜಿನ ಉಪನ್ಯಾಸಕರಾದ ಎಂ ವಿ ಮಂಜುನಾಥ್ ಮಾತನಾಡಿ ತಂದೆ ತಾಯಿಗೆ ಮಕ್ಕಳು ಕನ್ನಡದಲ್ಲಿ ಕಲಿತರೆ ಮುಂದಿನ ಭವಿಷ್ಯ ಮಂಕಾಗಬಹುದೆಂಬ ಆತಂಕ ಕಾಡುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು
ಸಾಹಿತ್ಯ ಒಬ್ಬರ ಸ್ವತ್ತಲ್ಲ ಯಾರುಅಧ್ಯಯನಶೀಲರಾಗುತ್ತಾರೆ ಅವರ ನೆರಳಿನಂತೆ ಸಾಹಿತ್ಯ ಹಿಂಬಾಲಿಸುತ್ತದೆ ಒಬ್ಬ ವ್ಯಾಪಾರಿ ಒಂದು ನಿಘಂಟಿನಷ್ಟು ಪದಗಳನ್ನು ಮಾತನಾಡಬಲ್ಲ ಎಂದು ತಿಳಿಸಿದರು
ಪುರಸಭೆ ಸದಸ್ಯರಾದ ಮುನಾವರ್ ಪ್ರಕಾಶ್ ಸರ್ಕಾರಿ ಆಸ್ಪತ್ರೆಯ ಸಂಪಂಗಿ ಮಾಜಿ ಉಪಾಧ್ಯಕ್ಷರಾದ ಬಿಪಿ ಮರಿಯಪ್ಪ ವಿಶ್ವಚೇತನ ಕಾಲೇಜಿನ ಉಪನ್ಯಾಸಕರಾದ ರವಿಕುಮಾರ್ ರವರುಗಳಿಗೆ ಸನ್ಮಾನ ಮಾಡಲಾಯಿತು
ಕಾರ್ಯಕ್ರಮದಲ್ಲಿ ಇಲಿಯಾಸ್ ಖಾನ್ ಉಪನ್ಯಾಸಕರಾದ ಸುರೇಶ್ ಬಿರಾದರ್ ಶಿಕ್ಷಕರಾದ ಚಂದ್ರಪ್ಪ ಗಾಯಕರಾದ ರಾಮಚಂದ್ರ ಶಿವಪ್ಪ ಗಾರೆ ಮೇಸ್ತ್ರಿ ಪೂಜಾರಿ ನಾಗರಾಜು ಕನ್ನಯ್ಯಕುಮಾರ್ ನಾಗೇಶ್ ಸಂತೆ ಮತ್ತು ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾದ ವೇಣುಗೋಪಾಲ್ ನಾರಾಯಣ್ ಮಣಿ ರಮೇಶ್ ಗೋಪಿ ರಮಚಂದ್ರ ಶಂಕರ್ ನಾಗ್ ಆಟೋ ಚಾಲಕರ ಸಂಘದ ವೆಂಕಟರಾಜು ಸೋಮಶೇಖರ್ ರೆಡ್ಡಿ ಮುರುಳಿ ಮಣಿ ಕಸಾಪ ಪದಾಧಿಕಾರಿಗಳಾದ ಎಂ ಗೋವಿಂದರಾಜು ಡಾ. ನಾಗರಾಜ್ ಮಿಲಿಟರಿ ಕುಮಾರ್ ಮಲ್ಲಿಕಾರ್ಜುನ ಆರಾಧ್ಯ ಬಿ ಹಾಜರಿದ್ದರು
ವರದಿ; ಹರೀಶ್ ಆನೇಕಲ್.