IMG 20230623 WA0014

ಬೆಂಗಳೂರು:ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯದ ಅಭಿಯಾನ…!

BUSINESS

ಪಿಅಂಡ್‌ಜಿ ವ್ಹಿಸ್ಪರ್ ಮತ್ತು ಯುನೆಸ್ಕೊ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯದ ಅಭಿಯಾನ

ಬೆಂಗಳೂರು, ಜೂನ್ ೨೩, ೨೦೨೩: ಭಾರತದಲ್ಲಿ ೫ ಬಾಲಕಿಯರಲ್ಲಿ ೧ ಮಂದಿ ಋತುಚಕ್ರದ ಶಿಕ್ಷಣ ಮತ್ತು ಉತ್ಪನ್ನಗಳ ಕೊರತೆಯಿಂದ ಶಾಲೆಯನ್ನು ತ್ಯಜಿಸುತ್ತಿದ್ದಾರೆ. ತಾಯಂದಿರು ಬಾಲಕಿಯರ ಮೊದಲ ಶಿಕ್ಷಕರಾಗಿದ್ದು ೧೦ ಮಂದಿ ತಾಯಂದಿರಲ್ಲಿ ೭ ಮಂದಿ ಋತುಚಕ್ರದ ವಿಜ್ಞಾನವನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ ಮತ್ತು ಅದನ್ನು `ಕೊಳಕು ಅಥವಾ ಅಶುದ್ಧ’ ಎಂದು ಪರಿಗಣಿಸುತ್ತಾರೆ. ವ್ಹಿಸ್ಪರ್ ಕಳೆದ ೩೦ ವರ್ಷಗಳಿಗೂ ಮೇಲ್ಪಟ್ಟು ಋತುಚಕ್ರದ ಶಿಕ್ಷಣವನ್ನು ನೀಡುತ್ತಿದೆ, ಉಚಿತ ಪ್ಯಾಡ್‌ಗಳನ್ನು ವಿತರಿಸುತ್ತಿದೆ ಮತ್ತು ಋತುಚಕ್ರಕ್ಕೆ ಸಂಬAಧಿಸಿದ ಮಿಥ್ಯೆಗಳು ಮತ್ತು ಕಳಂಕಗಳನ್ನು ನಿವಾರಿಸುತ್ತಿದೆ. ಭಾರತದಲ್ಲಿ ೧೦ ಕೋಟಿಗೂ ಹೆಚ್ಚು ಬಾಲಕಿಯರು ಮತ್ತು ತಾಯಂದಿರಿಗೆ ಮಾಹಿತಿ ನೀಡಿದೆ ಮತ್ತು ಪ್ಯಾಡ್‌ಗಳನ್ನು ವಿತರಿಸಿದೆ.

ಋತುಚಕ್ರದ ಶಿಕ್ಷಣ ಮತ್ತು ನೈರ್ಮಲ್ಯದ ನಿರ್ವಹಣೆಗೆ ಪಿಅಂಡ್‌ಜಿ ವ್ಹಿಸ್ಪರ್ ಮತ್ತು ಯುನೆಸ್ಕೊ ಇಂಡಿಯಾ ಕೈ ಜೋಡಿಸಿದ್ದು ಅಮೃತ ವಿಶ್ವ ವಿದ್ಯಾಪೀಠಂ ಕಾರ್ಯಕ್ರಮ ಪಾಲುದಾರರ ಬೆಂಬಲ ಪಡೆದಿದ್ದು ಮಹಿಳೆಯರು ಹಾಗೂ ಶಾಲೆ ಕಲಿಯುತ್ತಿರುವ ಬಾಲಕಿಯರಲ್ಲಿ ಅರಿವನ್ನು ಮೂಡಿಸುತ್ತಿದೆ. ಈ ಕಾರ್ಯಕ್ರಮವನ್ನು ವ್ಹಿಸ್ಪರ್‌ನೊಂದಿಗೆ ಯುನೆಸ್ಕೊ ಇಂಡಿಯಾ ಅಭಿವೃದ್ಧಿಪಡಿಸಿದ ಐದು ಬೋಧನೆಯ ವಿಧಾನಗಳನ್ನು ಪರಿಚಯಿಸಲು ಆಯೋಜಿಸಲಾಗಿದ್ದು ಈ ಬೋಧನಾ ವಿಧಾನಗಳು ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯನ್ನು ಶಿಕ್ಷಕರು, ಯುವ ವಯಸ್ಕರು, ವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ಸಾಧನಗಳಾಗಿದ್ದು ಲಿಂಗ ಮತ್ತು ಪೌಷ್ಠಿಕತೆಗೆ ಆದ್ಯತೆ ನೀಡಿದೆ.

IMG 20230623 115352

“ಸ್ಪಾಟ್‌ಲೈಟ್ ರೆಡ್” ಎಂಬ ಶೀರ್ಷಿಕೆ ಹೊಂದಿರುವ ಬೋಧನೆ-ಕಲಿಕೆಯ ವಿಧಾನಗಳು ಕಲಿಕಾರ್ಥಿಗಳು, ಶಿಕ್ಷಕರು, ಮೆನ್ಸ್ಟ್ರಿಯೇಟರ್‌ಗಳು ಮತ್ತು ಸಮುದಾಯ ನಾಯಕರಿಗೆ ಸಮಗ್ರ ಸಂಪನ್ಮೂಲಗಳು ಮತ್ತು ಕಾರ್ಯತಂತ್ರಗಳನ್ನು ನೀಡುತ್ತದೆ. ಇದರ ಉದ್ದೇಶ ಋತುಚಕ್ರದ ನಿರ್ವಹಣೆಗೆ ಸಂಬAಧಿಸಿದAತೆ ಅರ್ಥ ಮಾಡಿಕೊಳ್ಳುವುದು ಮತ್ತು ಕೌಶಲ್ಯಗಳನ್ನು ಹಾಗೂ ಅದರ ಸಾಮಾಜಿಕ ಪರಿಣಾಮ ಕುರಿತು ತಿಳಿಯುವುದು. ಈ ವಿಧಾನಗಳು ಅಂಗವಿಕಲತೆ ಹೊಂದಿರುವ ಬಾಲಕಿಯರು ಒಳಗೊಂಡು ವೈವಿಧ್ಯಮಯ ಹಿನ್ನೆಲೆಯ ಹದಿವಯಸ್ಕರನ್ನು ಋತುಚಕ್ರ ಮತ್ತು ಮೈ ನೆರೆಯುವಿಕೆ ಕುರಿತಾದ ಶಿಕ್ಷಣದ ಮೂಲಕ ಸಬಲೀಕರಿಸುವುದಾಗಿದೆ. ಅಲ್ಲದೆ ಶಾಲೆ, ರಾಜ್ಯ ಮತ್ತು ರಾಷ್ಟಿçÃಯ ಮಟ್ಟಗಳಲ್ಲಿ ಮಧ್ಯಪ್ರವೇಶದ ಮೂಲಕ ಈ ಹದಿವಯಸ್ಕರಿಗೆ ಅವರ ಶಿಕ್ಷಣ ಮುಂದುವರಿಸಲು ಬೆಂಬಲದ ವಾತಾವರಣ ಸೃಷ್ಟಿಸುವುದಾಗಿದೆ.
ಪಿಅಂಡ್‌ಜಿ ವ್ಹಿಸ್ಪರ್ ಮತ್ತು ಯುನೆಸ್ಕೊ ಇಂಡಿಯಾ ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯ ರಾಷ್ಟಿçÃಯ ಸಮೀಕ್ಷೆ ಮತ್ತು ಅಂತರದ ವಿಶ್ಲೇಷಣೆಯನ್ನು #ಕೀಪ್‌ಗರ್ಲ್ಸ್ಸ್ಕೂಲ್ ಅಭಿಯಾನದ ಮೂಲಕ ಪ್ರಾರಂಭಿಸಿದೆ. ಈ ವರದಿಯು ನಗರದ ಬಡ ಪ್ರದೇಶಗಳಲ್ಲಿ ಶೇ.೫೦ರಷ್ಟು ಹದಿವಯಸ್ಸಿನ ಬಾಲಕಿಯರಿಗೆ(೧೫ರಿಂದ ೧೯ ವಯಸ್ಸು) ಅವರ ಋತುಚಕ್ರವನ್ನು ನಿರ್ವಹಿಸಲು ನೈರ್ಮಲ್ಯಯುಕ್ತ ವಿಧಾನಗಳ ಲಭ್ಯತೆ ಇಲ್ಲ. ೨೨೦ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರಲ್ಲಿ ವಿದ್ಯಾರ್ಥಿನಿಯರು, ವಿವಿಧ ಶಾಲೆಗಳ ಶಿಕ್ಷಕರು ಮತ್ತು ನಾಗರಿಕ ಸಮಾಜದ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ಮುಖ್ಯ ಅತಿಥಿಯಾಗಿ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ, ಐಎಎಸ್; ಖ್ಯಾತ ನಟಿ ಶ್ರೀಮತಿ ರೂಪಾಲಿ ಗಂಗೂಲಿ; ತೃತೀಯ ಲಿಂಗಿಗಳ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕೆöÊ ಪದ್ಮಶಾಲಿ; ಯುನೆಸ್ಕೊ ಇಂಡಿಯಾದ ಸೀನಿಯರ್ ಜೆಂಡರ್ ಸ್ಪೆಷಲಿಸ್ಟ್ ಡಾ.ಹುಮಾ ಮಸೂದ್ ಮತ್ತು ವ್ಹಿಸ್ಪರ್ ಪಿ ಅಂಡ್ ಜಿಯ ಕಮ್ಯುನಿಕೇಷನ್ ಹೆಡ್ ಶ್ರೀಮತಿ ಕೃತಿ ದೇಸಾಯಿ; ಬೆಂಗಳೂರಿನ ಅಮೃತ ವಿಶ್ವ ವಿದ್ಯಾಪೀಠಂನ ಸ್ಕೂಲ್ ಆಫ್ ಬಿಸಿನೆಸ್‌ನ ಕ್ಯಾಂಪಸ್ ಡೈರೆಕ್ಟರ್ ಡಾ. ಮಜೋನ್ ಪಿ. ದೇಸಾಯಿ, ಬೆಂಗಳೂರಿನ ಅಮೃತ ವಿಶ್ವ ವಿದ್ಯಾಪೀಠಂನ ಸ್ಕೂಲ್ ಆಫ್ ಎಂಜಿನಿಯರಿAಗ್ ಪ್ರಾಂಶುಪಾಲ ಡಾ. ಶ್ರೀರಾಮ್ ದೇವನಾಥನ್ ಉಪಸ್ಥಿತರಿದ್ದರು.

ಈ ವ್ಹಿಸ್ಪರ್‌ನ ಹೆಣ್ಣುಮಕ್ಕಳನ್ನು ಶಾಲೆಯಲ್ಲಿ ಉಳಿಸಿ ಅಭಿಯಾನಕ್ಕೆ ಬೆಂಬಲಿಸಿದ ಖ್ಯಾತ ನಟಿ ರೂಪಾಲಿ ಗಂಗೂಲಿ, “ಇಂದು ೫ರಲ್ಲಿ ೧ ಬಾಲಕಿಯರು ಋತುಚಕ್ರದ ಶಿಕ್ಷಣ ಮತ್ತು ಉತ್ಪನ್ನಗಳ ಕೊರತೆಯಿಂದ ಶಾಲೆಯಿಂದ ದೂರ ಉಳಿಯುತ್ತಿದ್ದಾರೆ. ಆಘಾತಕಾರಿ ಅಂಶವೆAದರೆ ಶೇ.೭೦ರಷ್ಟು ಬಾಲಕಿಯರಿಗೆ ಅವರು ಮೊದಲು ಅನುಭವ ಪಡೆದಾಗ ಅದು ಋತುಚಕ್ರ ಎಂಬ ಕುರಿತು ಅರಿವೇ ಇರುವುದಿಲ್ಲ. ಹೆಣ್ಣುಮಕ್ಕಳ ಆತ್ಮೀಯ ಮಿತ್ರರಾದ ತಾಯಂದಿರು, ಶಿಕ್ಷಕರಲ್ಲೂ ಋತುಚಕ್ರದ ವಿಜ್ಞಾನದ ಕುರಿತು ಅರಿವಿನ ಕೊರತೆಯಿದೆ. ವ್ಹಿಸ್ಪರ್ ಮತ್ತು ಯುನೆಸ್ಕೊ ಜೊತೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಗ್ರ ಬೋಧನಾ ವಿಧಾನಗಳನ್ನು ಅನಾವರಣಗೊಳಿಸಲು ಬಹಳ ಹೆಮ್ಮೆಯಾಗುತ್ತಿದೆ. ನಾವೆಲ್ಲರೂ ಬದಲಾವಣೆ ತರಬಲ್ಲವರು ಮತ್ತು ಈ ದೇಶದ ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗುವಂತೆ ಮತ್ತು ಅವರ ಮೊದಲ ಋತುಚಕ್ರವನ್ನು ಯಾವುದೇ ಗೊಂದಲ ಅಥವಾ ಮುಜುಗರ ಇಲ್ಲದಂತೆ ಅನುಭವಿಸಲು ನಮ್ಮದೇ ಸಣ್ಣ ವಿಧಾನದಲ್ಲಿ ಕೊಡುಗೆ ನೀಡಬೇಕಾಗಿದೆ. ಅವರು ವಿಶ್ವಾಸ ಮತ್ತು ಅನುಕೂಲದಲ್ಲಿ ಜೀವಿಸಬೇಕು, ಆಡಬೇಕು ಮತ್ತು ಅಧ್ಯಯನ ಮಾಡಬಲ್ಲವರಾಗಬೇಕು. ಮುಟ್ಟಿನ ನೈರ್ಮಲ್ಯ ಮತ್ತು ಆರೋಗ್ಯದ ಕುರಿತು ಅರಿವನ್ನು ಮೂಡಿಸುವ ಅವಕಾಶ ಲಭಿಸಿದ್ದಕ್ಕೆ ಹಾಗೂ ಚೇಂಜ್‌ಮೇಕರ್ ಆಗಿರುವುದಕ್ಕೆ ಅಪಾರ ಸಂತೋಷ ಹೊಂದಿದ್ದೇನೆ” ಎಂದರು.

IMG 20230623 114328

ಮುಖ್ಯ ಅತಿಥಿ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ಶ್ರೀಮತಿ ಬಿ.ಬಿ. ಕಾವೇರಿ, “ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯದ ನಿರ್ವಹಣೆಯು ನಮ್ಮ ಗಮನ ಕೋರುವ ಅತ್ಯಂತ ಪ್ರಮುಖ ವಿಷಯವಾಗಿದೆ. ಮಹಿಳೆಯರನ್ನು ಬಹಿಷ್ಕರಿಸುವ ಮತ್ತು ತಾರತಮ್ಯವನ್ನು ತೋರುವುದನ್ನು ಪ್ರಶ್ನಿಸಬೇಕು. ಬಾಲಕಿಯರಿಗೆ ಅಡೆತಡೆಗಳನ್ನು ಮೀರಲು ಸನ್ನದ್ಧರಾಗಿಸಬೇಕು ಮತ್ತು ಶಾಲೆಗಳಲ್ಲಿ ಸ್ವಚ್ಛ ಸೌಲಭ್ಯಗಳನ್ನು ಒದಗಿಸಬೇಕು. ಸ್ಯಾನಿಟರಿ ಪ್ಯಾಡ್‌ಗಳ ಲಭ್ಯತೆ ಮತ್ತು ಸ್ವಚ್ಛ ನೀರು ಅತ್ಯಂತ ಅಗತ್ಯವಾಗಿದೆ. ಪೌಷ್ಠಿಕತೆಯನ್ನು ಆದ್ಯತೆಯಾಗಿಸೋಣ ಮತ್ತು ಶಾಲೆ ತ್ಯಜಿಸುವ ಹಾಗೂ ಬಾಲ್ಯ ವಿವಾಹಗಳ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸೋಣ. ನಾವೆಲ್ಲರೂ ಒಗ್ಗೂಡಬೇಕು ಮತ್ತು ವಿಶೇಷ ಅಗತ್ಯವುಳ್ಳವರೂ ಅಲ್ಲದೆ ತೃತೀಯ ಲಿಂಗಿಗಳನ್ನು ಒಳಗೊಂಡು ಎಲ್ಲ ಮಕ್ಕಳನ್ನೂ ಒಳಗೊಳ್ಳಬೇಕು. ಜ್ಞಾನ ಪಾಲುದಾರರೊಂದಿಗೆ ಸಹಯೋಗವು ಬಹಳ ಮುಖ್ಯವಾಗಿದೆ ಮತ್ತು ನಾವು ಮೌನ ಮುರಿಯಬೇಕು ಮತ್ತು ಋತುಚಕ್ರದ ಸುತ್ತಲೂ ಇರುವ ನಿರ್ಬಂಧವನ್ನು ನಿವಾರಿಸಬೇಕು. ಎಲ್ಲರೂ ಒಪ್ಪಿಕೊಳ್ಳುವ ಮತ್ತು ಸಮಾನತೆಯನ್ನು ಹೊಂದಬೇಕು. ಒಟ್ಟಿಗೆ ನಾವೆಲ್ಲರೂ ಪ್ರತಿಯೊಬ್ಬರನ್ನೂ ಘನತೆ ಮತ್ತು ಗೌರವದಿಂದ ನೋಡುವ ಸಮಾಜ ನಿರ್ಮಿಸೋಣ” ಎಂದರು.

ನವದೆಹಲಿಯ ಯುನೆಸ್ಕೊ ಮಲ್ಟಿಸೆಕ್ಟೊರಲ್ ರೀಜನಲ್ ಕಛೇರಿಯಲ್ಲಿ ಜೆಂಡರ್ ಸ್ಪೆಷಲಿಸ್ಟ್ ಆಗಿರುವ ಡಾ.ಹುಮಾ ಮಸೂದ್, “ಸ್ಪಾಟ್‌ಲೈಟ್ ರೆಡ್-ಯುನೆಸ್ಕೊ ಮತ್ತು ಪಿ ಅಂಡ್ ಜಿ ವ್ಹಿಸ್ಪರ್ ಉಪಕ್ರಮವಾಗಿದ್ದು #ಕೀಪ್‌ಗರ್ಲ್ಸ್ಇನ್‌ಸ್ಕೂಲ್ ಶಾಲೆಗಳಲ್ಲಿ ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯ ತುರ್ತು ಅಗತ್ಯವನ್ನು ಪೂರೈಸುತ್ತದೆ. ೨೩ ಮಿಲಿಯನ್ ಬಾಲಕಿಯರು ವಾರ್ಷಿಕವಾಗಿ ಸೂಕ್ತ ಸೌಲಭ್ಯಗಳು ಮತ್ತು ಮಾಹಿತಿ ಕೊರತೆಯಿಂದ ಶಾಲೆಯನ್ನು ತ್ಯಜಿಸುತ್ತಿದ್ದು ನಾವು ಪ್ರತಿ ಕಲಿಕಾರ್ಥಿ ಮತ್ತು ಮೆನ್ಸ್ಟ್ರುಯೇಟರ್ ಅವರಿಗೆ ಶಿಕ್ಷಣ ಮತ್ತು ಪ್ರತಿಪಾದನೆಯನ್ನು ಸಂಯೋಜಿಸಿ ಸಬಲೀಕರಿಸುತ್ತೇವೆ” ಎಂದರು.