ನಾಡಪ್ರಭು ಕೆಂಪೇಗೌಡ ಮೈದಾನದಲ್ಲಿ ವಿಶೇಷ ಪೂಜೆ, ಭವ್ಯ ಗಂಗಾರತಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಮಲ್ಲೇಶ್ವರ–ಸುಬ್ರಹ್ಮಣ್ಯನಗರದ ಮಿಲ್ಕ್ ಕಾಲೋನಿಯ ನಾಡಪ್ರಭು ಕೆಂಪೇಗೌಡ ಮೈದಾನದಲ್ಲಿ ವಿಶೇಷ ಪೂಜೆ ಹಾಗೂ ಭವ್ಯ ಗಂಗಾರತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, “ನರೇಂದ್ರ ಮೋದಿಜಿ ಎಂದರೆ ದೇಶ ಸೇವೆ, ಸಾಧನೆ ಮತ್ತು ಸಮರ್ಪಣೆ” ಎಂದು ಬಣ್ಣಿಸಿದರು.
ಮೋದಿಯವರ ಸಾರ್ವಜನಿಕ ಜೀವನ ದೇಶಸೇವೆಗೆ ಸಮರ್ಪಿತವಾಗಿದ್ದು, ಅವರ ನಾಯಕತ್ವದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ ಎಂದು ಯಡಿಯೂರಪ್ಪ ಹೇಳಿದರು. ಬಡವರಿಗೆ ಮನೆ, ರೈತರಿಗೆ ಬೆಂಬಲ, ಮಹಿಳಾ ಸಬಲೀಕರಣ ಹಾಗೂ ಯುವಜನರಿಗೆ ಹೊಸ ಅವಕಾಶಗಳು ಅಭಿವೃದ್ಧಿಯ ಮಾದರಿಯ ಭಾಗವಾಗಿವೆ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಸಸಿ ನೆಡುವುದು, ರಕ್ತದಾನ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮೋದಿಯವರ ಜನ್ಮದಿನವನ್ನು ಜನೋಪಯೋಗಿ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ, ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನಿ ಗೌಡ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು.
