IMG 20220917 WA0055

ಮಧುಗಿರಿ: ಪ್ರಧಾನಿ ನರೇಂದ್ರ ಮೋದಿ ರವರ 72ನೇ ಜನ್ಮದಿನ ಆಚರಣೆ…!

DISTRICT NEWS ತುಮಕೂರು

ಪ್ರಧಾನಿ ನರೇಂದ್ರ ಮೋದಿ ರವರ 72ನೇ ಜನ್ಮದಿನದ ಅಂಗವಾಗಿ ಮಧುಗಿರಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲುಗಳ ಕಿಟ್ಟು. ವಿತರಣಾ ಕಾರ್ಯಕ್ರಮ.

ಮಧುಗಿರಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ತಿರುವ ರೋಗಿಗಳಿಗೆ ಹಣ್ಣು ಹಂಪಲುಗಳ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನುಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ.ಕೆ .ಮಂಜುನಾಥ್ ರವರು ಮಾತನಾಡಿ ಪ್ರಧಾನಿಗಳು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಸಹ ನಾವೇ ಅಧಿಕಾರಕ್ಕೆ ಬರಲಿದ್ದೇವೆ ತಾವುಗಳೆಲ್ಲರೂ ಸೇರಿ ನಮಗೂ ಸಹ ಅಧಿಕಾರ ಕೊಟ್ಟಲ್ಲಿ ನಾವುಗಳು ಸಹ ಉತ್ತಮ ರೀತಿಯಲ್ಲಿ ಜನಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಮತ್ತು ಮುಂದೆ ಸಹ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ತಿಳಿದರು.

IMG 20220917 WA0057

ಈ ಸಂದರ್ಭದಲ್ಲಿ ಮಧುಗಿರಿ ಮಂಡಲ ಅಧ್ಯಕ್ಷರಾದ ಪಿಎನ್ ನರಸಿಂಹಮೂರ್ತಿ. ವೈದ್ಯಾಧಿಕಾರಿ ಡಾಕ್ಟರ್
ಮಹೇಶ್ ಸಿಂಗ್. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯಣ್ಣ .ರವಿ .ಪಾವಗಡ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ. ಸುರೇಶ್. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ್. ನಾಗೇಂದ್ರಪ್ಪ. ಹಿರಿಯ ಮುಖಂಡರಾದ ನಾಗರಾಜಪ್ಪ. ತಾಲೂಕು ಆರೋಗ್ಯ ರಕ್ಷಾ ಸಮಿತಿ ನಾಮಿನಿ ನಿರ್ದೇಶಕರಾದ ರವಿ.ಆರ್. ನರಸಿಂಹ ರೆಡ್ಡಿ. ಹಾಗೂ ಜಿಲ್ಲಾ ಪದಾಧಿಕಾರಿಗಳು ಮಂಡಲ ಪದಾಧಿಕಾರಿಗಳು ವಿವಿಧ ಮೋರ್ಚಾ ಪದಾಧಿಕಾರಿಗಳು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.