ಮಧುಗಿರಿ: ಗ್ರಾಮಪಂಚಾಯತಿ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದ. ಇಬ್ಬರು ಅಭ್ಯರ್ಥಿಗಳು
ಮಧುಗಿರಿ ತಾಲ್ಲೂಕಿನ ಕುರುಬರ ಹೋಬಳಿ ಯ ಕೊಂಡವಾಡಿ ಗ್ರಾಮಪಂಚಾಯತಿಯ ಒಂದು ಸ್ಥಾನ ಮತ್ತು ಬೇಡತ್ತೂರು ಪಂಚಾಯತಿ ಯ ಒಂದು ಸ್ಥಾನ ರಾಜೀನಾಮೆ ಯಿಂದ ತೆರವಾಗಿದ್ದವು. ಈ ಎರಡು ಸ್ಥಾನಗಳಿಗೆ ಅ.28 ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಘೋಷಣೆಯಾಯಿತು.
ಕೊಂಡವಾಡಿ ಗ್ರಾಮ ಪಂಚಾಯಿತಿ
ಮಧುಗಿರಿ ತಾಲೂಕಿನ ಕುರುಬರ ಹೋಬಳಿ ಕೊಂಡವಾಡಿ ಗ್ರಾಮ ಪಂಚಾಯಿತಿ ಹುಣಸವಾಡಿ ಗ್ರಾಮ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿದ್ದವರು ನಿಧನ ಹೊಂದಿದ ಕಾರಣ ತೆರವಾಗಿದ್ದ ಹುಣಸವಾಡಿ ಕ್ಷೇತ್ರದ ಉಪಚುನಾವಣೆ ಅಕ್ಟೋಬರ್ 28 ರಂದು ನಡೆದಿತ್ತು.
28 ರಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು.ರಮಾನಂದ ಎಂಬ ಅಭ್ಯರ್ಥಿಯು 398 ಪಡೆದು ಜಯಶೀಲರಾದರು. ಮತ್ತೊಬ್ಬ ಅಭ್ಯರ್ಥಿಯಾದ ನಾಗರಾಜು ಎಂಬುವರು 288 ಮತಗಳನ್ನು ಪಡೆದರು.ಒಟ್ಟು ಚಲಾವಣೆಯಾದ ಮತಗಳು 695 ಆದರೆ 9 ಮತಗಳು ತಿರಸ್ಕೃತಗೊಂಡವು.
ಬೇಡತ್ತೂರು ಗ್ರಾಮ ಪಂಚಾಯತಿ
ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿ ಬೇಡತ್ತೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಡತ್ತೂರುಗ್ರಾಮದ ಒಂದು ಸ್ಥಾನ ಕ್ಕೆ ಇತ್ತೀಚೆಗೆ ಚುನಾವಣೆ ನಡೆದಿತ್ತು
ಚುನಾವಣಾ ಕಣದಲ್ಲಿ ಇಬ್ಬರು ಅಭ್ಯರ್ಥಿಗಳು ಇದ್ದರು, ಪ್ರಮೀಳಮ್ಮ299 ಮತಗಳನ್ನು ಪಡೆದು ಜಯಶೀಲರಾದರು.ಪರಾಜಿತ ಅಭ್ಯರ್ಥಿ ಕೇವಲ 82 ಮತಗಳನ್ನು ಮಾತ್ರ ಪಡೆದರು. ಒಟ್ಟು 377 ಮತಗಳು ಚಲಾವಣೆಯಾಗಿದ್ದವು.
ಚುನಾವಣಾ ಅಧಿಕಾರಿಗಳಾದ ತಹಸಿಲ್ದಾರ್ ಟಿ.ಜಿ .ಸುರೇಶ ಆಚಾರ್ ಫಲಿತಾಂಶ ಘೋಷಣೆ ಮಾಡಿದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.