IMG 20260730 WA0006

ಪಾವಗಡ : ಸಮಸ್ಯೆಗಳ ಆಗರವಾದ ಅಂಬೇಡ್ಕರ್ ವಸತಿ ಶಾಲೆ….!.

DISTRICT NEWS ತುಮಕೂರು

ಸಮಸ್ಯೆಗಳ ಆಗರವಾದ ಪಳವಳ್ಳಿಯ ಅಂಬೇಡ್ಕರ್ ವಸತಿ ಶಾಲೆ.

ಪಾವಗಡ : ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದಾತ್ತ ಉದ್ದೇಶದಿಂದ ಆರಂಭವಾದ ಅಂಬೇಡ್ಕರ್ ವಸತಿ ಶಾಲೆ ಮೂಲಸೌಕರ್ಯಗಳ ಕೊರತೆ ಮತ್ತು ಕಳಪೆ ನಿರ್ವಹಣೆಯಿಂದಾಗಿ ಸಮಸ್ಯೆಗಳ ಆಗಾರವಾಗಿ ಮಾರ್ಪಟ್ಟಿದೆ
ತಾಲ್ಲೂಕಿನ ಪಳವಳ್ಳಿ ಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಜುಲೈ 14ರಂದು 10ನೇ ತರಗತಿಯ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿರುವುದರ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾದ ಹಿನ್ನೆಲೆ ಎಚ್ಚೆತ್ತುಕೊಂಡು ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಾಮಾಜಿಕ ಕಾರ್ಯಕರ್ತ ನವೀನ್ ಮತ್ತು ಸಮಾಲೋಚಕರಾದ ಚಂದನ ತಾಲೂಕಿನ ಸಿ ಡಿ ಪಿ ಓ ಸುನಿತಾ ಡಿ ಜಿ ಗುರುವಾರ ತಾಲೂಕಿನ ಪಳವಳ್ಳಿ ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ವಿದ್ಯಾರ್ಥಿಗಳಿಂದ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡರು.

ವಸತಿ ಶಾಲೆಯಲ್ಲಿ ಮೆನುವಿನ ಪ್ರಕಾರ ಊಟ ನೀಡುತ್ತಿಲ್ಲವೆಂದು, ರಾತ್ರಿ ವೇಳೆಯಲ್ಲಿ ಕರೆಂಟ್ ಹೋದರೆ ಜನರೇಟರ್ ಸೌಲಭ್ಯವಿಲ್ಲ
ಪೋಷಕರು ತಮ್ಮನ್ನು ನೋಡಲು ಬಂದರೆ ಪೋಷಕರಿಗೆ ಅವಕಾಶ ಕಲ್ಪಿಸುವುದಿಲ್ಲ, ಸ್ನಾನ ಮಾಡಲು ಬಿಸಿ ನೀರಿನ ಸೌಲಭ್ಯವಿಲ್ಲ, ಒಂದು ಜೊತೆ ನೈಟ್ ಡ್ರೆಸ್ ಕೊಟ್ಟು ದಿನಾಗಲೂ ಹಾಕಿಕೊಳ್ಳಲು ತಿಳಿಸುತ್ತಾರೆ, ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸರಿಯಾದ ಸಲಕರಣೆಗಳಿಲ್ಲ, ಸಿಸಿ ಕ್ಯಾಮೆರಾಗಳ ವ್ಯವಸ್ಥೆ ಇಲ್ಲ, ಸ್ನಾನ ಮಾಡಲು ಬಿಸಿ ನೀರಿನ ಸೌಲಭ್ಯದ ಕೊರತೆ, ಎಂದು ಸಮಸ್ಯೆಗಳ ಒಂದು ಲಿಸ್ಟನ್ನು ಭೇಟಿ ನೀಡಿದಂತಹ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪೋಷಕರನ್ನು ಬಿಟ್ಟು ವಸತಿ ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ವಸತಿ ಶಾಲೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ವಾಗದೆ ಶಾಲೆಯಿಂದ ಓಡಿ ಹೋಗುವ ಪ್ರಸಂಗಗಳು ತಿಳಿದು ಬಂದಿವೆ.
ನಾನಾ ಕನಸು ಹೊತ್ತು ವಸತಿ ಶಾಲೆಗೆ ವಿದ್ಯಾರ್ಥಿಗಳ ಪಾಡು ದೇವರೇ ಹೇಳತೀರದಾಗಿದೆ. ಅವ್ಯವಸ್ಥೆ ಆಗರದಂತಿರುವ ವಸತಿ ಶಾಲೆಯಲ್ಲಿ ಮಕ್ಕಳು ಹೇಗೆ ಕಲಿಯುತ್ತಾರೆ ಎಂಬ ಆತಂಕ ಪಾಲಕರನ್ನೂ ಕಾಡುತ್ತಿದೆ.
ಒಂದು ತಿಂಗಳ ಒಳಗಾಗಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ತಾಲೂಕು ಸಿ ಡಿ ಪಿ ಓ ಸುನೀತಾ ಡಿ. ಜಿ ಪ್ರಾಂಶುಪಾಲೆ ಲತಾ ರವರಿಗೆ ತಾಕೀತು ಮಾಡಿದ್ದಾರೆ.

Leave a Reply

Your email address will not be published. Required fields are marked *