IMG 20230623 WA0029

ಪಾವಗಡ: ತಾಲ್ಲೂಕು ಆಡಳಿತ ಸಂಪೂರ್ಣ ವಿಫಲ – ಸಚಿವರ ಮುಂದೆ ಆನಾವರಣ….!

DISTRICT NEWS ತುಮಕೂರು

ತಾಲೂಕು ಹಂತದ ಅಧಿಕಾರಿಗಳು ನಿಮ್ಮ ನಿಮ್ಮ ಕೆಲಸದಲ್ಲಿ ಹಿಂದೆ ಬಿದ್ದಿದ್ದೀರಾ. ಡಾಕ್ಟರ್ ಜಿ ಪರಮೇಶ್ವರ್.

ಪಾವಗಡ : ಪಾವಗಡ ತಾಲ್ಲೂಕಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಬಹಳಷ್ಟು ಅಧಿಕಾರಿಗಳು ತಮ್ಮ ಕೆಲಸಗಳನ್ನು ನಿರ್ವಹಿಸುಲ್ಲಿ ಸಂಪೂರ್ಣ ನಿಷ್ಕ್ರಿಯ ರಾಗಿದ್ದಾರೆ ಎಂಬ ಅಂಶ ಇಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ ಅವರ ಸಮ್ಮುಖದಲ್ಲಿ ನಡೆದ ಪ್ರಗತಿ ಪರಿಶೀಲನಾಸಭೆಯಲ್ಲಿ ಅನಾವರಣವಾಯಿತು.

ತಾಲೂಕು ಹಂತದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಪ್ರಗತಿಗೆ ಸಂಬಂಧಿಸಿದಂತೆ ಸರಿಯಾದ ಅಂಕಿ ಅಂಶಗಳನ್ನು ಹೊಂದುವುದರಲ್ಲಿ ವಿಫಲರಾಗಿದ್ದಾರೆ ಎಂದು. ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಗೃಹ ಮಂತ್ರಿಗಳಾದ ಡಾಕ್ಟರ್ ಜಿ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

IMG 20230623 WA0026

  ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು, ಆದರೆ ಅಧಿಕಾರಿಗಳು ತಮ್ಮ ಕೆಲಸದಲ್ಲಿ ಹಿಂದೆ ಬಿದ್ದಿದ್ದಾರೆ , ಹಾಗೂ ಸರಿಯಾದ ಅಂಕಿ ಅಂಶಗಳನ್ನು ಹೊಂದುವುದರಲ್ಲಿ ವಿಫಲರಾಗಿದ್ದಾರೆ ಎಂದು ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

 ಈವರೆಗೂ ತಹಶೀಲ್ದಾರ್ ಎಷ್ಟು ಹಾಸ್ಟೆಲ್ ಗೆ ಭೇಟಿ ನೀಡಿದ್ದಾರೆ, ಎಂಬುದರ ಅಂಕಿ ಅಂಶ, ಆಹಾರ ಇಲಾಖೆಯವರು ತಮ್ಮ ಇಲಾಖೆಯಲ್ಲಿರುವ ಎಷ್ಟು ಸಮಸ್ಯೆಗಳಿವೆ ಪರಿಹಾರ ಹುಡುಕಲಾಗಿದೆ, ಅರಣ್ಯ ಇಲಾಖೆಯವರು ಈ ಹಿಂದೆ ಎಷ್ಟು ಸಸಿಗಳನ್ನು , ನೆಟ್ಟಿದ್ದಾರೆ ಎಂಬುದರ ಅಂಕಿ ಅಂಶಗಳು, ತಾಲೂಕು ಪಂಚಾಯಿತಿ ಈ ಓ ಅವರು ತಾಲೂಕಿನಲ್ಲಿ ಯಾವ ಯಾವ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದರ ಸರಿಯಾದ ಅಂಕಿ ಅಂಶಗಳನ್ನು ಹೊಂದಿಲ್ಲವೆಂದು ಅಧಿಕಾರಿಗಳ ಕಾರ್ಯವೈಕರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾ ಹಂತದ ಮುಖ್ಯಸ್ಥರು ತಾಲೂಕಿಗೆ ಭೇಟಿ ನೀಡಿ ವಿವಿಧ ಇಲಾಖೆಗಳ ಪ್ರಗತಿಯನ್ನು ಸಮೀಕ್ಷೆ ನಡೆಸಿ ಸರಿಯಾದ ಅಂಕಿ ಅಂಶಗಳನ್ನು ಇಡುವಂತೆ ಆದೇಶಿಸಿದರು.

ಪಾವಗಡ ತಾಲೂಕಿನಲ್ಲಿ ಮೊದಲಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದ್ದು , 

ಫ್ಲೋರೈಡ್ ಅಂಶ ಹೆಚ್ಚಿದ್ದರಿಂದ, ಗರ್ಭಿಣಿ ಸ್ತ್ರೀಯರು ಅಂತಹ ನೀರನ್ನು ಕುಡಿದಾಗ ತಾಯಿ ಗರ್ಭದಲ್ಲಿರುವ ಮಕ್ಕಳಿಗೂ ಸಹ ಫ್ಲೋರೈಡ್ ಸೇರಿ, ಬೆನ್ನಿನ ಮೂಳೆ ಸಮಸ್ಯೆ, ಕೈ ಕಾಲುಗಳ ನೋವಿನ ಸಮಸ್ಯೆ ಉಂಟಾಗುತ್ತದೆ ಎಂದರು..

ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಶಾಸಕ ಹೆಚ್.ವಿ ವೆಂಕಟೇಶ್ ಮಾತನಾಡಿ.

ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಬಾರದೆಂದು, 

ಕುಡಿಯುವ ನೀರಿನ ಘಟಕ

 ಕೆಟ್ಟು ನಿಂತಾಗ ಅಧಿಕಾರಿಗಳು ಶೀಘ್ರವೇ ಅದನ್ನು ರಿಪೇರಿ ಮಾಡಿಸುವ ಕೆಲಸವಾಗಬೇಕು. ಎಂದರು.

ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲವೆಂದು ಸಾರ್ವಜನಿಕರಿಂದ ಹೆಚ್ಚಾಗಿ ದೂರುಗಳು ಬರುತ್ತಿವೆ ಎಂದರು.

ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

IMG 20230623 WA0025

ಶನಿಮಹಾತ್ಮ ದೇವಸ್ಥಾನಕ್ಕೆ ಭೇಟಿ.

ಪಟ್ಟಣದ ಸುಪ್ರಸಿದ್ಧ ಶನಿಮಹಾತ್ಮ ದೇವಸ್ಥಾನಕ್ಕೆ 

ಶುಕ್ರವಾರ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಗೃಹಸಚಿವರಾದ ಶ್ರೀ ಡಾ. ಜಿ ಪರಮೇಶ್ವರ್ ರವರು ಮತ್ತು ಸ್ಥಳೀಯ ಶಾಸಕರಾದ ಶ್ರೀ ಹೆಚ್ ವಿ ವೆಂಕಟೇಶ್ ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಶೇಖರ್ ಗೌಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮಿಯ ಆಶೀರ್ವಾದ ಪಡೆದರು.

ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಕುಮಾರ್ ರವರು, ಗ್ರಾಮಾಂತರ ಅಧ್ಯಕ್ಷ ರಾಮಾಂಜಿನಪ್ಪ ನವರು, ಯುವ ಮುಖಂಡ ನಾನಿ ರವರು ಸೇರಿ ಇನ್ನೂ ಮುಂತಾದ ಗಣ್ಯರು ಹಾಜರಿದ್ದರು..

IMG 20230623 WA0019

ಸೋಲಾರ್ ಪಾರ್ಕಿಗೆ ಬೇಟಿ.

ಏಷ್ಯಾದ ಅತ್ಯಂತ ಬೃಹತ್ ಸೋಲಾರ್ ಪಾರ್ಕ್ ಎಂಬ ಹೆಸರನ್ನು ಗಳಿಸಿರುವ ತಾಲೂಕಿನ ತಿರುಮಣಿ ಸೋಲಾರ್ ಪಾರ್ಕಿಗೆ ಗೃಹ ಸಚಿವರಾದ ಶ್ರೀ ಡಾ ಜಿ ಪರಮೇಶ್ವರ್, ಶಾಸಕರಾದ ಶ್ರೀ ಹೆಚ್ ವಿ ವೆಂಕಟೇಶ್, ನಿಕಟಪೂರ್ವ ಸಚಿವರಾದ ವೆಂಕಟರಮಣಪ್ಪ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಪ್ರಗತಿ ಪರಿಶೀಲಿಸಿದರು.

ಈ ವೇಳೆ ಭೇಟಿ ನೀಡಿದ ಗಣ್ಯರಿಗೆ KSPTCL ನ ಅಧಿಕಾರಿಗಳು ಸನ್ಮಾನಿಸಿ ಗೌರವ ನೀಡಿದರು.

ಬಿಜೆಪಿ ಸರ್ಕಾರದ ವೈಫಲ್ಯ….

ಕಳೆದ ಬಿಜೆಪಿ ಸರ್ಕಾರದಲ್ಲಿ ಅರಗ ಜ್ಞಾನೇಂದ್ರ ಅವರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು ಒಮ್ಮೆ ಪಾವಗಡ ತಾಲ್ಲೂಕಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ಮಾಡಿರಲಿಲ್ಲ. ಇದು ಒಂದು ರೀತಿ ತಾಲ್ಲೂಕು ಅಧಿಕಾರ ಗಳು ನಿಷ್ಕ್ರಿಯರಾಗಲು ಕಾರಣ . ಕಳೆದ ಸರ್ಕಾರದ ವೈಫಲ್ಯ ವೇ ಪಾವಗಡ ತಾಲ್ಲೂಕಿನ ಇಂದಿನ ಸ್ಥಿತಿ ಗೆ ಪ್ರಮುಖ ಕಾರಣ….!

ವರದಿ: ಶ್ರೀನಿವಾಸಲು.ಎ