IMG 20210119 WA0002

ಪಾವಗಡ: ನಾಗಮಡಿಕೆ- ಜಾತ್ರೆ ಇಲ್ಲ: ಜನನೂ ಇಲ್ಲ….!

DISTRICT NEWS ತುಮಕೂರು

ಪಾವಗಡ . ಕೊರೋನ: ಮಾರ್ಗಸೂಚಿ ಅನುಗುಣವಾಗಿ  ಈವರ್ಷ ದ  ನಾಗಲಮಡಿಕೆ ಸುಬ್ರಮಣ್ಯ ಸ್ವಾಮೀ ರಥೋತ್ಸವ  ರದ್ದಾದ ಹಿನ್ನಲೆಯಲ್ಲಿ ಜಾತ್ರೆಯಲ್ಲು  ಜನರು ಇಲ್ಲದಂತಾಗಿದೆ.

ನಾಗಲಮಡಿಕೆ ಸುಬ್ರಮಣ್ಯ ದೇವಸ್ಥಾನ ತನ್ನದೇ ಆದ ವಿಶೇಷತೆ ಹಾಗೂ ಐತಿಹಾಸವನ್ನು‌ ಹೊಂದಿದೆ. ಅಪಾರ ಭಕ್ತ ಗಣ ಸಮೂಹವನ್ನು ದಕ್ಷಿಣ ಭಾರತಾದ್ಯಂತ ಹೊಂದಿದೆ. ಈ ದೇವಾಲಯದ ಸನಿಹದಲ್ಲೇ ಉತ್ತರ ಪಿನಾಕಿನಿ ನದಿ ಹರಿಯುತ್ತದೆ.
ಇಲ್ಲಿ ಪ್ರತಿವರ್ಷವು ರಥೋತ್ಸವ ಹಾಗೂ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಡಿಸೆಂಬರ್ -ಜನವರಿ ಮಾಹೆಯಲ್ಲಿ ನಡೆಯುತ್ತವೆ

ರಥೋತ್ಸವ ವಿಶೇಷ ಪುಷ್ಯ ಮಾಸದ ಷಷ್ಠಿಯಂದುನಡೆಯುತ್ತದೆ. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ದೂರದೂರುಗಳಿಂದ ಎತ್ತಿನ ಬಂಡಿಯಲ್ಲಿ ಬಂದು ನದಿ ತಟದಲ್ಲಿ ಅಡುಗೆ ತಯಾರಿಸಿ ಪೂಜೆ ನಂತರ ಒಂದು ಹೊತ್ತು ಬಿಡುವ ಪದ್ಧತಿ ಈ ಭಾಗದ ಜನರಲ್ಲಿದೆ.

ಮಾರ್ಗಶಿರ, ಪುಷ್ಯ, ಮಾಘ ಮಾಸಗಳ ಷಷ್ಠಿಯಂದು ಆರಾಧನೆ, ವಿಶೇಷ ಪೂಜಾ ಮಹೋತ್ಸವ ನಡೆಸಲಾಗುತ್ತದೆ. ಅಂದರೆ ಈ ಬಾರಿ ಕೊರೋನ ಎಂಬ ವೈರಸ್ ನಿಂದ  ರಥೋತ್ಸವ ಇಲ್ಲದಂತಾಗಿದೆ.ಜೊತೆಗೆ ಇಲ್ಲಿ ಬಾರಿ ನಡೆಯುವ ದನಗಳ ಜಾತ್ರೆಯು ರದ್ದಾಗಿದೆ.

ಈ ದೇವಾಲಯವು ಪಾವಗಡದಿಂದ 18 ಕಿ.ಮೀ ದೂರ ದಲ್ಲಿದೆ

ವರದಿ : ಬುಲೆಟ್ ವೀರಸೇನ ಯಾದವ್