ಕಬಿನಿ ಜಲಾಶಯಕ್ಕೆ ಕಪ್ಪು ಬಾವುಟ ಪ್ರದರ್ಶನ ಕ್ಕೆ ಹೋಗಲು ಯತ್ನಿಸಿದ ರೈತರ ಬಂಧನ
ಕಬಿನಿ ಜಲಾಶಯಕ್ಕೆ ಪೂಜೆ ಸಲ್ಲಿಸಲು ಆಗಮಿಸುತ್ತಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಕಬಿನಿಗೆ ತೆರಳುತ್ತಿದ್ದ ರೈತರನ್ನು ಪೊಲೀಸರು ಶಿರಮಳ್ಳಿ ವೃತ್ತದಲ್ಲಿ ಪೊಲೀಸರು ತಡೆದಾಗ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರೈತರನ್ನು ತಡೆಯಲು ಯಾವ ಕಾನೂನಿನಡಿ ನಿಮಗೆ ಅವಕಾಶವಿದೆ ಸೆಕ್ಷನ್ 144 ಜಾರಿ ಮಾಡಲಾಗಿದೆಯೇ ಅಥವಾ ಯಾವ ಕಾರಣಕ್ಕಾಗಿ ನಮ್ಮನ್ನು ತಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದರು ಡಿವೈಎಸ್ಪಿ ಸುಂದರರಾಜ್ ಮೇಲಾಧಿಕಾರಿಗಳ ಸೂಚನೆ ಇದೆ ಆ ಕಾರಣ ರೈತರನ್ನು ತಡೆಯಲಾಗಿದೆ ಕೊರೋನಾ ಸಂದರ್ಭ ವಾದ ಕಾರಣ ಮುಖ್ಯಮಂತ್ರಿಗಳ ಬಳಿಗೆ ತೆರಳಲು ಅವಕಾಶವಿಲ್ಲ ಎಂದು ಹೇಳಿದರು ನಾಲ್ಕೈದು ಜನ ರೈತ ಮುಖಂಡರು ಬರುವುದಾದರೆ ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯುವುದಾಗಿ ತಿಳಿಸಿದರು ಅದಕ್ಕೆ ಒಪ್ಪದ ರೈತರು ಬ್ಯಾರಿಕೇಡ್ ಗಳನ್ನು ತಳ್ಳಿ ಮುಂದೆ ಹೋಗಲು ಯತ್ನಿಸಿದಾಗ ನಿಮ್ಮನ್ನು ಬಂಧಿಸುವುದಾಗಿ ಹೇಳಿ 50 ಜನ ರೈತರನ್ನು ವಶಕ್ಕೆ ಪಡೆದರು ಪೊಲೀಸ್ ದೌರ್ಜನ್ಯಕ್ಕೆ ಧಿಕ್ಕಾರ ರೈತ ದ್ರೋಹಿ ಸರ್ಕಾರಕ್ಕೆ ಧಿಕ್ಕಾರ ರೈತರ ಹೆಸರಿನಲ್ಲಿ ನಾಟಕವಾಡುವ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗುತ್ತಾ ಪೊಲೀಸ್ ವಾಹನ ಹತ್ತಿದರು
ಈ ಬಂಧನದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ ಕಿರಗಸೂರು ಶಂಕರ್ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅಂಬಳೆ ಮಹದೇವಸ್ವಾಮಿ ಬರಡನಪುರ ನಾಗರಾಜ್ , ಮಂಜುನಾಥ್ , ರವಿಕುಮಾರ್ ಪರಶಿವಮೂರ್ತಿ ವೀರೇಶ,ಕ್ರಿಷ್ಣಪ್ಪ ಹಾಗೂ ಮುಂತಾದ ರೈತರನ್ನು ಬಂಧಿಸಿದರು