IMG 20210119 WA0014

ಪಾವಗಡ: ಜಾತಿಗಾಗಿ ಜಾಗೃತಿ ಜಾಗೃತಿಗಾಗಿ ಜಾತ್ರೆ..!

DISTRICT NEWS ತುಮಕೂರು

ಜಗದ್ಗುರು ಶ್ರೀ ವಾಲ್ಮೀಕಿ ಮಹರ್ಷಿಗಳುಪ್ರಸನ್ನಾನಂದಮಹಾಸ್ವಾಮೀಜಿಯವರು
ಮೂರನೇ ವಷ೯ದ ವಾಲ್ಮೀಕಿ ಜಾತ್ರೆ ಪ್ರಯುಕ್ತ ಇಂದು  ಪಾವಗಡದಲ್ಲಿ ಸಭೆ ನಡೆಸಿದರು.

ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ ಜನ ಜಾಗೃತಿ ಜಾತ್ರೆ ಯಾಗಬೇಕು ಎಂದು ಕರೆ ನೀಡಿದರು.

ಜಾತಿಗಾಗಿ ಜಾಗೃತಿ ಜಾಗೃತಿಗಾಗಿ ಜಾತ್ರೆ ಘೋಷ ವಾಕ್ಯದೊಂದಿಗೆ ಈ ಜಾತ್ರೆಯ ಮೂಲಕ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ತಿಳಿಸಿದರು..
ರಾಜ್ಯದಲ್ಲಿ ಅರವತ್ತು ಲಕ್ಷ ಜನಸಂಖ್ಯೆ ಹೊಂದಿರುವ ಬೇಡ ವಾಲ್ಮೀಕಿ ನಾಯಕ ಜನಾಂಗ ಇಂದು ಸಂವಿಧಾನ ಬದ್ಧ ಹಕ್ಕಿಗಾಗಿ ಹೋರಾಟ ಮಾಡುತ್ತಿದೆ. ಈ ರಾಜ್ಯದಲ್ಲಿ ನಾಯಕರು ಹೋರಾಟ ಮಾಡಿದರೆ ಅದು ನ್ಯಾಯಯುತವಾಗಿರುತ್ತದೆ.. ಮೀಸಲಾತಿಗಾಗಿ ಅನೇಕ ಹೋರಾಟ ಮಾಡಿದ್ದೇವೆ

ಎರಡನೇ ವಷ೯ದ ವಾಲ್ಮೀಕಿ ಜಾತ್ರೆಯ ಸಂದಭ೯ದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ವರದಿ ಬಂದ ತಕ್ಷಣ ಮೀಸಲಾತಿ ಹೆಚ್ಚಿಸುತ್ತೇವೆ ಎಂದು ಭರವಸೆ ನೀಡಿದ್ದರು… ಇದು ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಸಕಾ೯ರ ಈಗಾಗಲೇ ಉಪಸಮಿತಿಯನ್ನು ರಚಿಸಿದೆ… 3ನೇ ವರ್ಷದ ಜಾತ್ರೆಯ ಒಳಗೆ ಮೀಸಲಾತಿ ಹೆಚ್ಚಿಸದಿದ್ದರೆ ನಾವು ಜಾತ್ರೆಯಲ್ಲಿ ಐತಿಹಾಸಿಕ ಅಂತಿಮವಾದ ತೀಮಾ೯ನ ಕೈಗೊಳ್ಳುತ್ತೇವೆ

ಜಾತ್ರೆ ಅಂದರೆ ಕೇವಲ ಸಂಭ್ರಸಡಗರ ಅಲ್ಲ ಸಮುದಾಯದ ಹಿತಾಸಕ್ತಿ ಕಾಪಾಡಲು, ಸಮುದಾಯದ ಬೇಡಿಕೆಗಳನ್ನು ಸಕಾ೯ರಕ್ಕೆ ಒತ್ತಾಯಿಸುವ ಸಂಘಟನಾತ್ಮಕ ವೇದಿಕೆ.. ನಾವು ಸಂಘಟಿತರಾದಾಗ ಮಾತ್ರ ಸಕಾ೯ರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತದೆ ಎಂದರು

ಈ ಸಂದಭ೯ದಲ್ಲಿ ಪೂಜ್ಯ ಶ್ರೀ ಸಂಜಯ ಕುಮಾರ ಸ್ವಾಮೀಜಿಯವರು ಸಮ್ಮುಖ ವಹಿಸಿದ್ದರು.
ನಂತರ ಜಾತ್ರಾ ವಾಲ್ ಪೋಸ್ಟರ್ ಬಿಡುಗಡೆ ಮಾಡಲಾಯಿತು
ಸಭೆಯಲ್ಲಿ ಪಾವಗಡ ತಾಲ್ಲೂಕಿನ ನಾಯಕ ಸಮುದಾಯದ ಮುಖಂಡರಾದ ,ನಾಯಕ ನೌಕರರ ಸಂಘದ ಅಧ್ಯಕ್ಷ ಎನ್.ಅನಿಲ್ ಕುಮಾರ್ , ರೋಟರಿ ನಾರಾಯಣಪ್ಪ ,ವಾಲ್ಮೀಕಿ ಜಾಗೃತಿ ವೇದಿಕೆ ಲೋಕೇಶ್ ಪಾಳೇಗಾರ್ ,ಕೆ .ಎನ್.ಅರ್ ಅಭಿಮಾನ ಬಳಗದ ಡಿ .ಸಿ ಸಿ ಬ್ಯಾಂಕಿನ ಸೀನಪ್ಪ ,ತಿರುಮಲ ತಿರುಪತಿ ಭವನ ಅಧೀಕ್ಷಕ ಶ್ರೀನಿವಾಸ್ , ಚಿತ್ತಗಾನಹಳ್ಳಿ ಚಂದ್ರು, ಬಿ ಜೆ ಪಿ . ಎಸ್ .ಟಿ .ಜಿಲ್ಲಾ ಪ್ರದಾನ ಕಾರ್ಯದರ್ಶಿ ಬ್ಯಾಡನೂರು ಶಿವು ,ಓಂಕಾರ್ ನಾಯಕ ವಕೀಲರಾದ ಕೃಷ್ಣ ,ಮಧು ಪಾಳೇಗಾರ್ ಕನ್ನಮೇಡಿ ಸುರೇಶ , ಕರವೇ ಅಧ್ಯಕ್ಷ ಲಕ್ಷ್ಮಿ , ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ ರಾಮಕೃಷ್ಣ ಸೇವಾಶ್ರಮದ ಪ್ರಕಾಶ್ ನಾಯಕ ,ಇನ್ನು ಹಲವಾರು ಸಮಾಜದ ಯುವಕರು, ಹಾಜರಿದ್ದರು.

ವರದಿ ಬುಲೆಟ್ ವೀರಸೇನ ಯಾದವ್