IMG 20220902 WA0001

ಮಧುಗಿರಿ:ಎಸ್ ಎಸ್ ಎಲ್ ಸಿ. ಪಿ ಯು ಸಿ. ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ….!

DISTRICT NEWS ತುಮಕೂರು

ಮಧುಗಿರಿ ಜನತೆ ನನ್ನನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿಕಳಿಸಿದ್ದೀರಾ. ನಾನೆಂದೂ ಕೂಡ ಧರೆಯೊಳ್ ಎಲ್ಲೇ ಇರಲಿ, ಮರೆಯಲಾರೆ ಮಧುಗಿರಿಯನ್ನು. ಡಾ ಜಿ ಪರಮೇಶ್ವರ್ ……
.

ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿಯ ನೇರಳೆಕೆರೆ ಗ್ರಾಮದಲ್ಲಿ ನಡೆದ ಶ್ರೀ ವೀರ ಬಾಲ ನಾಗಮ್ಮ ದೇವಿಯ ಕಾರ್ಯಕ್ರಮ ಹಾಗೂ ಅತಿ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ. ಪಿ ಯು ಸಿ. ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಗಳಾದ ಹಾಲಿ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ರವರು ಶ್ರೀ ವೀರ ಬಾಲ ನಾಗಮ್ಮ ದೇವಿಯ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವ ಕಾರ್ಯಕ್ರಮಕ್ಕೆ ನನ್ನನ್ನು
ಆಹ್ವಾನಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ನನಗೆ ಈ ದಿನ ಏನೆಲ್ಲಾ ಕಾರ್ಯಕ್ರಮಗಳು ಇದ್ದರೂ ಕೂಡ ಅವುಗಳನ್ನು ಬದಿಗೊತ್ತಿ ಇಂದು ಈ ಕಾರ್ಯಕ್ರಮಕ್ಕೆ ನಾನು ಹಾಜರಾಗಿದ್ದೇನೆ ಎಂದರು.

IMG 20220902 WA0002

ಚಲವಾದಿ ಸಮುದಾಯದಲ್ಲಿ ಹಲವು ಕಟ್ಟೆ ಮನೆಗಳಿವೆ ಆದರೆ ಪೂರ್ವಜರು ನಡೆದುಕೊಂಡು ಬಂದಿರುವುದು ರಂಟವಳಲುಗ್ರಾಮದಲ್ಲಿ ಆದರೆ ಕಾರಣಾಂತರಗಳಿಂದ ನೇರಳೆ ಕೆರೆ ಗ್ರಾಮದಲ್ಲಿ ವೀರ ಬಾಲ ನಾಗಮ್ಮ ಎಂಬವರು ಇದ್ದರು ಅವರ ಗಂಡನು ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ನಿಧನ ವಿಷಯತಿಳಿದು ಅವರ ಬೆಂಕಿಗೆ ಹಾರಿದ್ದಾರೆ ಆ ದೇವಿಯೇ ಶ್ರೀ ವೀರ ಬಾಲಮ್ಮ ನಾಗಮ್ಮ ನೇರಳೆ ಕೆರೆ ಗ್ರಾಮದಲ್ಲಿ ನೆಲೆಸಿದ್ದಾಳೆ. ಆ ದೇವಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರಗಳು ನಡೆಸಿಕೊಂಡು ಬರುತ್ತಿರುವುದು ತುಂಬಾ .ಸಂತೋಷದಾಯಕ.
ಶ್ರೀ ವೀರ ಬಾಲ ನಾಗಮ್ಮ ಟ್ರಸ್ಟ್ ವತಿಯಿಂದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರ ಈ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಉನ್ನತ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮುದಾಯಕ್ಕೆ ಶೋಭೆ ತರಲಿ ಎಂದು ನಾನು ಈ ಸಂದರ್ಭದಲ್ಲಿ ಅವರನ್ನು ಆಶೀರ್ವಾದ ಮಾಡುತ್ತೇನೆ. ನಾವುಗಳೆಲ್ಲರೂ ಈ ರೀತಿ ಶಿಕ್ಷಣ ರಾಜಕೀಯ ಇನ್ನಿತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆ. ಅವರು ಓದಬೇಕಾದರೆ ಶಾಲೆಯ ಮೂಲೆಯಲ್ಲಿ ಕುಳಿತುಕೊಂಡು ಓದ ಬೇಕಾಗಿತ್ತುಅವರು ಹೊರದೇಶಕ್ಕೆ ಹೋಗಿ ಉನ್ನತ ವಿದ್ಯಾಭ್ಯಾಸವನ್ನು ಪಡೆದು ಸರ್ಕಾರದಲ್ಲಿ ಉನ್ನತ ಹುದ್ದೆಅಲಂಕರಿಸಿ ಕೆಲಸ ನಿರ್ವಹಿಸುತ್ತಿರಬೇಕಾದರೆ ಕಚೇರಿಯಲ್ಲಿನ ಜವಾನ ಅವರ ಫೈಲ್ ಗಳನ್ನು ಟೇಬಲ್ ಮೇಲೆ ಇಡದೆ ದೂರದಿಂದ ಎಸೆಯುತ್ತಾನೆ ಈ ಅವಮಾನಗಳನ್ನು ಸಹಿಸಿಕೊಂಡು ಹೋಗಿರುತ್ತಾರೆ. ಮುಂದೆ ನನ್ನ ಜನಾಂಗಕ್ಕೆ ಈ ರೀತಿಯ ಅವಮಾನಗಳು ಸಮಾಜದಲ್ಲಿ ನಡೆಯದೇ ಇರಲಿ ಎಂದು ಸಂವಿಧಾನದಲ್ಲಿ ಹಕ್ಕುಗಳನ್ನು ಬರೆದು ಹೋಗಿದ್ದಾರೆ ಅವರು ಹಾಕಿಕೊಟ್ಟಂತಹ ಮಾರ್ಗದರ್ಶನದಲ್ಲಿ ನಾವೆಲ್ಲರೂ ಹೋಗಬೇಕು ಎಂದರು.

IMG 20220902 WA0000


ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಅವರಿಗೆ ಪ್ರೋತ್ಸಾಹಿಸೋಣ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಟ್ರಸ್ಟ್ಅಧ್ಯಕ್ಷರಾದ ಶಾಂತಕುಮಾರ್ ಕೆಪಿಸಿಸಿ ಕಾರ್ಯದರ್ಶಿಯಾದ ಬಿಎಸ್ ದಿನೇಶ್ ಎಲ್ ಸಿ ನಾಗರಾಜ್. ತುಮಕೂರು ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಜಿ ಜೆ ರಾಜಣ್ಣ ಧಾರ್ಮಿಕ ಮುಖಂಡರಾದ ಎಂ ಜಿ ಶ್ರೀನಿವಾಸ್ ಮೂರ್ತಿ ತುಂಗೋಟಿ ರಾಮಣ್ಣ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಲಕ್ಷ್ಮೀ ನರಸಯ್ಯ ಚಲವಾದಿ ಮಹಾಸಭಾ ಅಧ್ಯಕ್ಷರಾದ ಕೆವಿ ವೆಂಕಟೇಶ್ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಟಿ ಎನ್ ನರಸಿಂಹಮೂರ್ತಿ ಕೊರಟಗೆರೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜು ಸಹಾಯಕ ನಿಬಂಧಕರಾದಸಣ್ಣಪ್ಪಯ್ಯ ಟ್ರಸ್ಟ್ ನ ಕಾರ್ಯದರ್ಶಿಯಾದ ಎನ್ಆರ್ ಅಂಬೇಡ್ಕರ್ ಆನಂದ್ ಗ್ರಾಮ ಪಂಚಾಯತಿ ಸದಸ್ಯರಾದ ರಾಜಶೇಖರ್ .ನಂಜಪ್ಪ .ಉಮಾದೇವಿ ನಾಗರಾಜು. ಉಮಾದೇವಿ ಲಕ್ಷ್ಮಿಪತಿ .ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು

ವರದಿ. ಲಕ್ಷ್ಮಿಪತಿ ದೊಡ್ಡ ,ಯಲ್ಕೂರು